For Quick Alerts
ALLOW NOTIFICATIONS  
For Daily Alerts
 

Amit Mishra: 25 ವರ್ಷದ ಕ್ರಿಕೆಟ್‌ ಜೀವನಕ್ಕೆ ವಿದಾಯ ಹೇಳಿದ ಅಮಿತ್ ಮಿಶ್ರಾ

ಭಾರತದ ಹಿರಿಯ ಸ್ಪಿನ್ ಬೌಲರ್‌ ಅಮಿತ್ ಮಿಶ್ರಾ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಮಿಶ್ರಾ ಅವರು 2003 ರಿಂದ 2017ರ ವರೆಗೆ ಭಾರತದ ಪರ ಮೂರು ಫಾರ್ಮೆಟ್‌ಗಳಲ್ಲಿ ದೇಶವನ್ನು ಪ್ರತಿನಿಧಿಸಿದ್ದರೆ. ಇವರು 22 ಟೆಸ್ಟ್‌, 36 ಏಕದಿನ ಹಾಗೂ 10 ಟಿ20 ಪಂದ್ಯಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇವರು ಐಪಿಎಲ್‌ನಲ್ಲಿ ಆಡಿ ತಮ್ಮ ಛಾಪು ಮೂಡಿಸಿದ್ದಾರೆ.

ಅಮಿತ್‌ ಮಿಶ್ರಾ ಐಪಿಎಲ್‌ನಲ್ಲಿ ನಾಲ್ಕು ಫ್ರಾಂಚೈಸಿ ಪರ ಆಡಿದ ಆಟಗಾರ. ಡೆಲ್ಲಿ ಡೆರ್‌ಡೆವಿಲ್ಸ್‌, ಡೆಕ್ಕನ್ ಚಾರ್ಜಸ್‌, ಸನ್‌ರೈಸರ್ಸ್‌ ಹೈದರಾಬಾದ್, ಎಲ್‌ಎಸ್‌ಜಿ ಪರ ಆಡಿದ್ದಾರೆ. ಇವರು 2008 ರಿಂದ 2024ರ ವರೆಗೆ ಎಲ್ಲ ಆವೃತ್ತಿಗಳನ್ನು ಆಡಿದ ಅನುಭವ ಹೊಂದಿದ್ದಾರೆ. ಇವರು ಐಪಿಎಲ್‌ನಲ್ಲಿ ಆಡಿದ 162 ಪಂದ್ಯಗಳಲ್ಲಿ 174 ವಿಕೆಟ್‌ಗಳನ್ನು ಪಡೆದಿದ್ದಾರೆ. ಮಿಶ್ರಾ 2008, 2011, 2013ರಲ್ಲಿ ಹ್ಯಾಟ್ರಿಕ್‌ ಪಡೆದು ಸಾಧನೆ ಮಾಡಿದ್ದಾರೆ.

Amit Mishra Announces Retirement from All Forms of Cricket A Look at the Career of a Spin Legend

ಅಮಿತ್ ಮಿಶ್ರಾ ತಮ್ಮ ನಿವೃತ್ತಿಯ ಬಗ್ಗೆ ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದಾರೆ. 25 ವರ್ಷಗಳ ನನ್ನ ಕ್ರಿಕೆಟ್ ಜೀವನ ಸ್ಮರಣೀಯ. ಈ ಅವಧಿಯಲ್ಲಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಬಿಸಿಸಿಐ, ಹರಿಯಾಣ ಕ್ರಿಕೆಟ್ ಅಸೋಸಿಯೇಷನ್, ನನ್ನ ತಂಡದ ಸದಸ್ಯರು, ಸಹಾಯಕ ಸಿಬ್ಬಂದಿಗೆ ನಾನು ತುಂಬಾ ಕೃತಜ್ಞನಾಗಿದ್ದೇನೆ. ಕ್ರಿಕೆಟ್ ನನಗೆ ಅಸಂಖ್ಯಾತ ನೆನಪುಗಳನ್ನು ನೀಡಿದೆ. ನನ್ನನ್ನು ಬೆಂಬಲಿಸಿದ ಅಭಿಮಾನಿಗಳೂರು ಕೃತಜ್ಞನಾಗಿದ್ದೇನೆ ಎಂದು ತಿಳಿಸಿದ್ದಾರೆ.

ಅಮಿತ್ ಮಿಶ್ರಾ 2000-01ರಲ್ಲಿ ಹರಿಯಾಣ ಪರ ಪ್ರಥಮ ದರ್ಜೆ ಕ್ರಿಕೆಟ್‌ ಆಡಿದರು. ಇವರು ದೇಶೀಯ ಟೂರ್ನಿಯಲ್ಲಿ ತಮ್ಮ ಕ್ಲಾಸಿಕ್‌ ಲೆಗ್‌ ಬ್ರೇಕ್ ಹಾಗೂ ಟರ್ನ್‌ಗಳಿಂದ ಗಮನ ಸೆಳೆದರು. ಇವರು ಈ ಮಧ್ಯೆ ಗೂಗ್ಲಿಗಳನ್ನು ಎಸೆದು ಕಾಡಿದ್ದರು. ಇವರು ದಕ್ಷಿಣ ಆಫ್ರಿಕಾ ವಿರುದ್ಧ ಢಾಕಾದಲ್ಲಿ ತಮ್ಮ ಮೊದಲ ಪಂದ್ಯವನ್ನು 2003ರಲ್ಲಿ ಆಡಿದ್ದರು. ಹರ್ಭಜನ್‌ ಸಿಂಗ್‌ ಹಾಗೂ ಅನಿಲ್‌ ಕುಂಬ್ಳೆ ಸ್ಪಿನ್ನರ್ ಅವರಂತಹ ಸ್ಟಾರ್‌ ಬೌಲರ್‌ಗಳ ಹೊರತಾಗಿಯೂ ಇವರಿಗೆ 2008ರಲ್ಲಿ ಟೆಸ್ಟ್‌ನಲ್ಲಿ ಪದಾರ್ಪಣೆ ಮಾಡುವ ಅವಕಾಶ ಪಡೆದರು. ಕುಂಬ್ಳೆ ಅವರು ಗಾಯಕ್ಕೆ ತುತ್ತಾಗಿದ್ದರಿಂದ ಮಿಶ್ರಾಗೆ ಆಡುವ ಅವಕಾಶ ಸಿಕ್ಕಿತ್ತು.

Amit Mishra Announces Retirement from All Forms of Cricket A Look at the Career of a Spin Legend

ಮಿಶ್ರಾ ಸಾಧನೆ

ಮಿಶ್ರಾ ಅವರು ಪದಾರ್ಪಣೆ ಮಾಡಿದ ಮೊದಲ ಪಂದ್ಯದಲ್ಲಿ ಐದು ವಿಕೆಟ್ ಪಡೆದರು. ಆದರೆ ಇವರಿಗೆ ಅತಿ ಹೆಚ್ಚು ಪಂದ್ಯಗಳನ್ನು ಆಡುವ ಅವಕಾಶ ಲಭಿಸಲಿಲ್ಲ. ಇವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅವಕಾಶಗಳು ಸಿಗದೇ ಇದ್ದಾಗ ಇವರು ಹರಿಯಾಣ ಹಾಗೂ ಐಪಿಎಲ್‌ನಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಇವರು 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಹಾಗೂ 2014ರಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಆಡಿದ ಅನುಭವ ಹೊಂದಿದ್ದಾರೆ. ಅಮಿತ್ ಮಿಶ್ರಾ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 535 ವಿಕೆಟ್‌ ಪಡೆದಿದ್ದಾರೆ. ಲೀಸ್ಟ್‌ "ಎ" ಪಂದ್ಯಗಳಲ್ಲಿ 252 ವಿಕೆಟ್‌ ಪಡೆದಿದ್ದಾರೆ. ಇನ್ನು ದೇಶೀಯ ಟಿ20 ಕ್ರಿಕೆಟ್‌ನಲ್ಲಿ ಇವರು 285 ವಿಕೆಟ್ ಕಬಳಿಸಿದ್ದಾರೆ. ಅಮಿತ್ ಮಿಶ್ರಾ ಟೆಸ್ಟ್‌ನಲ್ಲಿ 76, ಏಕದಿನ ಕ್ರಿಕೆಟ್‌ನಲ್ಲಿ 64, ಟಿ20 ಕ್ರಿಕೆಟ್‌ನಲ್ಲಿ 16 ವಿಕೆಟ್‌ ಕಬಳಿಸಿದ್ದಾರೆ.

Story first published: Thursday, September 4, 2025, 15:17 [IST]
Other articles published on Sep 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+