ಶ್ರೀಲಂಕಾ ವಿರುದ್ಧದ ಟಿ20ಐನಿಂದ ಆಸೀಸ್ ವೇಗಿ ಆ್ಯಂಡ್ರ್ಯೂ ಟೈ ಹೊರಕ್ಕೆ

ಸಿಡ್ನಿ, ಅಕ್ಟೋಬರ್ 26: ಆಸ್ಟ್ರೇಲಿಯಾದ ಬಲಗೈ ವೇಗಿ ಆ್ಯಂಡ್ರ್ಯೂ ಟೈ ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಟಿ20ಐ ಸರಣಿಯಿಂದ ಹೊರಬಿದ್ದಿದ್ದಾರೆ. ಮೊಣಕೈ ಗಾಯಕ್ಕೊಳಗಾಗಿರುವ ಟೈಗೆ ಸರಣಿಯಲ್ಲಿ ಪಾಲ್ಗೊಳ್ಳಲಾಗುತ್ತಿಲ್ಲ. ಗಾಯದಿಂದ ಸುಧಾರಿಸಿಕೊಂಡಿರುವ ಆಸ್ಟ್ರೇಲಿಯಾ ನಾಯಕ ಆ್ಯರನ್ ಫಿಂಚ್ ತಂಡದಲ್ಲಿ ಕಾಣಿಸಿಕೊಂಡಿದ್ದಾರೆ.
ಶುಕ್ರವಾರ (ಅಕ್ಟೋಬರ್ 25) ಆಸ್ಟ್ರೇಲಿಯಾ ತಂಡದ ಅಭ್ಯಾಸದ ವೇಳೆ ಟೈ ಕೈಗೆ ಗಾಯ ಮಾಡಿಕೊಂಡಿದ್ದಾರೆ. ಹೀಗಾಗಿ ಭಾನುವಾರ (ಅಕ್ಟೋಬರ್ 27) ಅಡಿಲೇಡ್ ಓವಲ್‌ನಲ್ಲಿ ಆರಂಭಗೊಳ್ಳಲಿರುವ 3 ಪಂದ್ಯಗಳ ಟಿ20ಐ ಸರಣಿಯಿಂದ ಟೈ ಹೊರಗುಳಿಯುವಂತಾಗಿದೆ. ಆಸೀಸ್ ಆಕರ್ಷಣೀಯ ಜೋಡಿ ಸ್ಟೀವ್ ಸ್ಮಿತ್, ಡೇವಿಡ್ ವಾರ್ನರ್ ವರ್ಷದ ನಿಷೇಧದ ಬಳಿಕ ಮರಳಿ ಟಿ20ಐ ತಂಡ ಸೇರಿಕೊಂಡಿದೆ.
ಆಸ್ಟ್ರೇಲಿಯಾ ಟಿ20 ತಂಡ: ಆ್ಯರನ್ ಫಿಂಚ್ (ಸಿ), ಆ್ಯಷ್ಟನ್ ಅಗರ್, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮ್ಮಿನ್ಸ್, ಗ್ಲೆನ್ ಮ್ಯಾಕ್ಸ್‌ವೆಲ್, ಬೆನ್ ಮೆಕ್‌ಡರ್ಮೊಟ್, ಕೇನ್ ರಿಚರ್ಡ್‌ಸನ್, ಸ್ಟೀವ್ ಸ್ಮಿತ್, ಬಿಲ್ಲಿ ಸ್ಟ್ಯಾನ್‌ಲೇಕ್, ಮಿಚೆಲ್ ಸ್ಟಾರ್ಕ್, ಆಷ್ಟನ್ ಟರ್ನರ್, ಆಂಡ್ರ್ಯೂ ಟೈ, ಡೇವಿಡ್ ವಾರ್ನರ್, ಆಡಮ್ ಜಂಪಾ.
ಶ್ರೀಲಂಕಾ ಟಿ20 ತಂಡ: ಲಸಿತ್ ಮಾಲಿಂಗ (ಸಿ), ಕುಸಲ್ ಪೆರೆರಾ, ಕುಸಲ್ ಮೆಂಡಿಸ್, ದಾನುಷ್ಕಾ ಗುಣತಿಲಕ, ಅವಿಷ್ಕಾ ಫರ್ನಾಂಡೊ, ನಿರೋಷನ್ ಡಿಕ್ವೆಲ್ಲಾ, ದಾಸುನ್ ಶಾನಕಾ, ಶೆಹನ್ ಜಯಸೂರ್ಯ, ಭಾನುಕಾ ರಾಜಪಕ್ಸೆ, ಓಷಾದಾ ಫರ್ನಾಂಡೊ, ವನಿಂಡು ಹಸರಂಗ, ಲಕ್ಷನ ಸಾಂದಕುನ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications