ಮುಂಬೈನಲ್ಲಿ ಒಟ್ಟಿಗೆ ಕಾಣಿಸಿಕೊಂಡ ಶುಭಮನ್ ಗಿಲ್ ಮತ್ತು ಸಾರಾ!
ಶುಭಮನ್ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಡೇಟಿಂಗ್ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ. ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರಾ ಎನ್ನುವ ಪ್ರಶ್ನೆ ಮತ್ತೆ ಮೂಡಿದ್ದು, ಇದಕ್ಕೆ ಕಾರಣ ಸದ್ಯ ವೈರಲ್ ಆಗಿರುವ ಒಂದು ವಿಡಿಯೋ.
ಏಕದಿನ ವಿಶ್ವಕಪ್‌ನಲ್ಲಿ ಅಮೋಘ ಪ್ರದರ್ಶನ ನೀಡುತ್ತಿರುವ ಭಾರತ ತಂಡ ನವೆಂಬರ್ 2ರಂದು ಮುಂಬೈನಲ್ಲಿ ಶ್ರೀಲಂಕಾವನ್ನು ಎದುರಿಸಲಿದೆ. ವಾಂಖೆಡೆ ಕ್ರೀಡಾಂಗಣದಲ್ಲಿ ಆಟಗಾರರು ಅಭ್ಯಾಸ ನಡೆಸಿದರು.

ಶ್ರೀಲಂಕಾ ವಿರುದ್ಧದ ಪಂದ್ಯದ ಮೊದಲು ಮುಂಬೈನ ರೆಸ್ಟೋರೆಂಟ್‌ನಲ್ಲಿ ಭಾರತದ ಸ್ಟಾರ್ ಓಪನರ್ ಶುಭಮನ್ ಗಿಲ್ ಸಚಿನ್ ತೆಂಡೂಲ್ಕರ್ ಅವರ ಪುತ್ರಿ ಸಾರಾ ಅವರೊಂದಿಗೆ ಕಾಣಿಸಿಕೊಂಡರು. ಸಾರಾ ಕೆಂಪು ಬಣ್ಣದ ಉಡುಪಿನಲ್ಲಿ ಕಂಗೊಳಿಸಿದರೆ, ಗಿಲ್ ಜಾಕೆಟ್ ಮತ್ತು ಪ್ಯಾಂಟ್‌ನೊಂದಿಗೆ ಗಮನ ಸೆಳೆದರು.
ಸಾರಾ ಮತ್ತು ಶುಭಮನ್ ರೆಸ್ಟೋರೆಂಟ್‌ನ ಹೊರಗೆ ಹೆಜ್ಜೆ ಹಾಕುತ್ತಿರುವ ವೀಡಿಯೊವನ್ನು ನೋಡಬಹುದು. ಶುಭಮನ್ ಗಿಲ್ ಮೊದಲು ರೆಸ್ಟೋರೆಂಟ್‌ನಿಂದ ಹೊರಬಂದರೆ, ಸಾರಾ ತನ್ನ ಸ್ನೇಹಿತರ ಜೊತೆ ಮಾತನಾಡುತ್ತಿದ್ದರು.
ಮತ್ತೆ ಒಂದಾಯಿತಾ ಜೋಡಿ?
ಸಾರಾ ಮತ್ತು ಶುಬ್‌ಮಾನ್ ಕಳೆದ ವರ್ಷದಿಂದ ಡೇಟಿಂಗ್ ಮಾಡುತ್ತಿದ್ದರು ಎನ್ನುವ ವದಂತಿಗಳು ಇದ್ದವು, ಕೆಲವು ಸಾರ್ವಜನಿಕ ಸ್ಥಳಗಳಲ್ಲಿಯೂ ಕಾಣಿಸಿಕೊಂಡಿದ್ದರು. ಆದರೆ, ನಂತರ ಶುಭಮನ್ ಗಿಲ್ ನಟಿ ಸಾರಾ ಅಲಿ ಖಾನ್ ಅವರೊಂದಿಗೆ ಡೇಟಿಂಗ್‌ಗೆ ಹೋದಾಗ ಸಾರಾ ಶುಭಮನ್ ನಡುವೆ ಬ್ರೇಕಪ್ ಆಗಿದೆ ಎನ್ನುವ ಸುದ್ದಿ ಹರಿದಾಡಿತ್ತು. ಶುಭಮನ್ ಗಿಲ್ ಅವರ ಇನ್‌ಸ್ಟಾಗ್ರಾಂ ಸ್ಟೋರಿಗಳು ಕೂಡ ವೈರಲ್ ಆಗಿದ್ದವು.
ಆದರೆ ಸದ್ಯ, ಸಾರಾ ಮತ್ತು ಶುಬ್‌ಮನ್ ಗಿಲ್ ಮತ್ತೆ ಒಂದಾಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇತ್ತೀಚೆಗೆ ಏಕದಿನ ವಿಶ್ವಕಪ್ ಪಂದ್ಯದ ವೇಳೆ ಸಾರಾ ತೆಂಡೂಲ್ಕರ್ ಸ್ಟಾಂಡ್‌ನಲ್ಲಿ ಶುಭಮನ್ ಗಿಲ್ ಬೌಂಡರಿ, ಸಿಕ್ಸರ್ ಬಾರಿಸಿದಾಗ ಸಂಭ್ರಮಿಸುವ ವಿಡಿಯೋಗಳು ವೈರಲ್ ಆಗಿದ್ದವು. ಈಗ ಹೊಸ ವಿಡಿಯೋ ಇಬ್ಬರೂ ಮತ್ತೆ ಒಂದಾಗಿದ್ದಾರೆ ಎನ್ನುವ ಸುದ್ದಿಗೆ ಹೆಚ್ಚು ಬಲ ನೀಡುತ್ತಿದೆ.
ಸದ್ಯ ಭಾರತ ತಂಡದಲ್ಲಿ ತಮ್ಮ ಸ್ಥಾನವನ್ನು ಗಟ್ಟಿ ಮಾಡಿಕೊಂಡಿರುವ ಶುಭಮನ್ ಗಿಲ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. 2023ರಲ್ಲಿ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಏಕದಿನ ಮಾದರಿಯಲ್ಲಿ ಈ ವರ್ಷದಲ್ಲಿ ಅತಿ ಹೆಚ್ಚು ರನ್ ಗಳಿಸಿರುವ ಆಟಗಾರರ ಪಟ್ಟಿಯಲ್ಲಿ ಗಿಲ್ ಮೊದಲ ಸ್ಥಾನದಲ್ಲಿದ್ದಾರೆ.
ಪ್ರಸ್ತುತ ನಡೆಯುತ್ತಿರುವ ವಿಶ್ವಕಪ್ ಪಂದ್ಯಾವಳಿಯಲ್ಲಿ ಡೆಂಗ್ಯೂ ಜ್ವರದಿಂದ ಬಳಲಿದ್ದ ಅವರು ಚೇತರಿಸಿಕೊಂಡ ಬಳಿಕ ತಂಡಕ್ಕೆ ವಾಪಸಾಗಿದ್ದು, ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ದೊಡ್ಡ ಮೊತ್ತ ಬರದೇ ಇದ್ದರೂ, ರೋಹಿತ್ ಜೊತೆಗೂಡಿ ಭಾರತ ತಂಡಕ್ಕೆ ಉತ್ತಮ ಆರಂಭ ನೀಡುತ್ತಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications