ಕ್ರಿಕೆಟ್ ಆಟಗಾರರಿಗೂ ಬಾಲಿವುಡ್‌ಗೂ ಹಳೆಯ ಸಂಬಂಧ. ಬಾಲಿವುಡ್ ಬೆಳ್ಳಿ ತೆರೆಯ ಮೇಲೆ ರಾಣಿಯರಂತೆ ಮೆರೆದ ನಾಯಕಿಯರು ಕ್ರಿಕೆಟ್ ಆಟಗಾರರನ್ನು ಮದುವೆ ಆಗಿದ್ದಾರೆ. ಇದಕ್ಕೆ ಬೆಸ್ಟ್ ಎಕ್ಸಾಮ್‌ಪಲ್ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ.
ಇತ್ತೀಚಿಗೆ ಕೆಲವು ದಿನಗಳ ಹಿಂದೆ ಬಾಲಿವುಡ್ ನಟಿ ಅನನ್ಯಾ ಪಾಂಡೆ ಹಾಗೂ ಟೀಮ್ ಇಂಡಿಯಾದ ಆಲ್‌ರೌಂಡರ್ ರಿಯಾನ್ ಪರಾಗ್ ಬಗ್ಗೆ ಸಾಕಷ್ಟು ವದಂತಿಗಳು ಹಬ್ಬಿದ್ದವು. ಇದೀಗ ಅನನ್ಯಾ ಪಾಂಡೆ ವಿರಾಟ್ ಕೊಹ್ಲಿಯನ್ನು ತನ್ನ 'ಸೆಲೆಬ್ರಿಟಿ ಕ್ರಶ್' ಎಂದು ಹೇಳಿದ್ದಾರೆ. ಇದನ್ನು ಕೇಳಿದ ಅಭಿಮಾನಿಗಳು ರಿಯಾನ್ ಪರಾಗ್ ಬಗ್ಗೆ ಸಾಮಾಜಿಕ ತಾಣದಲ್ಲಿ ಬೇಸರವನ್ನು ವ್ಯಕ್ತ ಪಡಿಸಿದ್ದಾರೆ.

ಅನನ್ಯಾ ಪಾಂಡೆ ಅವರಿಗೆ ಇತ್ತೀಚಿಗೆ ಸಂದರ್ಶನವೊಂದರಲ್ಲಿ, ನಿಮ್ಮ 'ಸೆಲೆಬ್ರಿಟಿ ಕ್ರಶ್' ಯಾರು ಎಂದು ಕೇಳಲಾಯಿತು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಕೊಂಚವೂ ಸಮಯ ವ್ಯರ್ಥ ಮಾಡದೆ ಥಟ್ಟನೆ ಚೇಸಿಂಗ್ ಸ್ಟಾರ್ ವಿರಾಟ್ ಕೊಹ್ಲಿ ಹೆಸರನ್ನು ಹೇಳಿದರು. ಅನನ್ಯಾ ಅವರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆಗುತ್ತಿದೆ. ಈ ವೀಡಿಯೊದ ಕಾಮೆಂಟ್‌ಗಳಲ್ಲಿ, ಅಭಿಮಾನಿಗಳು ರಿಯಾನ್ ಪರಾಗ್‌ಗೆ ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ.
ಟೀಮ್ ಇಂಡಿಯಾದ ಸ್ಟಾರ್ ಆಲ್‌ರೌಂಡರ್ ರಿಯಾನ್ ಪರಾಗ್ ಇತ್ತೀಚಿಗೆ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ರಿಯಾನ್ ಪರಾಗ್ ಆ ವಿಡಿಯೋದಲ್ಲಿ ತಮ್ಮದೆ ಯೂಟ್ಯೂಬ್ ಖಾತೆಯಲ್ಲಿ ಲೈವ್ ಸ್ಟ್ರೀಮಿಂಗ್ ಮಾಡುತ್ತಿದ್ದರು. ಇದೇ ವೇಳೆ ಪರಾಗ ಏನೋ ಹುಡುಕಲು ಯೂಟ್ಯೂಬ್ ಸರ್ಚ್ ಬಾಕ್ಸ್ ಓಪನ್ ಮಾಡಿದರು. ಈ ಸರ್ಚ ಹಿಸ್ಟರಿಯಲ್ಲಿ ಅವರಿಗೆ 'ಹಾಟ್ ಅನನ್ಯ ಪಾಂಡೆ' ಮತ್ತು ಹಾಟ್ 'ಸಾರಾ ಅಲಿ ಖಾನ್' ಕಾಣಿಸಿಕೊಂಡರು. ಇದಾದ ಬಳಿಕ ಇಬ್ಬರ ಬಗ್ಗೆ ವದಂತಿಗಳು ಆರಂಭವಾದವು.
ಟೀಮ್ ಇಂಡಿಯಾದ ಫ್ಯೂಚರ್ಸ್ ಸೂಪರ್ ಸ್ಟಾರ್ ಶುಭಮನ್ ಗಿಲ್, ಒಂದು ಜಾಹೀರಾತಿನಲ್ಲಿ ಅನನ್ಯಾ ಪಾಂಡ್ಯ ಅವರೊಂದಿಗೆ ಕೆಲಸ ಮಾಡಿದರು. ಅವರಿಬ್ಬರು ಜಾಹಿರಾತು ಸಮಯದ ಫೊಟೋಗಳು ಸಖತ್ ವೈರಲ್ ಆಗಿವೆ.
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಅವರ ಸದ್ಯ ಟೆಸ್ಟ್ ಸರಣಿಯತ್ತ ಮುಖ ಮಾಡಿದ್ದಾರೆ. ಇವರ ಫಿಟ್ನೆಸ್ ಹಾಗೂ ಆಟದ ಶೈಲಿಗೆ ವಿಶ್ವದೆಲ್ಲೆಡೆ ಅಭಿಮಾನಿಗಳು ಇದ್ದಾರೆ.