ಕುಂಬ್ಳೆ ಆರಿಸಿದ ವಿಶ್ವಕಪ್ 2019ರ ಭಾರತ ತಂಡದಲ್ಲಿ ಅಚ್ಚರಿಯ ಮುಖಗಳು!

ಬೆಂಗಳೂರು, ಮಾರ್ಚ್ 16: ಪ್ರತಿಷ್ಠಿತ ಕ್ರಿಕೆಟ್ ವಿಶ್ವಕಪ್ 2019ಕ್ಕೆ ಭಾರತ ತಂಡ ಹೇಗಿರಬೇಕು? ತಂಡದಲ್ಲಿ ಯಾರ್ಯಾರಿರಬೇಕು ಎಂಬ ಚರ್ಚೆಗಳು ಕ್ರಿಕೆಟ್ ಅಭಿಮಾನಿಗಳಲ್ಲಿ ಜೋರಾಗಿ ನಡೆಯುತ್ತಿದೆ. ಕನ್ನಡಿಗ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆಯೂ ವಿಶ್ವಕಪ್‌ಗಾಗಿ ನೆಚ್ಚಿನ ಭಾರತ ತಂಡವನ್ನು ಹೆಕ್ಕಿ ತೆಗೆಗಿದ್ದಾರೆ.
ನಾವೂ-ನೀವೂ ಕೂತಲ್ಲಿಂದಲೇ, ತಂಡದಲ್ಲಿ ಅವನಿರಬೇಕಿತ್ತು, ಇವನಿರಬಾರದಿತ್ತು ಅನ್ನೋದಕ್ಕಿಂತ ಅನಿಲ್ ಕುಂಬ್ಳೆಯಂತ ಪ್ರತಿಭಾನ್ವಿತ ಕ್ರೀಡಾಪಟುಗಳು ಮೆಚ್ಚಿನ ತಂಡವೊಂದನ್ನು ಆರಿಸಿ ಕೊಟ್ಟರೆ ಅದು ಹೆಚ್ಚು ಅರ್ಥಪೂರ್ಣವಾಗಿರತ್ತೆ. ಕುಂಬ್ಳೆ ಆರಿಸಿರುವ 15 ಜನರ ತಂಡ ನಿಜಕ್ಕೂ ಬಲಿಷ್ಠವಾಗಿದೆ.
ಕುಂಬ್ಳೆ ಆರಿಸಿರುವ ಈ ತಂಡವೇ ವಿಶ್ವಕಪ್‌ನಲ್ಲಿ ಇರತ್ತೋ ಗೊತ್ತಿಲ್ಲ. ಆದ್ರೆ ಅನಿಲ್ ಆರಿಸಿರುವ ಈ ತಂಡ ನಿಜಕ್ಕೂ ಬ್ಯಾಲನ್ಸ್ಡ್ ಆಗಿದೆ. ಇದರಲ್ಲಿ ಉತ್ತಮ ಬೌಲರ್‌ಗಳಿದ್ದಾರೆ, ಬ್ಯಾಟ್ಸ್ಮನ್‌ಗಳಿದ್ದಾರೆ, ಯುವಕರಿದ್ದಾರೆ, ಅನುಭವಿಗಳಿದ್ದಾರೆ, ಆಲ್ ರೌಂಡರ್‌ಗಳೂ ಸೇರಿದ್ದಾರೆ. ಕುಂಬ್ಳೆ ತಂಡ ಕೆಳಗಿದೆ ನೋಡಿ.
ವಿಶ್ವಕಪ್ 2019ಕ್ಕೆ ಕುಂಬ್ಳೆಯ ನೆಚ್ಚಿನ ತಂಡ: ವಿರಾಟ್ ಕೊಹ್ಲಿ (ನಾಯಕ), ಎಂಎಸ್ ಧೋನಿ, ರೋಹಿತ್ ಶರ್ಮಾ, ಶಿಖರ್ ಧವನ್, ಕೇದಾರ್ ಜಾಧವ್, ಹಾರ್ದಿಕ್ ಪಾಂಡ್ಯ, ಭುವನೇಶ್ವರ ಕುಮಾರ್, ಕುಲದೀಪ್ ಯಾದವ್, ಯುಜುವೇಂದ್ರ ಚಾಹಲ್, ಮೊಹಮ್ಮದ್ ಶಮಿ, ಜಸ್‌ಪ್ರೀತ್ ಬೂಮ್ರಾ, ಖಲೀಲ್ ಅಹ್ಮದ್, ಅಂಬಾಟಿ ರಾಯುಡು, ರಿಷಬ್ ಪಂತ್ ಮತ್ತು ವಿಜಯ್ ಶಂಕರ್.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications