Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಬೌಂಡರಿ ಕೌಂಟ್‌' ಚರ್ಚಿಸಲಿರುವ ಐಸಿಸಿ ಸಮಿತಿಗೆ ಅನಿಲ್ ಕುಂಬ್ಳೆ ನೇತೃತ್ವ

Anil Kumble-led ICC cricket panel to discuss boundary count rule

ನವದೆಹಲಿ, ಜುಲೈ 29: ಐಸಿಸಿ ವಿಶ್ವಕಪ್‌ 2019ರ ಫೈನಲ್‌ನಲ್ಲಿ ವಿವಾದಾತ್ಮಕ ಬೌಂಡರಿ ಕೌಂಟ್ ನಿಯಮದ ಕುರಿತು ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ಮುಂದಿನ ಸಭೆಯಲ್ಲಿ ಚರ್ಚಿಸಲಿದೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಜನರಲ್ ಮ್ಯಾನೇಜರ್ ಜೆಫ್ ಅಲ್ಲಾರ್ಡೈಸ್ ಈ ವಿಚಾರವನ್ನು ತಿಳಿಸಿದ್ದಾರೆ.

'ಮುಂದಿನ ಸಭೆಯಲ್ಲಿ ಕ್ರಿಕೆಟ್ ಸಮಿತಿಯು ವಿಶ್ವಕಪ್ ವೇಳೆ ಹುಟ್ಟಿಕೊಂಡ ವಿವಾದಗಳನ್ನು ಪರಿಗಣಿಸಲಿದೆ,' ಎಂದು ಅಲ್ಲಾರ್ಡೈಸ್ ಕ್ರಿಕ್‌ ಇನ್ಫೋ ಜೊತೆ ಹೇಳಿದ್ದಾರೆ. ಐಸಿಸಿ ಕ್ರಿಕೆಟ್ ಮುಂದಿನ ಸಭೆಯು 2020ರ ಮೊದಲ ತ್ರೈಮಾಸಿಕದಲ್ಲಿ ನಡೆಯಲಿದೆ.

'ಪಂದ್ಯ ಟೈ ಆದಾಗ 2009ರಿಂದಲೂ ವಿಜೇತ ತಂಡವನ್ನು ನಿರ್ಧರಿಸಲು ಐಸಿಸಿ ಪಂದ್ಯಗಳಲ್ಲಿ ಬೌಲ್‌ ಔಟ್‌ಗೆ ಬದಲಾಗಿ ಸೂಪರ್ ಓವರ್ ನಿಯಮವನ್ನು ಅನುಸರಿಸಲಾಗುತ್ತಿದೆ. ಸೂಪರ್ ಓವರ್‌ನಲ್ಲೂ ಪಂದ್ಯ ಸಮಬಲ ಎನಿಸಿದರೆ ಟೈ ಬ್ರೇಕರ್ ಅಗತ್ಯ ಬರುತ್ತದೆ. ಆದ್ದರಿಂದ ಸಭೆಯ ಚರ್ಚೆ ಪಂದ್ಯದಲ್ಲಿ ಗಳಿಸಿದ ಬೌಂಡರಿಗಳ ಸಂಖ್ಯೆಗೆ ಸಂಬಂಧಿಸಿದೆ,' ಎಂದು ಜೆಫ್ ಅಲ್ಲಾರ್ಡೈಸ್ ವಿವರಿಸಿದ್ದಾರೆ.

ಲಾರ್ಡ್ಸ್‌ನಲ್ಲಿ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್-ಇಂಗ್ಲೆಂಡ್‌ ತಂಡಗಳು ಸಮಬಲ ಸಾಧಿಸಿದ್ದವು. ಸೂಪರ್ ಓವರ್‌ ಕೂಡ ಟೈ ಎನಿಸಿತ್ತು. ಆದರೆ ಬೌಂಡಿರಿ ನಿಯಮದ ಆಧಾರದಲ್ಲಿ ಅತಿಥೇಯ ಇಂಗ್ಲೆಂಡನ್ನು ವಿಜಯಿ ಎಂದು ಘೋಷಿಸಲಾಗಿತ್ತು. ಈ ಪಂದ್ಯದಲ್ಲಿ ಇಂಗ್ಲೆಂಡ್ 24 ಬೌಂಡರಿ, ಕಿವೀಸ್ 17 ಬೌಂಡರಿ ದಾಖಲಿಸಿದ್ದವು.

Story first published: Monday, July 29, 2019, 10:17 [IST]
Other articles published on Jul 29, 2019
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+