Angkrish Raghuvanshi: ಐಪಿಎಲ್‌ನಲ್ಲಿ ಹುಟ್ಟಿಕೊಂಡ ಮತ್ತೊಂದು ವಿವಾದ: ಅಂಗ್‌ಕ್ರಿಷ್ ಔಟ್ ಅಥವಾ ನಟೌಟ್?
ಲಕ್ನೋ ಸೂಪರ್ ಜೈಂಟ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಐಪಿಎಲ್ 2026 ಪಂದ್ಯದ ಸಮಯದಲ್ಲಿ, ವಿವಾದ ಎಲ್ಲರ ಚಿತ್ತ ಕದ್ದಿದೆ. ಕೋಲ್ಕತ್ತಾ ತಂಡ ಬ್ಯಾಟಿಂಗ್ ಮಾಡುವಾಗ ಯುವ ಬ್ಯಾಟರ್ ಅಂಗ್‌ಕ್ರಿಷ್ ರಘುವಂಶಿ ಔಟ್ ಆಗಿದ್ದು, ಈಗ ವಿವಾದವನ್ನು ಸೃಷ್ಟಿಸಿದೆ.
19ನೇ ಆವೃತ್ತಿ ಐಪಿಎಲ್‌ನ 38ನೇ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಕೆಕೆಆರ್ ತಂಡದ ಆರಂಭ ಕಳಪೆಯಾಗಿತ್ತು. ಟಿಮ್ ಸಿಫರ್ಟ್ ಔಟ್ ಆಗುತ್ತಿದ್ದಂತೆ ಕ್ರೀಸ್‌ಗೆ ಬಂದ ಅಂಗ್‌ಕ್ರಿಷ್, ಅಜಿಂಕ್ಯ ರಹಾನೆ ಅವರೊಂದಿಗೆ ಇನಿಂಗ್ಸ್ ಕಟ್ಟುವ ಸೂಚನೆ ನೀಡಿದ್ದರು. ಆದರೆ ರಹಾನೆ ಸಹ 10 ರನ್‌ಗಳಿಗೆ ಔಟ್ ಆದರು. ಇನಿಂಗ್ಸ್‌ನ ಐದನೇ ಓವರ್‌ನ ಕೊನೆಯ ಎಸೆತವನ್ನು ಅಂಗ್‌ಕ್ರಿಷ್ ಬ್ಯಾಟಿಂಗ್ ಮಾಡುತ್ತಿದ್ದರು. ಆಗ ರಘುವಂಶಿ ಪಂಚ್ ಮಾಡಿ ಸಿಂಗಲ್ ಪಡೆಯಲು ಮುಂದಾದರು.

ಪ್ರಿನ್ಸ್ ಯಾದವ್ ಅವರ ಎಸೆತದಲ್ಲಿ ಅಂಗ್‌ಕ್ರಿಷ್ ಚೆಂಡನ್ನು ಮಿಡ್ ಆನ್‌ನತ್ತ ತಳ್ಳಿದರು. ಇದೇ ಕ್ಷೇತ್ರದಲ್ಲಿ ಫೀಲ್ಡ್ ಮಾಡುತ್ತಿದ್ದ ಶಮಿ ಚೆಂಡನ್ನು ಹಿಡಿದು ಎಸೆಯಲು ಮುಂದಾದರು. ಇದನ್ನು ನೋಡಿದ ಅಂಗ್‌ಕ್ರಿಷ್ ಕ್ರೀಸ್‌ನತ್ತ ಓಡಲು ಮುಂದಾದರು. ಆಗ ಅವರು ಚೆಂಡು ಅವರ ಬದಿಗೆ ಬರುತ್ತಿರುವುದನ್ನು ನೋಡಿ ಅಂಗ್‌ಕ್ರಿಷ್ ಕ್ರೀಸ್‌ನತ್ತ ಮುಂದಾದರು. ಆಗ ಶಮಿ ಎಸೆದ ಚೆಂಡು ಇವರಿಗೆ ತಾಗಿತು. ಎಲ್‌ಎಸ್‌ಜಿ ಮೇಲ್ಮನವಿ ಸಲ್ಲಿಸಿತು. ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ್ದಕ್ಕಾಗಿ ಅಂಗ್‌ಕ್ರಿಷ್ ಅವರನ್ನು ಮೂರನೇ ಅಂಪೈರ್ ಔಟ್ ಎಂದು ಘೋಷಿಸಿದರು. ಇದು ಸ್ಪಷ್ಟವಾಗಿ ಕೆಕೆಆರ್ ಶಿಬಿರದಲ್ಲಿ ಅಸಮಾಧಾನಕ್ಕೆ ಕಾರಣವಾಯಿತು.
ರಘುವಂಶಿ ನಿರಾಶೆ ಗೊಂಡು ಪೆವಿಲಿಯನ್‌ನತ್ತ ಸಾಗಿದರು. ಅಂಗ್‌ಕ್ರಿಷ್ ಈ ನಿರ್ಧಾರವನ್ನು ಸಂಪೂರ್ಣವಾಗಿ ಒಪ್ಪಲಿಲ್ಲ. ಮೈದಾನದಿಂದ ಡ್ರೆಸ್ಸಿಂಗ್ ರೂಮ್‌ನತ್ತ ಹೊರುಡುವಾಗ ತಮ್ಮ ಬ್ಯಾಟ್ ಅನ್ನು ನೆಲಕ್ಕೆ ಬಡಿದು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಮುಖ್ಯ ಕೋಚ್ ಅಭಿಷೇಕ್ ನಾಯರ್ ತಕ್ಷಣವೇ ನಾಲ್ಕನೇ ಅಂಪೈರ್ ಜೊತೆ ಚರ್ಚೆ ನಡೆಸಲು ಆರಂಭಿಸಿದರು.
ಔಟ್ ನೀಡಿದ್ದು ಹೇಗೆ?
ಅಂಗ್‌ಕ್ರಿಷ್ ಚೆಂಡನ್ನು ಪಂಚ್ ಮಾಡಿದ ಬಳಿಕ ಓಡಲು ಆರಂಭಿಸಿದರು. ಅಲ್ಲದೆ ಶಮಿ ಥ್ರೋ ಮಾಡಿದ್ದನ್ನು ಕಂಡು ಅಂಗ್‌ಕ್ರಿಷ್ ತಾವು ಓಡುತ್ತಿದ್ದ ದಿಕ್ಕನ್ನು ಬದಲಿಸಿದರು ಎಂದು ಮೂರನೇ ಅಂಪೈರ್ ಗಮನಿಸಿದರು. ಇದೇ ಕಾರಣಕ್ಕೆ ಅವರನ್ನು ಔಟ್ ಎಂದು ತಿಳಿಸಲಾಯಿತು. ಟಿವಿ ಅಂಪೈರ್ ಅವರ ಈ ಕ್ರಮವು ಫೀಲ್ಡರ್ ರನ್ ಔಟ್ ಮಾಡುವ ಪ್ರಯತ್ನಕ್ಕೆ ಅಡ್ಡಿಯಾಗಬಹುದೆಂದು ಭಾವಿಸಿದರು. ಬಳಿಕ ಅವರನ್ನು ಟಿವಿ ಅಂಪೈರ್ ಔಟ್ ಎಂದು ತಿಳಿಸಿದರು. ಈ ಘಟನೆಯ ನಂತರ ಕೋಲ್ಕತ್ತಾ ನೈಟ್ ರೈಡರ್ಸ್ ಡಗೌಟ್‌ನಲ್ಲಿ ನಿರಾಶೆ ಮತ್ತು ಕೋಪವು ಸ್ಪಷ್ಟವಾಗಿತ್ತು.
ಅಂಗ್‌ಕ್ರಿಷ್ ರಘುವಂಶಿ 8 ಎಸೆತಗಳಲ್ಲಿ 1 ಬೌಂಡರಿ ನೆರವಿನಿಂದ 9 ರನ್ ಸೇರಿಸಿದರು. ಅಂತಿಮವಾಗಿ ಕೆಕೆಆರ್ ತಂಡ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 155 ರನ್ ಸೇರಿಸಿತು. ಈ ವೇಳೆ ರಿಂಕು ಸಿಂಗ್ ಅಬ್ಬರದ ಬ್ಯಾಟಿಂಗ್ ನಡೆಸಿ ತಂಡಕ್ಕೆ ನೆರವಾದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications