Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಚಾಂಪಿಯನ್ಸ್ ಟ್ರೋಫಿ ಬಳಿಕ ಕುಂಬ್ಳೆ ಅಳಿವು ಉಳಿವು ಬಗ್ಗೆ ನಿರ್ಧಾರ

ನವದೆಹಲಿ, ಮೇ 11 : ಕಳೆದ ಜೂನ್ ನಿಂದ ಯಶಸ್ವಿಯಾಗಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಕನ್ನಡಿಗ ಅನಿಲ್ ಕುಂಬ್ಳೆ ಅವರ ಗುತ್ತಿಗೆ ಅವಧಿಯು ಮುಂದಿನ ತಿಂಗಳು ಜೂನ್‌ ಗೆ ಅಂತ್ಯವಾಗಲಿದೆ.

ಇದರಿಂದ ಅವರನ್ನು ಕೋಚ್ ಸ್ಥಾನದಲ್ಲಿ ಮುಂದುವರಿಸುವುದೇ ಅಥವಾ ಬೇಡವೋ ಎನ್ನುವ ಕುರಿತು ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯ ನಂತರ ನಿರ್ಧರಿಸಲಾಗುವುದು ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಅವರ ಗುತ್ತಿಗೆಯನ್ನು ಮುಂದುವರಿಸುವ ಕುರಿತು ಬಿಸಿಸಿಐ ಆಡಳಿತ ಮಂಡಳಿಯು ಟೂರ್ನಿಯ ನಂತರ ನಿರ್ಧಾರ ಕೈಗೊಳ್ಳಲಿದೆ' ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. [ಟೀಂ ಇಂಡಿಯಾ ಕೋಚ್ ಆಗಿ ಅನಿಲ್ ಕುಂಬ್ಳೆ ಆಯ್ಕೆ]

ಕುಂಬ್ಳೆ ಟೀಂ ಇಂಡಿಯಾ ಕೋಚ್ ಆಗಿ ನೇಮಕವಾದ ಬಳಿಕ ಬಾರತ ಆಡಿದ 17 ಟೆಸ್ಟ್ ಪಂದ್ಯಗಳಲ್ಲಿ 12ರಲ್ಲಿ ಗೆದ್ದು ಸಾಧನೆ ಮಾಡಿದೆ. ಹಾಗೂ ಒಂದರ ಮೇಲೊಂದರಂತೆ 5 ಟೆಸ್ಟ್ ಸರಣಿಯನ್ನು ಗೆದ್ದಿರುವುದು ವಿಶೇಷ. ಹೀಗೆ ಕುಂಬ್ಳೆ ಅವರ ಕೋಚಿಂಗ್ ನಲ್ಲಿ ಭಾರತ ಉತ್ತಮ ಪ್ರದರ್ಶನ ನೀಡಿದೆ.

ಜೂನ್‌ ಅಂತ್ಯಕ್ಕೆ ಮುಕ್ತಾಯ

ಜೂನ್‌ ಅಂತ್ಯಕ್ಕೆ ಮುಕ್ತಾಯ

2016 ಜೂನ್‌ನಲ್ಲಿ ಕುಂಬ್ಳೆ ಅವರನ್ನು ಒಂದು ವರ್ಷದ ಅವಧಿಗೆ ಮುಖ್ಯ ಕೋಚ್ ಆಗಿ ನೇಮಕ ಮಾಡಲಾಗಿತ್ತು. ‘ಕುಂಬ್ಳೆ ಅವರ ಒಂದು ವರ್ಷದ ಒಪ್ಪಂದವು ಮುಂದಿನ ತಿಂಗಳು ಜೂನ್‌ ಅಂತ್ಯಕ್ಕೆ ಮುಗಿಯಲಿದೆ.

ಯಶಸ್ವಿ ಕೋಚಿಂಗ್

ಯಶಸ್ವಿ ಕೋಚಿಂಗ್

ಕುಂಬ್ಳೆ ಅವರ ಕೋಚಿಂಗ್ ಅಡಿಯಲ್ಲಿ ಟೀಂ ಇಂಡಿಯಾ 5 ಟೆಸ್ಟ್ ಸರಣಿಗಳನ್ನು ಗೆದ್ದಿದೆ. ವೆಸ್ಟ್ ವಿರುದ್ಧ 2-0, ನ್ಯೂಜಿಲೆಂಡ್ 3-0, ಬಾಂಗ್ಲಾದೇಶ 2-1, ಇಂಗ್ಲೆಂಡ್ 1-0, ಆಸ್ಟ್ರೇಲಿಯಾ ವಿರುದ್ಧ 2-1 ಅಂತರದಲ್ಲಿ ಸರಣಿ ಗೆದ್ದಿದೆ.

ಚಾಂಪಿಯನ್ಸ್ ಟ್ರೋಫಿ ಬಳಿಕ ನಿರ್ಧಾರ

ಚಾಂಪಿಯನ್ಸ್ ಟ್ರೋಫಿ ಬಳಿಕ ನಿರ್ಧಾರ

ಕಳೆದ ಜೂನ್ ನಿಂದ ಯಶಸ್ವಿಯಾಗಿ ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಕಾರ್ಯ ನಿರ್ವಹಿಸುತ್ತಿರುವ ಇವರನ್ನು ಕೋಚ್ ಹುದ್ದೆಯಿಂದ ಮುಂದುವರೆಸಲಿದ್ದಾರೋ ಅಥವಾ ಕೆಳಗಿಳಿಸಲಿದ್ದಾರೆಯೋ ಎಂಬುವುದು ಚಾಂಪಿಯನ್ಸ್ ಟ್ರೋಫಿ ಮುಕ್ತಾಯದ ಬಳಿಕ ಸ್ಪಷ್ಟ ಚಿತ್ರಣ ಸಿಗಲಿದೆ.

ಬ್ಯಾಟಿಂಗ್, ಫೀಲ್ಡಿಂಗ್ ಕೋಚರ್ ಅವಧಿಯೂ ಮುಕ್ತಾಯ

ಬ್ಯಾಟಿಂಗ್, ಫೀಲ್ಡಿಂಗ್ ಕೋಚರ್ ಅವಧಿಯೂ ಮುಕ್ತಾಯ

ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಮತ್ತು ಫೀಲ್ಡಿಂಗ್ ಕೋಚ್ ಆರ್. ಶ್ರೀಧರ್ ಅವರ ಗುತ್ತಿಗೆಯ ಅವಧಿಯೂ ಜೂನ್‌ನಲ್ಲಿ ಮುಗಿಯಲಿದೆ.

Story first published: Wednesday, January 3, 2018, 10:04 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+