ಇವರಿಬ್ಬರು ಭವಿಷ್ಯದ ಸೂಪರ್‌ಸ್ಟಾರ್‌ಗಳು: ಅನಿಲ್ ಕುಂಬ್ಳೆ ಹೆಸರಿಸಿದ ಆಟಗಾರರು ಯಾರು ಗೊತ್ತಾ?

ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಅನಿಲ್ ಕುಂಬ್ಳೆ ಭಾರತದ ಭವಿಷ್ಯದ ಇಬ್ಬರು ಸೂಪರ್ ಸ್ಟಾರ್‌ಗಳ ಹೆಸರನ್ನು ಉಲ್ಲೇಖಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಅದ್ಭುತ ಪ್ರದರ್ಶನ ನೀಡಿ ಭರವಸೆ ಮುಡಿಸಿರುವ ಆಟಗಾರರ ಪೈಕಿ ಓರ್ವ ಯುವ ವೇಗಿ ಹಾಗೂ ಯುವ ದಾಂಡಿಗನನ್ನು ಅನಿಲ್ ಕುಂಬ್ಳೆ ಹೆಸರಿಸಿದ್ದು ಭವಿಷ್ಯದ ಸೂಪರ್ ಸ್ಟಾರ್‌ಗಳು ಎಂದಿದ್ದಾರೆ.
ಅಂದಹಾಗೆ ಅನಿಲ್ ಕುಂಬ್ಳೆ ಹೆಸರಿಸಿದ ಇಬ್ಬರು ಯುವ ಆಟಗಾರರು ಯಾರೆಂದರೆ ಎಡಗೈ ದಾಂಡಿಗ ಇಶಾನ್ ಕಿಶನ್ ಹಾಗೂ ವೇಗಿ ಅರ್ಷ್‌ದೀಪ್ ಸಿಂಗ್. ಈ ಇಬ್ಬರ ಬಗ್ಗೆ ವಿಶೇಷ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ ಅನಿಲ್ ಕುಂಬ್ಳೆ. ಅದರಲ್ಲೂ ಅರ್ಷ್‌ದೀಪ್ ಸಿಂಗ್ ಜೊತೆಗೆ ಪಂಜಾಬ್ ಕಿಂಗ್ಸ್ ತಂಡದಲ್ಲಿ ಕರ್ತವ್ಯ ನಿರ್ವಹಿಸಿರುವ ಕುಂಬ್ಳೆ ರಾಷ್ಟ್ರೀಯ ತಂಡದಲ್ಲಿ ಯುವ ಆಟಗಾರ ನೀಡಿರುವ ಪ್ರದರ್ಶನವನ್ನು ಉಲ್ಲೇಖಿಸಿ ಮೆಚ್ಚುಗೆ ಸೂಚಿಸಿದ್ದಾರೆ.

ಅರ್ಷ್‌ದೀಪ್ ಬಗ್ಗೆ ಕುಂಬ್ಳೆ ಮೆಚ್ಚುಗೆ
ಜಿಯೋ ಸಿನಿಮಾ ಜೊತೆಗಿನ ಮಾತುಕತೆಯಲ್ಲಿ ಅನಿಲ್ ಕುಂಬ್ಳೆ ಮಾತನಾಡಿದ್ದಾರೆ. "ಅರ್ಷ್‌ದೀಪ್ ಸಿಂಗ್ ಅವರಂತಾ ಆಟಗಾರನ ಜೊತೆಗೆ ಹತ್ತಿರದಿಂದ ಕಾಲ ಕೆಲಸ ನಿರ್ವಹಿಸಿದ್ದೇನೆ. ಭಾರತದಲ್ಲಿ ಆತ ನೀಡುತ್ತಿರುವ ಪ್ರದರ್ಶನವನ್ನು ನೋಡಿದಾಗ ಆತನ ಬೆಳವಣಿಗೆ ಖುಷಿ ನೀಡುತ್ತದೆ. ಬೌಲಿಂಗ್ ವಿಭಾಗದಲ್ಲಿ ಈತ ಭವಿಷ್ಯದ ಸೂಪರ್ ಸ್ಟಾರ್ ಎನಿಸುವ ಆಟಗಾರ" ಎಂದಿದ್ದಾರೆ ಅನಿಲ್ ಕುಂಬ್ಳೆ.

ಲಯ ಕಳೆದುಕೊಂಡಿರುವ ಯುವ ವೇಗಿ
ಅರ್ಷ್‌ದೀಪ್ ಸಿಂಗ್ 2022ರ ಜುಲೈನಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದು 25 ಪಂದ್ಯಗಳಲ್ಲಿ 39 ವಿಕೆಟ್ ಸಂಪಾದಿಸಿದ್ದಾರೆ. ಡೆತ್ ಓವರ್ ಸ್ಪೆಶಲಿಸ್ಟ್ ಎನಿಸಿರುವ ಅರ್ಷ್‌ದೀಪ್ ಮೂರು ಏಕದಿನ ಪಂದ್ಯಗಳಲ್ಲಿಯೂ ಆಡಿದ್ದಾರೆ. ಆದರೆ ಈವರೆಗೆ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿಲ್ಲ. ಅರ್ಷ್‌ದೀಪ್ ಸಿಂಗ್ ಇತ್ತೀಚೆಗೆ ತಮ್ಮ ಲಯವನ್ನು ಕಳೆದುಕೊಂಡಿರುವುದು ಕಳವಳಕ್ಕೆ ಕಾರಣವಾಗಿದೆ.

ಇಶಾನ್ ಕಿಶನ್ ಬಗ್ಗೆ ಕುಂಬ್ಳೆ ಭರವಸೆ
ಮುಂದುವರಿದು ಮಾತನಾಡಿರುವ ಅನಿಲ್ ಕುಂಬ್ಳೆ ಯುವ ಬ್ಯಾಟರ್ ಇಶಾನ್ ಕಿಶನ್ ಬಗ್ಗೆಯೂ ಭರವಸೆ ವ್ಯಕ್ತಪಡಿಸಿದ್ದಾರೆ. ಇಶಾನ್ ಕಿಶನ್ ಭವಿಷ್ಯದ ಸೂಪರ್ ಸ್ಟಾರ್ ಬ್ಯಾಟರ್ ಆಗುವ ಅವಕಾಶವಿದೆ ಎಂದಿದ್ದಾರೆ. ಇಶಾನ್ ಕಿಶನ್ ಕಳೆದ ವರ್ಷಾಂತ್ಯದಲ್ಲಿ ಏಕದಿನ ಮಾದರಿಯಲ್ಲಿ ಭರ್ಜರಿ ದ್ವಿಶತಕ ಸಿಡಿಸಿ ಮಿಂಚಿದ್ದರು. ಹಾಗಿದ್ದರು ಕೂಡ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯಲ್ಲಿ ಆಡುವ ಅವಕಾಶ ಕಳಡೆದುಕೊಂಡಿದ್ದರು. ಆದರೆ ನ್ಯೂಜಿಲೆಂಡ್ ವಿರುದ್ಧದ ಸರಣಿಗೆ ರಿಷಬ್ ಪಂತ್ ಹಾಗೂ ಕೆಎಲ್ ರಾಹುಲ್ ಅಲಭ್ಯವಾದ ಕಾರಣ ಆಡುವ ಅವಕಾಶ ಗಳಿಸಿಕೊಂಡಿದ್ದರು.

ಇಶಾನ್ ಬಗ್ಗೆ ಕುಂಬ್ಳೆ ಹೇಳಿದ್ದಿಷ್ಟು
"ಬ್ಯಾಟಿಂಗ್ ದೃಷ್ಟಿಕೋನದಿಂದ ಸಿಕ್ಕ ಅವಕಾಶವನ್ನು ಇಶಾನ್ ಕಿಶನ್ ಅದ್ಭುತವಾಗಿ ಬಳಸಿಕೊಂಡಿದ್ದಾರೆ. ಆತ ದ್ವಿಶತಕವನ್ನು ಕೂಡ ಬಾರಿಸಿದ್ದು ನನ್ನ ಪ್ರಕಾರ ಈತ ಕೂಡ ಭವಿಷ್ಯದ ಸೂಪರ್‌ಸ್ಟಾರ್ ಎನಿಸಬಲ್ಲ ಆಟಗಾರ" ಎಂದಿದ್ದಾರೆ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ಮಾಜಿ ಕೋಚ್ ಅನಿಲ್ ಕುಂಬ್ಳೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications