Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

RCB vs KKR: ಅಂಗ್‌ಕ್ರಿಷ್‌ ರಘುವಂಶಿ ಅರ್ಧಶತಕದ ಸೊಬಗು

ರಾಯ್‌ಪುರ್: ಯುವ ಆಟಗಾರ ಅಂಗ್‌ಕ್ರಿಷ್‌ ರಘುವಂಶಿ ಅವರು ಬಾರಿಸಿದ ಅರ್ಧಶತಕದ ಬಲದಿಂದ ಕೋಲ್ಕತ್ತಾ ನೈಟ್ ರೈಡರ್ಸ್‌ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 19ನೇ ಆವೃತ್ತಿಯ 57ನೇ ಪಂದ್ಯದಲ್ಲಿ 193 ರನ್‌ಗಳ ಗುರಿಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡಕ್ಕೆ ನೀಡಿದೆ.

ಟಾಸ್ ಸೊತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಕೆಕೆಆರ್ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ಫಿನ್ ಅಲೆನ್‌ 3 ಬೌಂಡರಿ, 1 ಸಿಕ್ಸರ್ ಸಹಿತ 18 ರನ್‌ ಬಾರಿಸಿದ್ದಾಗ ಭುವನೇಶ್ವರ್ ಕುಮಾರ್ ಖೆಡ್ಡಾ ತೋಡಿದರು. ಈ ವೇಳೆ ತಂಡದ ಮೊತ್ತ 23 ರನ್‌ ಆಗಿತ್ತು. ಕೆಲವು ಸೊಗಸಾದ ಹೊಡೆತಗಳನ್ನು ಬಾರಿಸಿ ಭರವಸೆ ಮೂಡಿಸಿದ್ದ ಅಜಿಂಕ್ಯ ರಹಾನೆ, ಜೋಶ್ ಹ್ಯಾಜಲ್‌ವುಡ್ ಅವರ ಬೌನ್ಸ್‌ ಎಸೆತವನ್ನು ಪುಲ್ ಮಾಡಲು ಹೋಗಿ ಅವರಿಗೆ ಕ್ಯಾಚ್ ನೀಡಿದರು. ಇವರು 3 ಬೌಂಡರಿ, 1 ಸಿಕ್ಸರ್ ನೆರವಿನಿಂದ 19 ರನ್ ಬಾರಿಸಿದರು.

Angkrish

4.4 ಓವರ್‌ಗಳಲ್ಲಿ 48 ರನ್ ಸೇರಿಸಿ 2 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಕೆಕೆಆರ್ ತಂಡಕ್ಕೆ ಯುವ ಆಟಗಾರ ಅಂಗ್‌ಕ್ರಿಷ್ ರಘುವಂಶಿ ಹಾಗೂ ಆಲ್‌ರೌಂಡರ್‌ ಕ್ಯಾಮರೂನ್ ಗ್ರೀನ್‌ ಜವಾಬ್ದಾರಿಯುತ ಆಟವನ್ನು ಆಡುವ ಸೂಚನೆ ನೀಡಿತು. ಅಲ್ಲದೆ ಈ ಜೋಡಿ ಮಧ್ಯದ ಓವರ್‌ಗಳಲ್ಲಿ ವಿಕೆಟ್‌ ಬೀಳದಂತೆ ನೋಡಿಕೊಂಡು ರನ್‌ ವೇಗಕ್ಕೆ ಚುರುಕು ಮುಟ್ಟಿಸಿತು. ಈ ಜೋಡಿ 46 ಎಸೆತಗಳಲ್ಲಿ 68 ರನ್‌ ಸೇರಿಸಿತು. ಈ ಹಂತದಲ್ಲಿ ಕ್ಯಾಮರೂನ್ ಗ್ರೀನ್ 32 ರನ್ ಬಾರಿಸಿದ್ದಾಗ ರಸಿಕ್ ಸಲಾಂಗೆ ವಿಕೆಟ್ ಒಪ್ಪಿಸಿದರು.

ಅಂಗ್‌ಕ್ರಿಷ್‌ ಜವಾಬ್ದಾರಿಯುತ ಆಟ

4ನೇ ವಿಕೆಟ್‌ ಯುವ ಆಟಗಾರ ಅಂಗ್‌ಕ್ರಿಷ್‌ ರಘುವಂಶಿ ಅವರನ್ನು ಸೇರಿಕೊಂಡು ಭರವಸೆಯ ಆಟಗಾರ ರಿಂಕು ಸಿಂಗ್ ಜವಾಬ್ದಾರಿಯುತ ಆಟವನ್ನು ಆಡಿದರು. ಈ ಜೋಡಿ ಡೆತ್ ಓವರ್‌ಗಳಲ್ಲಿ ಸಮಯೋಚಿತ ಬ್ಯಾಟಿಂಗ್ ನಡೆಸಿತು.ಈ ಜೋಡಿ 46 ಎಸೆತಗಳಲ್ಲಿ 76 ರನ್‌ ಸೇರಿಸಿತು. ಭರವಸೆಯ ಬ್ಯಾಟರ್‌ ರಿಂಕು ಸಿಂಗ್ 3 ಬೌಂಡರಿ, 2 ಸಿಕ್ಸರ್ ಸಹಾಯದಿಂದ ಅಜೇಯ 49 ರನ್‌ ಸಿಡಿಸಿತು.

ಯುವ ಆಟಗಾರ ಅಂಗ್‌ಕ್ರಿಷ್‌ ರಘುವಂಶಿ ಕ್ಲಾಸ್ ಬ್ಯಾಟಿಂಗ್ ನಡೆಸಿದರು. ಇವರು 7 ಬೌಂಡರಿ, 3 ಸಿಕ್ಸರ್ ಸಹಾಯದಿಂದ 71 ರನ್‌ ಬಾರಿಸಿ ಇನಿಂಗ್ಸ್‌ ಕೊನೆಯ ಎಸೆತದಲ್ಲಿ ಎರಡು ರನ್ ಓಡಲು ಹೋಗಿ ರನ್ ಔಟ್ ಆದರು. ಆರ್‌ಸಿಬಿ ಕೊನೆಯ ಓವರ್‌ಗಳಲ್ಲಿ ಬಿಗುವಿನ ದಾಳಿ ನಡೆಸಿತು. ಕೆಕೆಆರ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 192 ರನ್‌ ಸೇರಿಸಿತು. ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್, ಜೋಶ್‌ ಹ್ಯಾಜಲ್‌ವುಡ್, ರಸಿಕ್ ಸಲಾಂ ದಾರ್ ತಲಾ ಒಂದು ವಿಕೆಟ್‌ ಪಡೆದರು.

Story first published: Wednesday, May 13, 2026, 22:27 [IST]
Other articles published on May 13, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+