T20 world cup 2024: ಯುಎಸ್‌ಎ, ದಕ್ಷಿಣ ಆಫ್ರಿಕಾ ತಂಡಗಳಿಗೆ ಅಮುಲ್ ಪ್ರಾಯೋಜಕತ್ವ
ವಿಶ್ವವೇ ಕುತೂಹಲದಿಂದ ಕಾಯುತ್ತಿರುವ 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಎರಡು ಹಾಲಿನ ಒಕ್ಕೂಟಗಳು ಮಹತ್ವದ ಹೆಜ್ಜೆ ಇಟ್ಟಿವೆ. ಈಗಾಗಲೇ ಕರ್ನಾಟಕದ ಹೆಮ್ಮೆಯ ಹಾಲಿನ ಬ್ರ್ಯಾಂಡ್‌ಯಾದ ನಂದಿನಿ ಸ್ಕಾಟ್ಲೆಂಡ್ ಮತ್ತು ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ಟಿ20 ವಿಶ್ವಕಪ್‌ನಲ್ಲಿ ಪ್ರಾಯೋಜಕತ್ವ ವಹಿಸಿಕೊಂಡಿದೆ.
ಅದರಂತೆ ಅಮುಲ್ ಕೂಡ ಯುಎಸ್‌ಎ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ಪ್ರಾಯೋಜಕತ್ವ ವಹಿಸಿದೆ. ಈ ಬಗ್ಗೆ ಆಯಾ ತಂಡಗಳ ಕ್ರಿಕೆಟ್ ಮಂಡಳಿಗಳು ಮಾಹಿತಿ ತಿಳಿಸಿವೆ. ಜೂನ್ 1 ರಿಂದ ಆರಂಭವಾಗುತ್ತಿರುವ ಈ ಮೆಗಾ ಟೂರ್ನಿಯಲ್ಲಿ ಆತೀಥೆಯ ಯುಎಸ್‌ಎ ತಂಡ ತಮ್ಮ ಪಾದಾರ್ಪಣೆ ಪಂದ್ಯವನ್ನು ಕೆನಾಡ ವಿರುದ್ಧ ಆಡಲಿದೆ. ಈ ಹಿಂದೆ ಕೂಡ ಅಮುಲ್ ನೆದರ್ಲ್ಯಾಂಡ್ಸ್, ದಕ್ಷಿಣ ಆಫ್ರಿಕಾ ಮತ್ತು ಅಫ್ಘಾನಿಸ್ತಾನ ಕ್ರಿಕೆಟ್ ತಂಡಗಳನ್ನು ಪ್ರಾಯೋಜಿಸಿದೆ. ಈಗ ಅಮೇರಿಕಾದಲ್ಲಿ ಅಮುಲ್ ಹಾಲನ್ನು ಮಾರಾಟ ಮಾಡಲಾಗುತ್ತಿದೆ.

2011ರಲ್ಲಿ ಮೊದಲ ಬಾರಿಗೆ ನೆದರ್‌ಲ್ಯಾಂಡ್ ಕ್ರಿಕೆಟ್ ತಂಡಕ್ಕೆ ಅಮುಲ್ ಪ್ರಾಯೋಜಕತ್ವ ವಹಿಸಿಕೊಳ್ಳುವ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ನೊಂದಿಗೆ ತನ್ನ ಒಡನಾಟವನ್ನು ಪ್ರಾರಂಭಿಸಿದೆ. ಹಲವು ಐಸಿಸಿ ಈವೆಂಟ್‌ಗಳಲ್ಲಿ ವಿವಿಧ ಅಂತರರಾಷ್ಟ್ರೀಯ ತಂಡಗಳನ್ನು ಬೆಂಬಲಿಸುವ ಮೂಲಕ ಕ್ರೀಡೆಯೊಂದಿಗೆ ಬಲವಾದ ಸಂಬಧವನ್ನು ಅಮುಲ್ ಉಳಿಸಿಕೊಂಡಿದೆ.
ಅಮುಲ್ ಪ್ರಾಯೋಜಕತ್ವದ ಬಗ್ಗೆ ಯುಎಸ್‌ಎ ಕ್ರಿಕೆಟ್ ಚೇರ್ಮನ ವೇಣು ಪಿಸಿಕೆ ಮಾತನಾಡಿದ್ದು, 2024ರ ಐಸಿಸಿ ಟಿ20 ವಿಶ್ವಕಕ್‌ನಲ್ಲಿ ಪ್ರಮುಖ ತೋಲಿನ ಪ್ರಾಯೋಜಕರಾಗಿ ಅಮುಲ್ ಇರುದಕ್ಕೆ ನಮಗೆ ಬಹಳ ಸಂತೋಷವಾಗಿದೆ ಎಂದ ಹೇಳಿದ್ದಾರೆ.

