For Quick Alerts
ALLOW NOTIFICATIONS  
For Daily Alerts
 

ರಸೆಲ್‌ ಅರ್ಧಶತಕದ ಅಬ್ಬರ: ದಾಖಲೆಗಳನ್ನು ಬರೆದ ಸ್ಟಾರ್ ಆಲ್‌ರೌಂಡರ್‌

ಭರವಸೆಯ ಆಟಗಾರ ಆಂಡ್ರೆ ರಸೆಲ್‌ ಬಾರಿಸಿದ ಅರ್ಧಶತಕದ ಫಲವಾಗಿ ಕೋಲ್ಕತ್ತಾ ನೈಟ್‌ ರೈಡರ್ಸ್‌ ಕೋಲ್ಕತ್ತಾ ನೈಟ್‌ ರೈಡರ್ಸ್‌ ತಂಡ 207 ರನ್‌ಗಳ ಗುರಿಯನ್ನು ರಾಜಸ್ಥಾನ ರಾಯಲ್ಸ್‌ಗೆ ನೀಡಿದೆ. ಈ ಇನಿಂಗ್ಸ್‌ ಮೂಲಕ ಆಂಡ್ರೆ ರಸೆಲ್‌ ಹಲವು ದಾಖಲೆಗಳನ್ನು ಬರೆದರು.

ಟಾಸ್‌ ಸೋತರೂ ಮೊದಲು ಬ್ಯಾಟ್‌ ಮಾಡಿದ ರಹಮತುಲ್ಲಾ ಗುರ್ಬಾಜ್‌ ಹಾಗೂ ಸುನಿಲ್ ನರೈನ್‌ ದೊಡ್ಡ ಜೊತೆಯಾಟವನ್ನು ನೀಡಲಿಲ್ಲ. ಸುನಿಲ್‌ ನರೈನ್‌ 11 ರನ್‌ ಬಾರಿಸಿ ಔಟ್ ಆದರು. ಎರಡನೇ ವಿಕೆಟ್‌ಗೆ ರಹಮತುಲ್ಲಾ ಹಾಗೂ ಅಜಿಂಕ್ಯ ರಹಾನೆ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಎರಡನೇ ವಿಕೆಟ್‌ಗೆ ಈ ಜೋಡಿ 33 ಎಸೆತಗಳಲ್ಲಿ 56 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿದರು. ರಹಮತುಲ್ಲಾ ಗುರ್ಬಾಜ್‌ 4 ಬೌಂಡರಿ, 1 ಸಿಕ್ಸರ್ ಸಹಾಯದಿಂದ 35 ರನ್‌ ಸಿಡಿಸಿ ಔಟ್ ಆದರು.

Andre Russell s Fiery Fifty Lifts KKR to 207 Hits 1000 Runs at Eden Gardens

ಮೂರನೇ ವಿಕೆಟ್‌ಗೆ ಅಜಿಂಕ್ಯ ರಹಾನೆ ಹಾಗೂ ಅಂಗ್‌ಕ್ರಿಶ್ ರಘುವಂಶಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿದರು. ಈ ಜೋಡಿ 31 ಎಸೆತಗಳಲ್ಲಿ 42 ರನ್‌ಗಳ ಜೊತೆಯಾಟದ ಕಾಣಿಕೆ ನೀಡಿತು. ಅಜಿಂಕ್ಯ ರಹಾನೆ 24 ಎಸೆತಗಳಲ್ಲಿ 1 ಬೌಂಡರಿ, 2 ಸಿಕ್ಸರ್‌ ಸಹಾಯದಿಂದ 30 ರನ್‌ ಸಿಡಿಸಿದರು. ನಾಲ್ಕನೇ ವಿಕೆಟ್‌ಗೆ ಅಂಗ್‌ಕ್ರಿಶ್ ರಘುವಂಶಿ ಹಾಗೂ ಆಂಡ್ರೆ ರಸೆಲ್‌ ಜೋಡಿ ಉತ್ತಮ ಜೊತೆಯಾಟದ ಕಾಣಿಕೆ ನೀಡಿತು. ಅಲ್ಲದೆ ರಾಜಸ್ಥಾನ ಬೌಲರ್‌ಗಳನ್ನು ಕಾಡಿತು. ಈ ಜೋಡಿ 33 ಎಸೆತಗಳಲ್ಲಿ 61 ರನ್‌ ಸಿಡಿಸಿತು. ಈ ವೇಳೆ ಅಂಗ್‌ಕ್ರಿಶ್ ರಘುವಂಶಿ 44 ರನ್‌ ಬಾರಿಸಿದ್ದಾಗ ಜೋಫ್ರಾ ಆರ್ಚರ್‌ ಎಸೆತದಲ್ಲಿ ಔಟ್ ಆದರು.

ಐದನೇ ವಿಕೆಟ್‌ಗೆ ಆಂಡ್ರೆ ರಸೆಲ್‌ ಹಾಗೂ ರಿಂಕು ಸಿಂಗ್‌ ಜೋಡಿ ಡೆತ್‌ ಓವರ್‌ಗಳಲ್ಲಿ ಮನಮೋಹಕ ಪ್ರದರ್ಶನ ನೀಡಿತು. ಈ ಜೋಡಿ 11 ಎಸೆತಗಳಲ್ಲಿ ಅಜೇಯ 34 ರನ್‌ ಸೇರಿಸಿತು. ಈ ವೇಳೆ ಸ್ಪೋಟಕ ಬ್ಯಾಟಿಂಗ್ ನಡೆಸಿದ ಆಂಡ್ರೆ ರಸೆಲ್‌ 25 ಎಸೆತಗಳಲ್ಲಿ 4 ಬೌಂಡರಿ, 6 ಸಿಕ್ಸರ್ ಸಹಾಯದಿಂದ ಅಜೇಯ 57 ರನ್‌ ಸಿಡಿಸಿ ಅಬ್ಬರಿಸಿತು.

ರಸೆಲ್‌ ಆರ್ಭಟ

ಆಂಡ್ರೆ ರಸೆಲ್‌ ಈ ಬಾರಿಯ ಐಪಿಎಲ್‌ನಲ್ಲಿ ರನ್‌ ಕಲೆ ಹಾಕುವಲ್ಲಿ ವಿಫಲರಾಗುತ್ತಿದ್ದರು. ಇವರು 13ನೇ ಓವರ್‌ನಲ್ಲಿ ಬ್ಯಾಟಿಂಗ್ ಮಾಡಲು ಆಗಮಿಸಿದರು. ಇವರು 16 ನೇ ಓವರ್‌ನಲ್ಲಿ ಆಕಾಶ್ ಮಧ್ವಾಲ್ ಅವರನ್ನು ರಸೆಲ್‌ ಮನಬಂಧಂತೆ ದಂಡಿಸಿದರು. ಇನ್ನು ಮಹೇಶ್ ತೀಕ್ಷಣಾ ಅವರ ಓವರ್‌ನಲ್ಲಿ ಅವರು ಸತತ ಮೂರು ಸಿಕ್ಸರ್‌ಗಳನ್ನು ಬಾರಿಸಿ ರನ್‌ರೇಟ್ ಅನ್ನು ಹೆಚ್ಚಿಸಿದರು.

Andre Russell s Fiery Fifty Lifts KKR to 207 Hits 1000 Runs at Eden Gardens

ಆಂಡ್ರೆ ರಸೆಲ್‌ ಅವರ ಅಮೋಘ ಪ್ರದರ್ಶನದ ಫಲದಿಂದ ಕೆಕೆಆರ್‌ ದೊಡ್ಡ ಮೊತ್ತದ ಗುರಿಯನ್ನು ಕಲೆ ಹಾಕುವಲ್ಲಿ ಸಫಲವಾಗಿತು. ಇದೇ ಅಮೋಘ ಇನಿಂಗ್ಸ್‌ ಮೂಲಕ ರಸೆಲ್‌ ಈಡನ್‌ ಗಾರ್ಡನ್‌ ಅಂಗಳದಲ್ಲಿ 1000 ರನ್‌ ಪೂರೈಸಿದ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಇನ್ನು ಈ ಮೈದಾನದಲ್ಲಿ ಸಾವಿರ ರನ್‌ ಪೂರೈಸಿದ ಮೊದಲ ವಿದೇಶಿ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

Story first published: Sunday, May 4, 2025, 17:54 [IST]
Other articles published on May 4, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+