Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಐಪಿಎಲ್‌ ಹರಾಜಿಗೂ ಮುನ್ನ ಕೆಕೆಆರ್‌ ಆಲ್‌ರೌಂಡರ್ ದೊಡ್ಡ ನಿರ್ಧಾರ: ಏನದು?

ವೆಸ್ಟ್ ಇಂಡೀಸ್ ಆಲ್ ರೌಂಡರ್ ಆಂಡ್ರೆ ರಸೆಲ್ ದೊಡ್ಡ ನಿರ್ಧಾರವನ್ನು ಕೈಗೊಂಡಿದ್ದಾರೆ. ಐಪಿಎಲ್‌ನ ತಂಡ ಕೋಲ್ಕತ್ತ ನೈಟ್ ರೈಡರ್ಸ್‌ ತಂಡ ಇವರನ್ನು ಕೈ ಬಿಟ್ಟ ಬೆನ್ನಲ್ಲೆ ಇವರು ದೊಡ್ಡ ತೀರ್ಮಾನವನ್ನು ಕೈ ಗೊಂಡಿದ್ದಾರೆ. ವಿಂಡೀಸ್ ತಂಡದ ರಸೆಲ್‌ ಐಪಿಎಲ್‌ಗೆ ವಿದಾಯ ಹೇಳಿದ್ದಾರೆ. ಕೆಕೆಆರ್‌ ಇವರನ್ನು ಮಿನಿ ಆಕ್ಷನ್‌ಗೂ ಮುನ್ನ ರಿಲೀಸ್‌ ಮಾಡಿದೆ. ಇವರನ್ನು ತಮ್ಮ ತಂಡಕ್ಕೆ ಸೇರಿಸಿಕೊಳ್ಳಲು ಫ್ರಾಂಚೈಸಿಗಳು ಬಿಗ್ ಪ್ಲ್ಯಾನ್ ಮಾಡಿಕೊಂಡಿದ್ದವು. ಆದರೆ ಈ ಬೆನ್ನಲ್ಲೆ ರಸೆಲ್‌ ದೊಡ್ಡ ನಿರ್ಧಾರವನ್ನು ಕೈಗೊಂಡಿದ್ದಾರೆ.

ಆಂಡ್ರೆ ರಸೆಲ್‌ ಸುಮಾರು 10 ವರ್ಷಗಳಿಂದ ಕೆಕೆಆರ್ ತಂಡದ ಪರ ಬ್ಯಾಟ್ ಮಾಡುತ್ತಿದ್ದರು. ಇವರು ಕೆಕೆಆರ್‌ ತಂಡದ ಅವಿಭಾಜ್ಯ ಅಂಗವಾಗಿದ್ದರು. ಆದರೆ ಇವರನ್ನು ಉಳಿಸಿಕೊಳ್ಳುವಲ್ಲಿ ಕೆಕೆಆರ್‌ ಈಗ ವಿಫಲಾಗಿದೆ. ಇವರು ತಮ್ಮ ನಿವೃತ್ತಿಯ ಘೋಷಣೆಯನ್ನು ಇನ್‌ಸ್ಟಾಗ್ರಾಮ್ ಪೋಸ್ಟ್ ಮೂಲಕ ಅಭಿಮಾನಿಗಳಿಗೆ ಹಂಚಿಕೊಂಡಿದ್ದಾರೆ. ರಸೆಲ್‌ ಈಗಾಗಲೇ ಐಪಿಎಲ್‌ನಲ್ಲಿ ತಮ್ಮ ಅಮೋಘ ಆಲ್‌ರೌಂಡರ್‌ ಆಟದ ಮೂಲಕ ಗಮನ ಸೆಳೆದ ಆಟಗಾರ. ಇವರು ಬಿಗ್‌ ಹಿಟ್‌ಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದರು. ಅಲ್ಲದೆ ಅವಶ್ಯಕತೆ ಇದ್ದಾಗ ಬೌಲಿಂಗ್‌ನಲ್ಲೂ ತಂಡದ ಪರ ಅಬ್ಬರ ನಡೆಸಿದ್ದರು.

Andre Russell Announces IPL Retirement After KKR Releases Him Fans React

ಕೆಕೆಆರ್‌ ತಂಡದ ಆಂಡ್ರೆ ರಸೆಲ್‌ ನಿವೃತ್ತಿ ಘೋಷಿಸಿದ್ದು, ಅಭಿಮಾನಿಗಳಿಗೆ ಸಂದೇಶವನ್ನು ನೀಡಿದ್ದಾರೆ. ವಿಶ್ವದ ಬೇರೆ ಬೇರೆ ಲೀಗ್‌ಗಳಲ್ಲಿ ಆಡಲಿದ್ದು, ಕೆಕೆಆರ್‌ ಫ್ರಾಂಚೈಸಿ ಪರ ಕೆಲಸ ಮಾಡಲು ತೀರ್ಮಾನಿಸಿದ್ದೇನೆ ಎಂದು ತಿಳಿಸಿದ್ದಾರೆ. ಇನ್ನು ಅಭಿಮಾನಿಗಳು ನಿವೃತ್ತಿಯನ್ನು ಏಕೆ ಪಡೆದಿರಿ ಎಂದು ಕೇಳುವಾಗಲೇ ನಿವೃತ್ತಿ ಪಡೆಯಬೇಕು. ನೀವು ಇನ್ನು ಹೆಚ್ಚು ಸಮಯ ಆಡಬೇಕಿತ್ತು ಕೇಳಿತ್ತಾರೆ. ಇದನ್ನು ಕೇಳಿದಾಗ ನಾನು ಇನ್ನು ಮೊದಲೇ ಈ ನಿರ್ಧಾರವನ್ನು ಕೈಗೊಳ್ಳಬೇಕಿತ್ತು ಎಂದು ರಸೆಲ್‌ ತಿಳಿಸಿದ್ದಾರೆ.

ರಸೆಲ್ ಸಾಧನೆ

ಆಂಡ್ರೆ ರಸೆಲ್‌ ಐಪಿಎಲ್‌ನಲ್ಲಿ ತಮ್ಮ ಸಿಡಿಲಬ್ಬರದ ಬ್ಯಾಟಿಂಗ್‌ನಿಂದ ಅಭಿಮಾನಿಗಳನ್ನು ರಂಜಿಸಿದ್ದರು. ಇವರು ಐಪಿಎಲ್‌ನಲ್ಲಿ ಆಡಿದ 140 ಪಂದ್ಯಗಳ 115 ಇನಿಂಗ್ಸ್‌ಗಳಲ್ಲಿ 28.20 ಸರಾಸರಿಯಲ್ಲಿ 2651 ರನ್ ಗಳಿಸಿದ್ದಾರೆ. ಈ ವೇಳೆ ಇವರ ಸ್ಟ್ರೈಕ್‌ ರೇಟ್‌ 174.17 ಆಗಿದೆ. ಇವರು 123 ವಿಕೆಟ್‌ಗಳನ್ನು ಸಹ ಪಡೆದಿದ್ದಾರೆ. ರಸೆಲ್‌ ಕಳೆದ ಆವೃತ್ತಿಯಲ್ಲಿ ಆಡಿದ 10 ಪಂದ್ಯಗಳಲ್ಲಿ ಕೇವಲ 167 ರನ್‌ ಸಿಡಿಸಲಷ್ಟೇ ಸಫಲರಾಗಿದ್ದರು. ಅಲ್ಲದೆ 8 ವಿಕೆಟ್‌ ಪಡೆದಿದ್ದರು.

Story first published: Sunday, November 30, 2025, 20:56 [IST]
Other articles published on Nov 30, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+