ದಕ್ಷಿಣ ಆಫ್ರಿಕಾ ಜೂನ್ 3 ರಂದು ಶ್ರೀಲಂಕಾ ವಿರುದ್ಧ ತಮ್ಮ ವಿಶ್ವಕಪ್ ಆರಂಭಿಕ ಪಂದ್ಯವನ್ನು ಆಡಲಿದೆ. ಅಮುಲ್ ಭಾರತದ ಅತ್ಯಂತ ಸಾಂಪ್ರದಾಯಿಕ ಮತ್ತು ವಿಶ್ವಾಸಾರ್ಹ ಡೈರಿ ಬ್ರ್ಯಾಂಡ್‌ಗಳಲ್ಲಿ ಒಂದಾಗಿದೆ. ಟಿ20 ವಿಶ್ವಕಪ್ ಪ್ಲೇಯಿಂಗ್ ಕಿಟ್‌ನ ಪ್ರಮುಖ ಕೈ ತೋಳಿನಲ್ಲಿ ಅಮುಲ್ ಕಾಣಿಸಿಕೊಳ್ಳಲಿದೆ ಎಂದು ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿ ಹೇಳಿದೆ.
2019ರ ಏಕದಿನ ಕ್ರಿಕೆಟ್ ಸರಣಿ ಮತ್ತು 2023ರ ಐಸಿಸಿ ಕ್ರಿಕೆಟ್ ವಿಶ್ವಕಪ್‌ನಲ್ಲಿ ದಕ್ಷಿಣ ಆಫ್ರಿಕಾ ತಂಡದೊಂದಿಗೆ ಅಮುಲ್ ಸಂಬಂಧ ಹೊಂದಿದೆ. ದಕ್ಷಿಣ ಆಫ್ರಿಕಾ ಪುರುಷರ ಕ್ರಿಕೆಟ್ ತಂಡದೊಂದಿಗೆ ನಮ್ಮ ಒಡನಾಟವನ್ನು ಮತ್ತಷ್ಟು ಬಲಪಡಿಸಲು ನಾವು ಹೆಮ್ಮೆಪಡುತ್ತೇವೆ ಮತ್ತು ಅವರಿಗೆ ಟಿ20 ವಿಶ್ವಕಪ್‌ಗೆ ಶುಭ ಹಾರೈಸುತ್ತೇವೆ ಎಂದು ಅಮುಲ್‌ನ ವ್ಯವಸ್ಥಾಪಕ ನಿರ್ದೇಶಕ ಜಯನ್ ಮೆಹ್ತಾ ತಿಳಿಸಿದ್ದಾರೆ.
ಹಾಲು ಪ್ರಪಂಚದ ಮೂಲ ಶಕ್ತಿ ಪಾನೀಯವಾಗಿದ್ದು, ಪ್ರಪಂಚದಾದ್ಯಂತದ ಕ್ರೀಡಾಪಟುಗಳು ಸೇವಿಸುತ್ತಿದ್ದಾರೆ.25 ವರ್ಷಗಳಿಂದ ಬೆಣ್ಣೆ, ತುಪ್ಪ, ಐಸ್ ಕ್ರೀಮ್ ಅಂತಹ ಅಮುಲ್ ಉತ್ಪನ್ನಗಳನ್ನು ಯುಎಸ್‌ಎ ನಲ್ಲಿ ಬಳಸುತ್ತಿದ್ದಾರೆ. ಈಗ ನಾವು ಅಮೆರಿಕಾದಾದ್ಯಂತ ಅಮುಲ್ ಫ್ರೆಶ್ ಮಿಲ್ಕ್ ಅನ್ನು ಪ್ರಾರಂಭಿಸಲು ಸಂತೋಷಪಡುತ್ತೇವೆ ಎಂದು ಯುಎಸ್‌ಎ ಕ್ರಿಕೆಟ್ ತಂಡಕ್ಕೆ ಪ್ರಾಯೋಜಕತ್ವ ವಹಿಸಿಕೊಂಡಿರುವ ಬಗ್ಗೆ ಜಯನ್ ಮೆಹ್ತಾ ನುಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications