England vs Ireland: ಟೆಸ್ಟ್ ಮಾದರಿಯಲ್ಲಿ ಇಂಗ್ಲೆಂಡ್‌ಗೆ ಸವಾಲೊಡ್ಡಿದ ಐರ್ಲೆಂಡ್
ಐರ್ಲೆಂಡ್ ತಂಡ ನೆರೆ ರಾಷ್ಟ್ರ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದು ಏಕೈಕ ಟೆಸ್ಟ್ ಪಂದ್ಯದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಲಿದೆ. ಲಂಡನ್‌ನ ಲಾರ್ಡ್ಸ್ ಮೈದಾನದಲ್ಲಿ ಈ ಪಂದ್ಯ ನಡೆಯಲಿದ್ದು ಈ ಪಂದ್ಯಕ್ಕಾಗಿ ಐತಿಹಾಸಿಕ ಲಾರ್ಡ್ಸ್ ಕ್ರೀಡಾಂಗಣ ಸಜ್ಜಾಗಿದೆ. ಜೂನ್ 1ರಿಂದ ಆರಂಬವಾಗಲಿರುವ ಈ ಏಕೈಕ ಟೆಸ್ಟ್ ಪಂದ್ಯದ ಸರಣಿ ಜೂನ್ 4ರಂದು ಅಂತ್ಯವಾಗಲಿದೆ.
ಇಂಗ್ಲೆಂಡ್ ತಂಡದ ನಾಯಕತ್ವವನ್ನು ಬೆನ್ ಸ್ಟೋಕ್ಸ್ ಹಾಗೂ ಕೋಚ್ ಸ್ಥಾನವನ್ನು ನ್ಯೂಜಿಲಂಡ್ ಮಾಜಿ ನಾಯಕ ಬ್ರೆಂಡನ್ ಮೆಕ್ಕಲಮ್ ವಹಿಸಿಕೊಂಡ ಬಳಿಕ ಒಂದಾದ ಬಳಿಕ ಮತ್ತೊಂದರಂತೆ ಸರಣಿ ಗೆಲ್ಲುತ್ತಲೇ ಮುನ್ನುಗ್ಗುತ್ತಿದೆ ಇಂಗ್ಲೆಂಡ್. ಇದೀಗ ತವರಿನಲ್ಲಿ ಐರ್ಲೆಂಡ್ ವಿರುದ್ಧ ಮತ್ತೊಂದು ಸುಲಭ ಗೆಲುವಿನ ಮೇಲೆ ಇಂಗ್ಲೆಂಡ್ ಚಿತ್ತ ನೆಟ್ಟಿದೆ. ಇನ್ನು ಮುಂದೆ ಆಶಸ್ ಸರಣಿ ಒರುವ ಕಾರಣ ಈ ಟೆಸ್ಟ್ ಪಂದ್ಯವನ್ನು ಸೂಕ್ತವಾಗಿ ಬಳಸಿಕೊಳ್ಳುವ ಲೆಕ್ಕಾಚಾರದಲ್ಲಿದೆ ಇಂಗ್ಲೆಂಡ್.

ಇನ್ನು ಐರ್ಲೆಂಡ್ ತಂಡ ತವರಿನಲ್ಲಿ ಇಂಗ್ಲೆಂಡ್ ತಂಡದ ಗೆಲುವಿನ ಓಟಕ್ಕೆ ತಡೆಯೊಡ್ಡುವ ಲೆಕ್ಕಾಚಾರದಲ್ಲಿದೆ. 2019ರಲ್ಲಿ ಇಂಗ್ಲೆಂಡ್ ವಿರುದ್ಧ ನೀಡಿದ್ದ ಪ್ರದರ್ಶನವನ್ನು ಈ ಬಾರಿಯೂ ಪುನರಾವರ್ತಿಸುವ ಶತ್ಮವಿಶ್ವಾಸದಲ್ಲಿದೆ. ನಾಲ್ಕು ವರ್ಷಗಳ ಹಿಂದೆ ಈ ಎರಡು ತಂಡಗಳು ಮೊದಲ ಬಾರಿಗೆ ಟೆಸ್ಟ್ ಮಾದರಿಯಲ್ಲಿ ಮುಖಾಮುಖಿಯಾಗಿದ್ದಾಗ ಐರಿಷ್ ಪಡೆ ಸೋಲು ಅನುಭವಿಸಿದ್ದರೂ ಮೊದಲ ಸೆಶನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿತ್ತು.
ಆದರೆ ಕಳೆದ ನಾಲ್ಕು ವರ್ಷಗಳಲ್ಲಿ ಐರ್ಲೆಂಡ್ ತಂಡದಲ್ಲಿ ಸಾಕಷ್ಟು ದಬಲಾವಣೆಗಳು ಆಗಿದ್ದು ಅನೇಕ ಪ್ರಮುಖ ಆಟಗಾರರು ತಂಡದಿಂದ ನವೃತ್ತರಾಗಿದ್ದಾರೆ. ಕೆವಿನ್ ಒಬ್ರಿಯನ್, ವಿಲಿಯಮ್ ಪಾರ್ಟರ್‌ಫೀಲ್ಡ್, ಗ್ಯಾರಿ ವಿಲ್ಸನ್, ವೇಗಿ ಟಿಮ್ ಮುರ್ಟಾಗ್, ಬಾಯ್ಡ್ ರಾಂಕಿನ್ ಈ ಹಿಂದಿನ ಬಾರಿಯ ತಂಡದ ಸದಸ್ಯರಾಗಿದ್ದರು.
ಇತ್ತಂಡಗಳ ಸಂಪೂರ್ಣ ಸ್ಕ್ವಾಡ್ ಹೀಗಿದೆ
ಇಂಗ್ಲೆಂಡ್ ತಂಡ: ಹ್ಯಾರಿ ಬ್ರೂಕ್, ಬೆನ್ ಡಕೆಟ್, ಜೋ ರೂಟ್, ಬೆನ್ ಸ್ಟೋಕ್ಸ್ (ನಾಯಕ), ಝಾಕ್ ಕ್ರಾಲಿ, ಜಾನಿ ಬೈರ್‌ಸ್ಟೋವ್ (ವಿಕೆಟ್ ಕೀಪರ್), ಆಲಿ ಪೋಪ್, ಕ್ರಿಸ್ ವೋಕ್ಸ್, ಆಲಿ ರಾಬಿನ್ಸನ್, ಮಾರ್ಕ್ ವುಡ್, ಸ್ಟುವರ್ಟ್ ಬ್ರಾಡ್, ಜೇಮ್ಸ್ ಆಂಡರ್ಸನ್, ಜ್ಯಾಕ್ ಲೀಚ್, ಡೇನಿಯಲ್ ಲಾರೆನ್ಸ್ , ಜೋಶ್ ಟಂಗ್, ಮ್ಯಾಥ್ಯೂ ಪಾಟ್ಸ್
ಐರ್ಲೆಂಡ್ ತಂಡ: ಹ್ಯಾರಿ ಟೆಕ್ಟರ್, ಆಂಡ್ರ್ಯೂ ಬಾಲ್ಬಿರ್ನಿ (ನಾಯಕ), ಪಾಲ್ ಸ್ಟಿರ್ಲಿಂಗ್, ಕರ್ಟಿಸ್ ಕ್ಯಾಂಫರ್, ಫಿಯಾನ್ ಹ್ಯಾಂಡ್, ಪೀಟರ್ ಮೂರ್, ಲೋರ್ಕನ್ ಟಕರ್ (ವಿಕೆಟ್ ಕೀಪರ್), ಜೇಮ್ಸ್ ಮೆಕ್ಕಾ=ಲಮ್, ಮಾರ್ಕ್ ಅಡೇರ್, ಆಂಡಿ ಮೆಕ್‌ಬ್ರೈನ್, ಜಾರ್ಜ್ ಡಾಕ್ರೆಲ್, ಕ್ರೇಗ್ ಯಂಗ್, ಗ್ರಹಾಂ ಹ್ಯೂಮ್, ಮ್ಯಾಥ್ ಫೋಸ್ಟರ್ , ಥಾಮಸ್ ಮೇಯಸ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications