Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಇದೇ ವರ್ಷ ಐಪಿಎಲ್ ನಡೆಯುತ್ತೆ ಅಂತಿದ್ದಾರೆ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ

Anil Kumble Hopeful For IPL 2020 Despite Coronavirus

ಬೆಂಗಳೂರು, ಮೇ 28: ಟೀಮ್ ಇಂಡಿಯಾದ ಮಾಜಿ ನಾಯಕ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್‌ನ ಮುಖ್ಯ ಕೋಚ್ ಅನಿಲ್ ಕುಂಬ್ಳೆ ಇದೇ ವರ್ಷ ಐಪಿಎಲ್ ನಡೆಯುವ ಬಗ್ಗೆ ಭರವಸೆ ವ್ಯಕ್ತಪಡಿಸಿದ್ದಾರೆ. ಕೊರೊನಾವೈರಸ್ ಕಾರಣ ವೀಕ್ಷಕರಿಲ್ಲದ ಮೈದಾನದಲ್ಲಿ ಟೂರ್ನಿ ನಡೆಸುವ ಸಾಧ್ಯತೆಯು ಇದೆ ಎಂದು ಕುಂಬ್ಳೆ ಹೇಳಿದ್ದಾರೆ.

ಐಪಿಎಲ್ ಕುರಿತು ಇನ್ನೂ ಅಧಿಕೃತ ನಿರ್ಧಾರ ಪ್ರಕಟವಾಗಿಲ್ಲ, ಆದರೆ ಮಾಹಿತಿಯ ಪ್ರಕಾರ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅಕ್ಟೋಬರ್‌ನಲ್ಲಿ ಐಪಿಎಲ್ ನಡೆಸುವ ಆಲೋಚನೆಯಲ್ಲಿ ಇದೆ ಎನ್ನಲಾಗಿದೆ. ಈ ವರ್ಷ ಐಪಿಎಲ್ ಮಾರ್ಚ್ 29ಕ್ಕೆ ಆರಂಭವಾಗಬೇಕಿತ್ತು.

'ವೇಳಾಪಟ್ಟಿಯನ್ನು ಅವಲೋಕಿಸಿದರೆ ನಾವು ಈ ವರ್ಷವೇ ಐಪಿಎಲ್ ನಡೆಸುವ ಭರವಸೆ ಮತ್ತು ಆಶಾವಾದವನ್ನು ಇಟ್ಟುಕೊಳ್ಳಬಹುದಾಗಿದೆ,' ಎಂದು ಸ್ಟಾರ್ ಸ್ಪೋರ್ಟ್‌ನ ಕ್ರಿಕೆಟ್‌ ಕನೆಕ್ಟ್ ಶೋನಲ್ಲಿ ಮಾತನಾಡಿದ ಕುಂಬ್ಳೆ ಹೇಳಿಕೊಂಡಿದ್ದಾರೆ.

ಪ್ರೇಕ್ಷಕರಿಲ್ಲ ಸ್ಟೇಡಿಯಂನಲ್ಲಿ ಟೂರ್ನಿ ನಡೆಸುವುದಾದರೆ ನಮ್ಮಲ್ಲಿ 3 ಅಥವಾ 4 ಸ್ಟೇಡಿಯಂಗಳಿವೆ. ಹೀಗಾಗಿ ಈ ವರ್ಷವೇ ಐಪಿಎಲ್ ನಡೆಯುವ ಸಾಧ್ಯತೆ ಇನ್ನೂ ಉಳಿದಿದೆ. ನಮಗಿನ್ನೂ ಆ ಬಗ್ಗೆ ಆಶಾಭಾವನೆಯಿದೆ,' ಎಂದು ಐಸಿಸಿ ಕ್ರಿಕೆಟ್ ಕಮಿಟಿಯ ಅಧ್ಯಕ್ಷರೂ ಆಗಿರುವ ಮಾಜಿ ಸ್ಪಿನ್ನರ್ ಕುಂಬ್ಳೆ ಹೇಳಿದ್ದಾರೆ.

Story first published: Thursday, May 28, 2020, 15:24 [IST]
Other articles published on May 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+