For Quick Alerts
ALLOW NOTIFICATIONS  
For Daily Alerts
 

Andre Russell: ರಸೆಲ್‌ ಅಳಿಸಿ ಹಾಕಿದ ಅಶ್ವಿನ್‌ ದಾಖಲೆ ಯಾವುದು?

18ನೇ ಆವೃತ್ತಿಯ ಐಪಿಎಲ್‌ ದಿನ ಕಳೆದಂತೆ ರೋಚಕತೆ ಹೆಚ್ಚಿಸುತ್ತಿದೆ. ಈ ಲೀಗ್‌ನಲ್ಲಿ ಸ್ಟಾರ್ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿದ್ದ ತಂಡದ ಗೆಲುವಿನಲ್ಲಿ ಮಿಂಚುತ್ತಿದ್ದಾರೆ. ಲೀಗ್‌ನ 44ನೇ ಪಂದ್ಯ ಕೋಲ್ಕತ್ತಾದ ಈಡನ್‌ ಗಾರ್ಡನ್‌ ಅಂಗಳದಲ್ಲಿ ನಡೆಯಿತು. ಈ ವೇಳೆ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್‌ ತಂಡಗಳು ಕಾದಾಟ ನಡೆಸಿದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್‌ 201 ರನ್‌ಗಳಿಸಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಕೆಕೆಆರ್‌ ಏಳು ರನ್‌ ಗಳಿಸಿ ಮುನ್ನುಗುತ್ತಿದ್ದಾಗ ಮಳೆ ಬಂದಿತು. ಪಂದ್ಯವನ್ನು ರದ್ದು ಎಂದು ಘೋಷಿಸಲಾಯಿತು. ಮಳೆ ಬಾಧಿತ ಪಂದ್ಯದಲ್ಲಿ ವೆಸ್ಟ್ ಇಂಡೀಸ್‌ ಸ್ಟಾರ್‌ ಪ್ಲೇಯರ್‌ ಆಂಡ್ರೆ ರಸೆಲ್ ದೊಡ್ಡ ಸಾಧನೆ ಮಾಡಿದ್ದಾರೆ.

ಅಂಡ್ರೆ ರಸೆಲ್ ಪ್ರಸಕ್ತ ಐಪಿಎಲ್‌ನಲ್ಲಿ ತಮ್ಮ ಬ್ಯಾಟಿಂಗ್‌ನಿಂದ ಪ್ರಭಾವ ಬೀರದೇ ಇದ್ದರೂ ಸಹ ಬೌಲಿಂಗ್‌ನಲ್ಲಿ ತಂಡಕ್ಕೆ ನೆರವಾಗುತ್ತಿದ್ದಾರೆ. ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿರುವ ರಸೆಲ್‌ 3 ಓವರ್‌ ಬೌಲ್ ಮಾಡಿ 27 ರನ್‌ ನೀಡಿ 1 ವಿಕೆಟ್‌ ಕಬಳಿಸಿದ್ದಾರೆ. ಈ ಮೂಲಕ ಇವರು ರವಿಚಂದ್ರನ್‌ ಅಶ್ವಿನ್‌ ಅವರ ವಿಶೇಷ ದಾಖಲೆಯನ್ನು ಮುರಿದಿದ್ದಾರೆ. ಆ ದಾಖಲೆಯ ಬಗ್ಗೆ ವರದಿ ಇಲ್ಲಿದೆ.

Andre Russell Breaks Ravichandran Ashwin s Record in IPL for Most Wickets in First Over

ಐಪಿಎಲ್‌ನಲ್ಲಿ ಮೊದಲನೇ ಓವರ್‌ನಲ್ಲಿ ವಿಕೆಟ್‌ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಆಂಡ್ರೆ ರಸೆಲ್‌ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇವರು ಐಪಿಎಲ್‌ನಲ್ಲಿ ತಾವು ಮಾಡಿದ ಮೊದಲ ಓವರ್‌ನಲ್ಲಿ 46ನೇ ಬಾರಿ ಈ ಸಾಧನೆ ಮಾಡಿದ್ದಾರೆ. ಪಂಜಾಬ್‌ ವಿರುದ್ಧದ ಪಂದ್ಯದಲ್ಲಿ ರಸೆಲ್‌ ಇನಿಂಗ್ಸ್‌ನ 12ನೇ ಓವರ್ ಬೌಲ್ ಮಾಡಿ ಅಬ್ಬರಿಸಿದ್ದಾರೆ. ಅಲ್ಲದೆ ಉತ್ತಮವಾಗಿ ಆಡುತ್ತಿದ್ದ ಪ್ರಿಯಾಂಶ್‌ ಆರ್ಯಗೆ ಖೆಡ್ಡಾ ತೋಡಿದರು. ಈ ಮೂಲಕ 46ನೇ ಬಾರಿ ಮೊದಲ ಓವರ್‌ನಲ್ಲಿ ವಿಕೆಟ್‌ ಪಡೆದ ಹಿರಿಮೆಗೆ ಪಾತ್ರರಾಗಿದ್ದಾರೆ. ಈ ಮೂಲಕ ಇವರು ಸ್ಪಿನ್ ಮಾಂತ್ರಿಕ ರವಿಚಂದ್ರನ್ ಅಶ್ವಿನ್ ಸಾಧನೆಯನ್ನು ಅಳಿಸಿ ಹಾಕಿದ್ದಾರೆ. ಅಶ್ವಿನ್‌ ಈ ಸಾಧನೆಯನ್ನು 45 ಬಾರಿ ಮಾಡಿದ್ದಾರೆ.

ಅಗ್ರ ಸ್ಥಾನದಲ್ಲಿ ಚಾವ್ಲಾ

ಈ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿ ಸ್ಪಿನ್ ಬೌಲರ್‌ ಪಿಯೂಷ್ ಚಾವ್ಲಾ ಇದ್ದು, ಇವರು 48 ಬಾರಿ ಮೊದಲ ಓವರ್‌ನಲ್ಲಿ ವಿಕೆಟ್‌ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿ ಯುಜುವೇಂದ್ರ ಚಹಾಲ್‌ (44 ವಿಕೆಟ್‌) ಇದ್ದು, ಐದನೇ ಸ್ಥಾನದಲ್ಲಿ ಡ್ವೇನ್‌ ಬ್ರಾವೋ (38 ವಿಕೆಟ್‌) ಇದ್ದಾರೆ.

Andre Russell Breaks Ravichandran Ashwin s Record in IPL for Most Wickets in First Over

ಐಪಿಎಲ್‌ನಲ್ಲಿ ಸಾಧನೆ

ಆಂಡ್ರೆ ರಸೆಲ್‌ 136 ಐಪಿಎಲ್‌ ಪಂದ್ಯಗಳನ್ನು ಆಡಿದ್ದಯ 27.90ರ ಸರಾಸರಿಯಲ್ಲಿ 2539 ರನ್ ಸಿಡಿಸಿದ್ದಾರೆ. ಈ ವೇಳೆ ಇವರು 22.73ರ ಸರಾಸರಿಯಲ್ಲಿ 122 ವಿಕೆಟ್‌ ಸಹ ಪಡೆದಿದ್ದಾರೆ. 18ನೇ ಆವೃತ್ತಿಯ ಐಪಿಎಲ್‌ನಲ್ಲಿ ರಸೆಲ್‌ ಬ್ಯಾಟ್ ಮೌನಕ್ಕೆ ಶರಣಾಗಿದೆ. ಈ ವೇಳೆ ರಸೆಲ್ ಆಡಿದ 9 ಪಂದ್ಯಗಳಲ್ಲಿ 9.16ರ ಸರಾಸರಿಯಲ್ಲಿ 55ರನ್ ಕಲೆ ಹಾಕಿದ್ದು, 7 ವಿಕೆಟ್‌ ಕಬಳಿಸಿದ್ದಾರೆ.

Story first published: Sunday, April 27, 2025, 12:03 [IST]
Other articles published on Apr 27, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+