Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಈತ ಆಡುವುದು ಬ್ಯಾಟರ್‌ಗಳ ಮೆದುಳಿದ ಜೊತೆಗೆ: ಟೀಮ್ ಇಂಡಿಯಾ ಬೌಲರ್ ಬಗ್ಗೆ ಅನಿಲ್ ಕುಂಬ್ಳೆ ಮಾತು

ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ ಟೀಮ್ ಇಂಡಿಯಾದ ಆಲಿ ಅನುಭವಿ ಬೌಲರ್ ಬಗ್ಗೆ ವಿಶೇಷ ಪ್ರಶಂಸೆಯ ಮಾತುಗಳನ್ನಾಡಿದ್ದಾರೆ. ಟೆಸ್ಟ್ ಮಾದರಿಯ ನಂಬರ್ 1 ಬೌಲರ್ ಎನಿಸಿಕೊಂಡಿರುವ ಆರ್ ಅಶ್ವಿನ್ ವೆಸ್ಟ್ ಇಂಡೀಸ್ ವಿರುದ್ಧವೂ ಅಮೋಘ ಪ್ರದರ್ಶನ ನೀಡಿ ಹಲವು ದಾಖಲೆಗಳನ್ನು ಬರೆದಿದ್ದು ಈ ಹಿನ್ನೆಲೆಯಲ್ಲಿ ಅನಿಲ್ ಕುಂಬ್ಳೆ ವಿಶೇಷ ಪ್ರಶಂಸೆಯ ಮಾತುಗಳ್ನಾಡಿದ್ದಾರೆ.

ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಪಂದ್ಯದ ಎರಡು ಇನ್ನಿಂಗ್ಸ್‌ನಲ್ಲಿಯೂ ಅಶ್ವಿನ್ ಐದು ವಿಕೆಟ್‌ಗಳ ಗೊಂಚಲು ತಮ್ಮದಾಗಿಸಿಕೊಂಡಿದ್ದು ಟೆಸ್ಟ್ ಮಾದರಿಯಲ್ಲಿ ತಮ್ಮ 8ನೇ 10 ವಿಕೆಟ್‌ಗಳ ಗೊಂಚಲನ್ನು ಪೂರ್ಣಗೊಳಿಸಿದ್ದಾರೆ. ಇದು ಅನಿಲ್ ಕುಂಬ್ಳೆ ದಾಖಲೆಗೆ ಸಮವಾಗಿದ್ದು ಭಾರತೀಯ ಬೌಲರ್‌ಗಳ ಪೈಕಿ ಅಶ್ವಿನ್ ಅನಿಲ್ ಕುಂಬ್ಳೆ ಜಂಡಿಯಾಗಿ ಈ ದಾಖಲೆ ಹೊಂದಿದಂತಾಗಿದೆ.

Anil Kumble praises R Ashwin said he plays with the batsmens mind

ಇದೀಗ ಟೆಸ್ಟ್ ಮಾದರಿಯಲ್ಲಿ ಅತಿ ಹೆಚ್ಚು ಐದು ವಿಕೆಟ್‌ಗಳ ಗೊಂಚಲು ಪಡೆದ ದಾಖಲೆ ಕೂಡ ಸಮಬಲಗೊಳಿಸುವ ಅವಕಾಶ ಅಶ್ವಿನ್ ಮುಂದಿದ್ದು ಅದಕ್ಕಾಗಿ ಅಶ್ವಿನ್ ಕೇವಲ ಒಂದು ಐದು ವಿಕೆಟ್‌ಗಳ ಗೊಪಂಚಲು ಪಡೆಯಬೇಕಿದೆ. ಅನಿಲ್ ಕುಂಬ್ಳೆ 35 ಬಾರಿ 5 ವಿಕೆಟ್‌ಗಳ ಗೊಂಚಲು ಕಬಳಿಸಿ ಈ ದಾಖಲೆ ಹೊಂದಿದ್ದಾರೆ.

ಎರಡನೇ ಪಂದ್ಯಕ್ಕೂ ಮುನ್ನ ಅಶ್ವಿನ್ ಬೌಲಿಂಗ್ ಪ್ರದರ್ಶನದ ಬಗ್ಗೆ ಹಾಗೂ ಮಾನಸಿಕ ಸಾಮರ್ಥ್ಯದ ಬಗ್ಗೆ ಅನಿಲ್ ಕುಂಬ್ಳೆ ವಿಶೇಷ ಮಾತುಗಳನ್ನಾಡಿದ್ದಾರೆ. "ಅಶ್ವಿನ್ ಬ್ಯಾಟರ್‌ಗಳ ಮೆದುಳಿನ ಜೊತೆಗೆ ಆಡುತ್ತಾರೆ. ಇದು ನೀಮ್ಮಲ್ಲಿರುವ ಕೌಶಲ್ಯಗಳಿಂದ ಮಾತ್ರವಲ್ಲದೆ ಬ್ಯಾಟರ್ ಮೇಲೆ ಒತ್ತಡವನ್ನು ಉಂಟುಮಾಡುವ ಸಾಮರ್ಥ್ಯವೂ ಆಗಿದೆ. ಆರ್ ಅಶ್ವಿನ್ ಅವರನ್ನು ಎದುರಿಸಿದ ಪ್ರತಿಯೊಬ್ಬ ಬ್ಯಾಟರ್ ಕೂಡ ತಮ್ಮ ದೇಹಭಾಷೆಯಲ್ಲಿಯೇ ಇದನ್ನು ವ್ಯಕ್ತಪಡಿಸಿದ್ದಾರೆ" ಎಂದಿದ್ದಾರೆ ಅನಿಲ್ ಕುಂಬ್ಳೆ.

ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕೋಚ್ ಕೂಡ ಆಗಿರುವ ಅನಿಲ್ ಕುಂಬ್ಳೆ ಅನುಭವಿ ಸ್ಪಿನ್ನರ್ ಅಶ್ವಿನ್ ಅವರ ಪಿಚ್ ಅರ್ಥ ಮಾಡಿಕೊಳ್ಳುವ ಸಾಮರ್ಥ್ಯವನ್ನು ಕೂಡ ಕೊಂಡಾಡಿದ್ದು ಪಿಚ್ ಹಾಗೂ ವಾತಾವರಣವನ್ನು ನೋಡಿಕೊಂಡು ಅದಕ್ಕೆ ಪೂರಕವಾಗಿ ತಮ್ಮ ರಣತಂತ್ರಗಳನ್ನು ಅಶ್ವಿನ್ ಬದಲಾಯಿಸುತ್ತಾರೆ ಎಂದಿದ್ದಾರೆ.

2ನೇ ಟೆಸ್ಟ್‌ಗೆ ವೆಸ್ಟ್ ಇಂಡೀಸ್ ತಂಡ: ಕ್ರೈಗ್ ಬ್ರಾಥ್‌ವೈಟ್ (ನಾಯಕ), ಜೆರ್ಮೈನ್ ಬ್ಲಾಕ್‌ವುಡ್ (ಉಪನಾಯಕ), ಅಲಿಕ್ ಅಥಾನಾಜೆ, ಟಾಗೆನರೈನ್ ಚಂದ್ರಪಾಲ್, ರಹಕೀಮ್ ಕಾರ್ನ್‌ವಾಲ್, ಜೋಶುವಾ ಡಾ ಸಿಲ್ವಾ (ವಿಕೆ), ಶಾನನ್ ಗೇಬ್ರಿಯಲ್, ಜೇಸನ್ ಹೋಲ್ಡರ್, ಅಲ್ಜಾರಿ ಜೋಸೆಫ್, ಕಿರ್ಕ್ ಸಿಂಕ್ಲೇರ್, ಕಿರ್ಕ್ ಮೆಕ್‌ವಿನ್‌ಜಿಕ್, ಕೆಮರ್ ರೋಚ್, ಜೋಮೆಲ್ ವಾರಿಕನ್

ಟೀಮ್ ಇಂಡಿಯಾ ಸ್ಕ್ವಾಡ್: ರೋಹಿತ್ ಶರ್ಮಾ (ನಾಯಕ), ಶುಬ್ಮನ್ ಗಿಲ್, ಋತುರಾಜ್ ಗಾಯಕ್ವಾಡ್, ವಿರಾಟ್ ಕೊಹ್ಲಿ, ಯಶಸ್ವಿ ಜೈಸ್ವಾಲ್, ಅಜಿಂಕ್ಯ ರಹಾನೆ, ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶ್ರೀಕರ್ ಭರತ್, ಇಶಾನ್ ಕಿಶನ್, ಮೊಹಮ್ಮದ್ ಸಿರಾಜ್, ಶಾರ್ದೂಲ್ ಠಾಕೂರ್, ಜಯದೇವ್ ಉನದ್ಕತ್, ನವದೀಪ್ ಸೈನಿ, ಮುಖೇಶ್ ಕುಮಾರ್

Story first published: Tuesday, July 18, 2023, 14:09 [IST]
Other articles published on Jul 18, 2023
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+