
ಮುಂಚೂಣಿಯಲ್ಲಿ ವಿರೇಂದ್ರ ಸೆಹ್ವಾಗ್
ಟೀಂ ಇಂಡಿಯಾ ಹುದ್ದೆಗೆ ಮೊದಲ ಬಾರಿಗೆ ಬಿಸಿಸಿಐ ಅರ್ಜಿ ಆಹ್ವಾನಿಸಿದ ಸಮಯದಲ್ಲಿ ಈಗಾಗಲೇ ಅರ್ಜಿ ಹಾಕಿರುವ ಭಾರತದ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಮುಂಚೂಣಿಯಲ್ಲಿದ್ದಾರೆ.

ರವಿಶಾಸ್ತ್ರಿಯಿಂದ ಅರ್ಜಿ ಸಲ್ಲಿಕೆ
ಟೀಂ ಇಂಡಿಯಾ ಕೋಚ್ ಹುದ್ದೆಗೆ ಎರಡನೇ ಬಾರಿಗೆ ಅರ್ಜಿ ಆಹ್ವಾನಿಸಿದ ವೇಳೆ ಭಾರತದ ಮಾಜಿ ಕ್ರಿಕೆಟಿಗ ರವಿಶಾಸ್ತ್ರಿ ಅವರು ಕೂಡ ಅರ್ಜಿ ಹಾಕಿದ್ದು, ಸೆಹ್ವಾಗ್ ಅವರಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ.

ಕೋಚ್ ಹುದ್ದೆಗೆ ಪ್ರಬಲರ ಪೈಪೋಟಿ
(ಜೂನ್ 1) ದಿನಾಂತ್ಯಕ್ಕೆ ಕೋಚ್ ಹುದ್ದೆಯ ರೇಸ್ ನಲ್ಲಿ ಕುಂಬ್ಳೆ ಸೇರಿದಂತೆ ಸೆಹ್ವಾಗ್, ಟಾಮ್ ಮೂಡಿ, ಲಾಲ್ ಚಂದ್ ರಜಪೂತ್, ಕರ್ನಾಟಕದ ದೊಡ್ಡ ಗಣೇಶ್ ಹಾಗೂ ರಿಚರ್ಡ್ ಪೈಬಸ್ ಅವರೂ ಅರ್ಜಿ ಸಲ್ಲಿಸಿದ್ದರು. ಹಾಗಾಗಿ, ಕೋಚ್ ಹುದ್ದೆಗೆ ಪ್ರಬಲರ ರೇಸ್ ಇದೆ ಎಂದೇ ಹೇಳಲಾಗಿತ್ತು.

ಕೋಚ್ ಹುದ್ದೆ ದಿನಾಂಕ ವಿಸ್ತರಿಸಿದ್ದ ಬಿಸಿಸಿಐ
ಕುಂಬ್ಳೆ ಅವರ ಅವಧಿ ಮುಕ್ತಾಯದ ಕೊಹ್ಲಿ ಮತ್ತು ಕಂಬ್ಳೆ ನಡುವಿನ ಮುಸುಕಿನ ಗುದ್ದಾಟ ಕಂಡು ಕೋಚ್ ಹುದ್ದೆಗೆ ಬಿಸಿಸಿಐ ಅರ್ಜಿ ಆಹ್ವಾನಿಸಿತ್ತು. ಆದರೆ, ಕುಂಬ್ಳೆ ಅವರನ್ನು ವೆಸ್ಟ್ ಇಂಡೀಸ್ ಸರಣಿ ವರೆಗೂ ಮುನ್ನಡೆಸಬೇಕೆಂಬ ತೀರ್ಮಾನವೂ ಆಗಿತ್ತು. ಆದರೆ, ಕುಂಬ್ಳೆ ಅದಕ್ಕೂ ಮೊದಲು ರಾಜೀನಾಮೆ ನೀಡಿದ್ದರು. ಇದಾದ ಬಳಿಕ ಬಿಸಿಸಿಐ ಕೋಚ್ ಹುದ್ದೆಯ ದಿನಾಂಕವನ್ನು ವಿಸ್ತರಿಸಿತ್ತು.


Click it and Unblock the Notifications