ಮಹಿಳೆ ಮೇಲೆ ಹಲ್ಲೆ: ಸ್ಪಿನ್ನರ್ ಅಮಿತ್ ಮಿಶ್ರಾ ವಿರುದ್ಧ ಎಫ್ಐಆರ್
ಬೆಂಗಳೂರು, ಅ.20: ಭಾರತ ತಂಡದ ಲೆಗ್ ಸ್ಪಿನ್ನರ್ ಅಮಿತ್ ಮಿಶ್ರಾ ಅವರ ವಿರುದ್ಧ ಮಹಿಳೆ ಮೇಲೆ ಹಲ್ಲೆ ಮಾಡಿದ ಆರೋಪ ಹೊರೆಸಲಾಗಿದೆ. ಅಮಿತ್ ಅವರು ಗೆಳತಿ ವಂದನಾ ಅವರ ಮೇಲೆ ಬೆಂಗಳೂರಿನ ಹೋಟೆಲ್ ನಲ್ಲಿ ಹಲ್ಲೆ ಮಾಡಿದ್ದು ಈ ಬಗ್ಗೆ ಅಶೋಕ್ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಎಫ್ ಐಆರ್ ಹಾಕಿದ್ದಾರೆ.
ಬಾಲಿವುಡ್ ನಿರ್ಮಾಪಕಿ ವಂದನಾ ಅವರು ನೀಡಿರುವ ದೂರು ಆಧಾರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಿಶ್ರಾ ಅವರನ್ನು ತನಿಖಾಧಿಕಾರಿಗಳ ಮುಂದೆ ಏಳು ದಿನದೊಳಗಾಗಿ ಖುದ್ದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಜಾರಿ ಮಾಡಲಾಗಿದೆ. [ಟೆಸ್ಟ್ ತಂಡ ಪ್ರಕಟ: ಜಡೇಜ ಇನ್, ಹರ್ಭಜನ್ ಸಿಂಗ್ ಔಟ್]

ಈ ಬಗ್ಗೆ ವಿವರಣೆಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಗೂ ಕಳಿಸಲಾಗಿದೆ ಎಂದು ಬೆಂಗಳೂರು ಸೆಂಟ್ರಲ್ ವಿಭಾಗದ ಡೆಪ್ಯುಟಿ ಕಮಿಷನರ್ ಆಫ್ ಪೊಲೀಸ್ (ಡಿಸಿಪಿ) ಸಂದೀಪ್ ಪಾಟೀಲ್ ಅವರು ಟಿವಿ ಮಾಧ್ಯಮದ ಜೊತೆ ಮಾತನಾಡುತ್ತಾ ತಿಳಿಸಿದರು.
ಘಟನೆ ಹಿನ್ನಲೆ: ದಕ್ಷಿಣ ಆಫ್ರಿಕಾದ ಟೂರ್ನಿಗೆ ಆಯ್ಕೆಯಾಗುವುದಕ್ಕೂ ಮುನ್ನಾ ಬೆಂಗಳೂರಿನ ಎನ್ ಸಿಎಯಲ್ಲಿ ಅಭ್ಯಾಸಕ್ಕೆ ಅಮಿತ್ ಮಿಶ್ರಾ ಬಂದಿದ್ದರು. ಈ ವೇಳೆ ಬೆಂಗಳೂರಿನ ರೆಡಿಡೆನ್ಸಿಯಲ್ಲಿರುವ ರಿಟ್ಜ್ ಕಾರ್ಲಟನ್ ಹೊಟೇಲ್ ನಲ್ಲಿ ಮಿಶ್ರಾ ಹಾಗೂ ಅವರ ಗೆಳತಿ ವಂದನಾ ಇಬ್ಬರು ತಂಗಿದ್ದಾರೆ. ಮಿಶ್ರಾ ಹಾಗೂ ವಂದನಾ ನಡುವೆ ಯಾವುದೋ ವಿಷಯಕ್ಕೆ ಜಗಳವಾಗಿದೆ.
ಮಾತಿಗೆ ಮಾತು ಬೆಳೆದು ಮಿಶ್ರಾ ಅವರು ಟೀ ಕೆಟಲ್ ನಿಂದ ವಂದನಾ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಅಮಿತ್ ಮಿಶ್ರಾ ವಿರುದ್ಧ ಐಪಿಸಿ ಸೆಕ್ಷನ್ 323, 324, 354ರ ಅಡಿಯಲ್ಲೇ ಅಶೋಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.
32 ವರ್ಷ ವಯಸ್ಸಿನ ಮಿಶ್ರಾ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುತ್ತಿದ್ದು, ಟೆಸ್ಟ್ ತಂಡಕ್ಕೂ ಆಯ್ಕೆಯಾಗಿದ್ದಾರೆ. (ಒನ್ ಇಂಡಿಯಾ ಸುದ್ದಿ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications