Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕುಂಬ್ಳೆ ಸ್ಥಾನ ತುಂಬುವುದಕ್ಕೆ ಆಗುವುದಿಲ್ಲ : ಸೆಹ್ವಾಗ್

ನವದೆಹಲಿ, ಜೂನ್ 22: ಟೀಂ ಇಂಡಿಯಾ ಕೋಚ್‌ ಆಗಿ ಯಾರೇ ಆಯ್ಕೆಯಾದರು ಕುಂಬ್ಳೆ ಸ್ಥಾನ ತುಂಬುವುದಕ್ಕೆ ಆಗುವುದಿಲ್ಲ ಎಂದು ಮಾಜಿ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಹೇಳಿದ್ದಾರೆ.

ಕುಂಬ್ಳೆ ಅವರು ಕೋಚ್ ಆಗಿದ್ದ ಅವಧಿಯಲ್ಲಿ 17 ಟೆಸ್ಟ್ ಪಂದ್ಯಗಳ ಪೈಕಿ 12ರಲ್ಲಿ ಗೆಲುವು, 13 ಏಕದಿನ ಪಂದ್ಯಗಳ ಪೈಕಿ 8ರಲ್ಲಿ ಗೆಲುವು, 4ಟಿ20ಐ ಪಂದ್ಯಗಳ ಪೈಕಿ 2ರಲ್ಲಿ ಗೆಲುವು ದಾಖಲಿಸಿದೆ.

ನಾನು ಕುಂಬ್ಳೆ ಅವರ ಕೋಚಿಂಗ್ ನಲ್ಲಿ ಪಂದ್ಯಗಳನ್ನಾಡಿಲ್ಲ. ಆದರೆ, ಅವರು ನನ್ನ ಹಿರಿಯ ಆಟಗಾರರಾಗಿದ್ದು ಮಾರ್ಗದರ್ಶನ ನೀಡಿದ್ದಾರೆ. ಅವರ ನಾಯಕತ್ವದಡಿಯಲ್ಲಿ ನಾನು ಕಮ್ ಬ್ಯಾಕ್ ಮಾಡಿದ್ದೆ. ಈಗ ಕೋಚ್ ಆಗಿ ಉತ್ತಮ ರೆಕಾರ್ಡ್ ಹೊಂದಿದ್ದಾರೆ. ಹೊಸದಾಗಿ ಯಾರೇ ಅವರ ಸ್ಥಾನಕ್ಕೆ ಬಂದರೂ ಅವರ ಮಟ್ಟಕ್ಕೇರಲು ಕಷ್ಟಪಡಬೇಕಾಗುತ್ತದೆ ಎಂದು ಸೆಹ್ವಾಗ್ ಅವರು ಯುಸಿ ನ್ಯೂಸ್ ಜತೆ ಮಾತನಾಡುತ್ತಾ ಹೇಳಿದ್ದಾರೆ.

Anil Kumble's impeccable record as coach will be difficult to emulate: Virender Sehwag

ಭಾರತೀಯ ಮೂಲದ ವ್ಯಕ್ತಿಯೊಬ್ಬರು ಟೀಂ ಇಂಡಿಯಾ ಕೋಚ್ ಆದರೆ ಉತ್ತಮ, ವಿದೇಶಿಯರು ಕೋಚ್ ಆಗಿ ನೇಮಕವಾದರೆ ಸಂವಹನ ಕೊರತೆ ಎದುರಾಗಲಿದೆ ಎಂದು ಸೆಹ್ವಾಗ್ ಅಭಿಪ್ರಾಯಪಟ್ಟಿದ್ದಾರೆ.

ಆಟಗಾರರು, ಕೋಚ್ ಹಾಗೂ ನಾಯಕನ ನಡುವೆ ಸಂವಹನ ಸಮಸ್ಯೆ ಇದ್ದರೆ ಉತ್ತಮ ಫಲಿತಾಂಶ ಹೊರ ಹಾಕಲು ಸಾಧ್ಯವಿಲ್ಲ ಎಂದಿದ್ದಾರೆ. ಕೋಚ್ ಹುದ್ದೆ ರೇಸಿನಲ್ಲಿ ಟಾಮ್ ಮೂಡಿ, ಲಾಲ್ ಚಂದ್ ರಜಪೂತ್, ದೊಡ್ಡ ಗಣೇಶ್, ರಿಚರ್ಡ್ ಬೈಲ್ಸ್ ಜತೆ ಸೆಹ್ವಾಗ್ ಕೂಡಾ ಇದ್ದಾರೆ.

Story first published: Wednesday, January 3, 2018, 10:05 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+