ಕುಂಬ್ಳೆಯಿಂದ ಕೊಹ್ಲಿ ಜತೆಗಿನ ಖಾಸಗಿ ಚಾಟ್ ಬಹಿರಂಗ?
ಲಂಡನ್, ಜೂನ್ 01: ಟೀಂ ಇಂಡಿಯಾದ ಕೋಚ್ ಅನಿಲ್ ಕುಂಬ್ಳೆ ಹಾಗೂ ನಾಯಕ ವಿರಾಟ್ ಕೊಹ್ಲಿ ನಡುವಿನ ಕಲಹಕೆಕ್ ಕೊನೆಯೇ ಇಲ್ಲದ್ದಂತಾಗಿದೆ. ತನ್ನ ನಡೆ ಸರಿ ಎಂದು ತೋರಿಸಲು ಕುಂಬ್ಳೆ ಅವರು ಕೊಹ್ಲಿ ಜತೆಗಿನ ವಾಟ್ಸಾಪ್ ಚಾಟ್ ಬಹಿರಂಗಪಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಕೋಚ್ ಅನಿಲ್ ಕುಂಬ್ಳೆ ಅವರು ತಮ್ಮ ಕೆಲ ನಂಬಿಕಸ್ಥ ಮಾಧ್ಯಮದ ಸ್ನೇಹಿತರೊಂದಿಗೆ ವಾಟ್ಸಪ್ ಚಾಟ್ ಹಂಚಿಕೊಂಡಿರುವ ವಿಷಯ ತಿಳಿದುಬಂದಿದೆ. ತಂಡದ ಹಿರಿಯ ಅಟಗಾರರೊಂದಿಗೆ ನಡೆಸಿದ ಕೆಲ ಗೌಪ್ಯ ಚರ್ಚೆಗಳು, ಕೊಹ್ಲಿ ಜತೆಗಿನ ಖಾಸಗಿ ಚರ್ಚೆಗಳನ್ನು ಕುಂಬ್ಳೆ ಅವರು ಸೋರಿಕೆ ಮಾಡಿದ್ದಾರೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಡಿಎನ್ಎ ಪತ್ರಿಕೆಗೆ ತಿಳಿಸಿದ್ದಾರೆ.

ನಾಯಕ ವಿರಾಟ್ ಕೊಹ್ಲಿ ಹಾಗೂ ಅನಿಲ್ ಕುಂಬ್ಳೆ ನಡುವಿನ ವಿರಸದ ಬಗ್ಗೆ ದಿನಕ್ಕೊಂದು ಕತೆಗಳು ಬರುತ್ತಿವೆ. ಟೀಂ ಇಂಡಿಯಾ ಆಟಗಾರರು, ಕುಂಬ್ಳೆ ವಿರುದ್ಧ ಬಿಸಿಸಿಸಿಗೆ ದೂರು ನೀಡಿರುವ ಸುದ್ದಿ ಬಂದ ಬಳಿಕ ಕ್ರಿಕೆಟ್ ಜಗತ್ತಿನ ಸಂಚಲನ ಮೂಡಿಸಿದೆ. ಇವರಿಬ್ಬರ ನಡುವಿನ ಕಲಹ ಐಪಿಎಲ್ ಸೀಸನ್ 1ನಿಂದಲೂ ಇದೆ ಎಂದು ಆರ್ ಸಿಬಿಯ ಮೊದಲ ಕೋಚ್ ರೇ ಜೆನ್ನಿಂಗ್ಸ್ ಹೇಳಿದ್ದಾರೆ. ಇದೀಗ ಹಿರಿಯ ಸ್ಪಿನ್ನರ್ ಹರ್ಭಜನ್ ಸಿಂಗ್ ಅವರು ಅನಿಲ್ ಕುಂಬ್ಳೆ ಪರ ನಿಂತಿದ್ದಾರೆ..
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications