'ಸ್ಪಿನ್ ಸ್ಟಾರ್' ಗಳ ಹುಡುಕಾಟದಲ್ಲಿ ಅನಿಲ್ ಕುಂಬ್ಳೆ
ಬೆಂಗಳೂರು, ನ.28:ಟೀಂ ಇಂಡಿಯಾದ ಮಾಜಿ ನಾಯಕ, ಸ್ಪಿನ್ ದಿಗ್ಗಜ ಅನಿಲ್ ಕುಂಬ್ಳೆ ಅವರು ಈಗ ಪ್ರತಿಭೆಗಳ ಹುಡುಕಾಟದಲ್ಲಿ ತೊಡಗಿದ್ದಾರೆ. ಅನಿಲ್ ಕುಂಬ್ಳೆ ಸಹ ಸ್ಥಾಪಕರಾಗಿರುವ ಟೆನ್ ವಿಕ್(TENVIC) ಸಂಸ್ಥೆ ಮೂಲಕ ಸ್ಪಿನ್ ಸ್ಟಾರ್ ಗಳ ಗುರುತಿಸಲು ಯೋಜನೆ ಹಮ್ಮಿಕೊಂಡಿದ್ದಾರೆ.
10 ರಿಂದ 19 ವರ್ಷ ವಯೋಮಿತಿಯೊಳಗಿನ ಪ್ರತಿಭಾವಂತ ಕ್ರಿಕೆಟರ್ ಗಳನ್ನು ಗುರುತಿಸಿ ಅವರಿಗೆ ಸೂಕ್ತ ತರಬೇತಿ, ಮಾರ್ಗದರ್ಶನ ನೀಡುವುದು ಟೆನ್ ವಿಕ್ ನ ಉದ್ದೇಶ ಎಂದು ಅನಿಲ್ ಕುಂಬ್ಳೆ ಹೇಳಿದ್ದಾರೆ. ಸ್ಪಿನ್ ಸ್ಟಾರ್ ಕೇವಲ ಒಂದು ಸ್ಪರ್ಧೆಯಂತೆ ನಾವು ಆಯೋಜನೆ ಮಾಡುತ್ತಿಲ್ಲ. ಇದು ನಿರಂತರವಾಗಿ ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸೂಕ್ತ ನೆರವು ನೀಡಲಾಗುವುದು ಎಂದಿದ್ದಾರೆ.

ಕರ್ನಾಟಕ ಹಲವಾರು ಪ್ರತಿಭಾವಂತ ಕ್ರಿಕೆಟರ್ ಗಳ ತವರಾಗಿದೆ. ಹೀಗಾಗಿ ಕರ್ನಾಟಕದಿಂದಲೇ ಈ ಯೋಜನೆ ಆರಂಭಗೊಳ್ಳಲಿದೆ. ನಂತರ ಇತರೆ ರಾಜ್ಯಗಳಿಗೂ ವಿಸ್ತರಿಸಲಾಗುವುದು ಎಂದು ಅನಿಲ್ ಕುಂಬ್ಳೆ ಹೇಳಿದರು.
ಯುವ ಸ್ಪಿನ್ನರ್ ಗಳಿಗೆ ನೆಟ್ ನಲ್ಲಿ ಬೌಲಿಂಗ್ ಮಾಡುವುದು ಹೇಗೆ ಎಂಬುದರಿಂದ ಹಿಡಿದು ಸ್ಪಿನ್ ಸ್ಟಾರ್ ಗಳಾಗಿ ಮಾಡುವ ತನಕ ಟೆನ್ ವಿಕ್ ಕಾರ್ಯನಿರ್ವಹಿಸಲಿದೆ. ಹಿರಿಯ ಆಟಗಾರರು, ಹಾಲಿ ಆಟಗಾರರಿಂದ ಕಾಲಕಾಲಕ್ಕೆ ಶಿಬಿರಾರ್ಥಿಗಳಿಗೆ ತರಬೇತಿ ಸಿಗಲಿದೆ.
ಎಲ್ಲೆಲ್ಲಿ ನಡೆಯಲಿದೆ?: ಬೆಂಗಳೂರು, ಮಂಗಳೂರು ಹಾಗೂ ಹುಬ್ಬಳ್ಳಿಗಳಲ್ಲಿ ಆಯ್ಕೆ ಶಿಬಿರ ನಡೆಯಲಿದೆ. ಜನವರಿ 3 ಹಾಗೂ 18 ರಂದು ಆಯೋಜನೆಗೊಂಡಿದೆ. ಜನವರಿ 17 ಹಾಗೂ 18 ರಂದು ನಡೆಯಲಿದೆ.
ಈ ಶಿಬಿರದಲ್ಲಿ ಆಯ್ಕೆಯಾದ ಟಾಪ್ 20 ಸ್ಪರ್ಧಿಗಳಿಗೆ ಕ್ರಿಕೆಟ್ ಕಿಟ್ ಹಾಗೂ ತರಬೇತಿ ಕ್ಯಾಂಪ್ ಕಾರ್ಯಾಗಾರದಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ. ಕಾರ್ಯಾಗಾರದಲ್ಲಿ ಗೆಲ್ಲುವ ಮೂವರು ವಿಜೇತರಿಗೆ ತಲಾ 1 ಲಕ್ಷ ರು ಪ್ರಶಸ್ತಿ ಹಾಗೂ ಕುಂಬ್ಳೆ ಅವರ ಜೊತೆ ವೈಯಕ್ತಿಕವಾಗಿ ಸೆಷನ್ಸ್ ನಲ್ಲಿ ಪಾಲ್ಗೊಳ್ಳುವ ಅವಕಾಶ ಸಿಗಲಿದೆ ಎಂದು ಟೆನ್ ವಿಕ್ ಸಂಸ್ಥೆಯ ಸಹಸ್ಥಾಪಕ ವಸಂತ್ ಭಾರದ್ವಾಜ್ ಅವರು ಹೇಳಿದ್ದಾರೆ. (ಪಿಟಿಐ)
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications