ಭಾರತ ವಿರುದ್ಧದ ಸರಣಿಗೂ ಮುನ್ನವೇ ಶ್ರೀಲಂಕಾದ ಏಂಜಲೋ ಮ್ಯಾಥ್ಯೂಸ್ ನಿವೃತ್ತಿ?!

ಕೊಲಂಬೋ: ಶ್ರೀಲಂಕಾ ಕ್ರಿಕೆಟ್ ತಂಡದ ಅನುಭವಿ ಆಲ್ ರೌಂಡರ್ ಏಂಜಲೋ ಮ್ಯಾಥ್ಯೂಸ್ ಶೀಘ್ರವೇ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎಂದು ವರದಿಯೊಂದು ಹೇಳಿದೆ. ಮ್ಯಾಥ್ಯೂಸ್ ಈಗಾಗಲೇ ಮುಂಬರಲಿರುವ ಭಾರತ-ಶ್ರೀಲಂಕಾ ಸೀಮಿತ ಓವರ್‌ಗಳ ಸರಣಿಯಿಂದಲೂ ದೂರ ಉಳಿಯುವ ನಿರ್ಧಾರ ಪ್ರಕಟಿಸಿದ್ದಾರೆ. ಶ್ರೀಲಂಕಾ ಪ್ರವಾಸದಲ್ಲಿರುವ ಶಿಖರ್ ಧವನ್ ಪಡೆ ಅಲ್ಲಿ ಮೂರು ಏಕದಿನ ಮತ್ತು ಮೂರು ಟಿ20ಐ ಪಂದ್ಯಗಳಿಗಾಗಿ ಸಿದ್ಧವಾಗಿದೆ.
34ರ ಹರೆಯದ ಏಂಜಲೋ ಮ್ಯಾಥ್ಯೂಸ್ ಇತ್ತೀಚೆಗೆ ಇಂಗ್ಲೆಂಡ್‌ಗೆ ಪ್ರವಾಸ ಕೈಗೊಂಡಿದ್ದ ಶ್ರೀಲಂಕಾ ತಂಡದಲ್ಲಿ ಇರಲಿಲ್ಲ. ಕಳೆದ ಏಪ್ರಿಲ್‌ನಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಮ್ಯಾಥ್ಯೂಸ್ ಕಡೇಯ ಸಾರಿ ಆಡಿದ್ದರು. ಮುಂದೆ ಭಾರತ-ಶ್ರೀಲಂಕಾ ಮಧ್ಯೆ ಜುಲೈ 13ರಿಂದ ಪ್ರವಾಸ ಸರಣಿ ನಡೆಯಲಿದ್ದು ಈ ಸರಣಿಯಲ್ಲೂ ಮ್ಯಾಥ್ಯೂಸ್ ಆಡುತ್ತಿಲ್ಲ.

30 ಮಂದಿಯಲ್ಲಿ 29 ಮಂದಿ ಭಾಗಿ
"ಭಾರತ ವಿರುದ್ಧದ ವೈಟ್‌ಬಾಲ್ ಸರಣಿಗಳಿಗಾಗಿ ನೋಂದಾಯಿಸಲ್ಪಟ್ಟಿದ್ದ 30 ಮಂದಿಯಲ್ಲಿ 29 ಮಂದಿ ಆಟಗಾರರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಲು ಶ್ರೀಲಂಕಾ ಕ್ರಿಕೆಟ್ ಬೋರ್ಡ್ (ಎಸ್‌ಸಿಎಲ್) ಬಯಸುತ್ತದೆ, ಈ 29 ಮಂದಿಯೂ ಪ್ರವಾಸ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ," ಎಂದು ಎಸ್‌ಸಿಎಲ್ ಪ್ರಟಕಣೆಯ ಮೂಲಕ ತಿಳಿಸಿದೆ. 30ರಲ್ಲಿ 29 ಮಂದಿ ಅಂದರೆ ಅದು ಮ್ಯಾಥ್ಯೂಸ್ ಹೊರತುಪಡಿಸಿ.

ಅಂತಾರಾಷ್ಟ್ರೀಯ ನಿವೃತ್ತಿಗಾಗಿ ಪತ್ರ
ವರದಿಯೊಂದರ ಪ್ರಕಾರ, ಏಂಜಲೋ ಮ್ಯಾಥ್ಯೂಸ್, ಶ್ರೀಲಂಕಾ ಕ್ರಿಕೆಟ್ ಬೋರ್ಡ್‌ಗೆ ಪತ್ರ ಬರೆದು ತಾನು ಅಂತಾರಾಷ್ಟ್ರೀಯ ನಿವೃತ್ತಿಯನ್ನು ಪರಿಗಣಿಸಲಿರುವುದಾಗಿ ಹೇಳಿದ್ದಾರೆ ಎನ್ನಲಾಗಿದೆ. ಆದ್ದರಿಂದ ಇನ್ನು ಕೆಲವೇ ದಿನಗಳಲ್ಲಿ ಮ್ಯಾಥ್ಯೂಸ್ ಅಂತಾರಾಷ್ಟ್ರೀಯ ನಿವೃತ್ತಿ ಘೋಷಿಸಲೂಬಹುದು.

ಮ್ಯಾಥ್ಯೂಸ್ ಕ್ರಿಕೆಟ್ ಸಾಧನೆ
ಬ್ಯಾಟಿಂಗ್ ಆಲ್ ರೌಂಡರ್ ಆಗಿರುವ ಏಂಜಲೋ ಮ್ಯಾಥ್ಯೂಸ್, 90 ಟೆಸ್ಟ್ ಪಂದ್ಯಗಳಲ್ಲಿ 6236 ರನ್, 33 ವಿಕೆಟ್, 218 ಏಕದಿನ ಪಂದ್ಯಗಳಲ್ಲಿ 5835 ರನ್, 120 ವಿಕೆಟ್, 78 ಟಿ20ಐ ಪಂದ್ಯಗಳಲ್ಲಿ 1148 ರನ್, 38 ವಿಕೆಟ್, 49 ಐಪಿಎಲ್ ಪಂದ್ಯಗಳಲ್ಲಿ 724 ರನ್, 27 ವಿಕೆಟ್ ದಾಖಲೆ ಹೊಂದಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications