Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಆರ್‌ಸಿಬಿ ತಂಡದ ಕೋಚ್‌ಗೆ ದಂಡ ವಿಧಿಸಿದ್ದು ಏಕೆ?

ರಾಯಲ್ ಚಾಲೆಂಜರ್ಸ್‌ ಬೆಂಗಳೂರು (ಆರ್‌ಸಿಬಿ) ತಂಡದ ಎರಡನೇ ತವರು ರಾಯ್‌ಪುರದಲ್ಲಿ ಭಾನುವಾರ ಈ ಲೀಗ್‌ನ ಮೊದಲ ಪಂದ್ಯ ನಡೆಯಿತು. ಈ ವೇಳೆ ಆರ್‌ಸಿಬಿ 2 ವಿಕೆಟ್‌ಗಳಿಂದ ಮುಂಬೈ ಇಂಡಿಯನ್ಸ್‌ (ಎಂಐ) ತಂಡವನ್ನು ಮಣಿಸಿ ಅಗ್ರಸ್ಥಾನಕ್ಕೆ ಬಡ್ತಿ ಪಡೆದಿದೆ. ಈ ಪಂದ್ಯದ ಗೆಲುವಿನ ಜೋಶ್‌ನಲ್ಲಿರುವ ಆರ್‌ಸಿಬಿ ತಂಡಕ್ಕೆ ದೊಡ್ಡ ಪೆಟ್ಟು ಬಿದ್ದಿದೆ.

ಮುಂಬೈ ವಿರುದ್ಧ ಜಯ ಸಾಧಿಸಿದ ಆರ್‌ಸಿಬಿ ಪ್ಲೇ ಆಫ್‌ಗೆ ಹತ್ತಿರವಾಗಿದೆ. ಈ ವೇಳೆ ಆರ್‌ಸಿಬಿ ತಂಡದ ಮುಖ್ಯ ತರಬೇತುದಾರರಿಗೆ ಭಾರಿ ದಂಡ ವಿಧಿಸಲಾಗಿದೆ. ಆಂಡಿ ಫ್ಲವರ್ ಅವರು ಐಪಿಎಲ್ ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘಿಸಿದ್ದಕ್ಕಾಗಿ ಪಂದ್ಯ ಶುಲ್ಕದ 15 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ. ಆಂಡಿ ಫ್ಲವರ್ ತಮ್ಮ ತಪ್ಪನ್ನು ಒಪ್ಪಿಕೊಂಡ ಕಾರಣ, ಔಪಚಾರಿಕ ವಿಚಾರಣೆಯ ಅಗತ್ಯವಿರಲಿಲ್ಲ. ಐಪಿಎಲ್‌ನಲ್ಲಿ ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿಗೆ ದಂಡ ವಿಧಿಸುವುದು ಅಪರೂಪವಾಗಿದೆ.

Andy Flower

ಭಾನುವಾರ ರೋಚಕತೆಯಿಂದ ಕೂಡಿದ್ದ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ. ಈ ಪಂದ್ಯದ ವೇಳೆ ಆರ್‌ಸಿಬಿ ತಂಡದ ಕೋಚ್‌ ಆಂಡಿ ಫ್ಲವರ್ ಅವರು ಅಶ್ಲೀಲತೆಗೆ ಸಂಬಂಧಿಸಿದ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ. ಐಪಿಎಲ್‌ ನಿಯಮ 2.3 ಅನ್ನು ಫ್ಲವರ್ ಉಲ್ಲಂಘಿಸಿದ್ದಾರೆ ಎಂದು ಅವರಿಗೆ ದಂಡ ವಿಧಿಸಲಾಗಿದೆ. ಆರ್‌ಸಿಬಿಯ ಗುರಿಯನ್ನು ಬೆನ್ನಟ್ಟಿದಾಗ 17.2 ನೇ ಓವರ್‌ನಲ್ಲಿ ಆಂಡಿ ಫ್ಲವರ್ ನಾಲ್ಕನೇ ಅಂಪೈರ್ ಜೊತೆ ತೀವ್ರ ವಾಗ್ವಾದ ನಡೆಸಿದಾಗ ಈ ಘಟನೆ ಸಂಭವಿಸಿದೆ.

ನಡೆದಿದ್ದು ಏನು?

ಗುರಿಯನ್ನು ಬೆನ್ನಟ್ಟಿದ ವೇಳೆ ಮುಂಬೈ ಇಂಡಿಯನ್ಸ್ ಬೌಲರ್ ಅಲ್ಲಾಹ್ ಗಜನ್‌ಫರ್ ಎದುರಿಸಿದ ಕೃನಾಲ್ ಪಾಂಡ್ಯ ವೈಡ್ ಲಾಂಗ್-ಆನ್ ಕಡೆಗೆ ಚೆಂಡನ್ನು ಬಾರಿಸಿದರು. ಅಲ್ಲಿ ಫೀಲ್ಡ್ ಮಾಡುತ್ತಿದ್ದ ನಮನ್‌ ಧೀರ್‌ ಚೆಂಡನ್ನು ಹಿಡಿಯಲು ಪ್ರಯತ್ನಿಸಿದರು. ಅಲ್ಲಿಯೇ ಸಮೀಪದಲ್ಲಿ ತಿಲಕ್ ವರ್ಮಾ ಫೀಲ್ಡ ಮಾಡುತ್ತಿದ್ದರು. ನಮನ್‌ ಚೆಂಡನ್ನು ಬೌಂಡರಿ ಗೆರೆ ದಾಟುವ ಮುನ್ನ ಚೆಂಡನ್ನು ಗಾಳಿಗೆ ತೂರಿದರು. ಆಗ ತಿಲಕ್ ವರ್ಮಾ ಕ್ಯಾಚ್ ಪಡೆಯಲು ವಿಫಲರಾದರು.

ಕೃನಾಲ್‌ ಬಾರಿಸಿದ ಚೆಂಡನ್ನು ಹಿಡಿಯುವಲ್ಲಿ ಮುಂದಾಗಿದ್ದ ನಮನ್ ಧೀರ್ ಅವರ ಒಂದು ಕಾಲು ಬೌಂಡರಿ ಕುಶನ್‌ಗೆ ತಗುಲಿರಬಹುದೆಂದು ರಿಪ್ಲೇ ನಲ್ಲಿ ತಿಳಿದು ಬರುತ್ತಿದೆ. ಕೃನಾಲ್‌ ಪಾಂಡ್ಯ ಸ್ನಾಯು ಸೆಳೆತಕ್ಕೆ ಒಳಗಾಗಿದ್ದರಿಂದ ರನ್ ಓಡಲು ಸಾಧ್ಯವಾಗಲಿಲ್ಲ. ಈ ವೇಳೆ ಆರ್‌ಸಿಬಿ ಕೋಚ್ ಫ್ಲವರ್, ಅಂಪೈರ್ ಜೊತೆ ಕೋಪದಿಂದ ಮಾತನಾಡುವುದು ಕಂಡು ಬಂದಿದೆ.

Story first published: Monday, May 11, 2026, 11:28 [IST]
Other articles published on May 11, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+