ಪುತ್ರನ ಸಾಧನೆಗೆ ಹೆಮ್ಮೆಪಟ್ಟ ಅನಿಲ್ ಕುಂಬ್ಳೆ: ತಂದೆಯ ಹವ್ಯಾಸದಲ್ಲಿ ಮಾಯಾಸ್ ಕುಂಬ್ಳೆ ಗಂಭೀರ ಹೆಜ್ಜೆ

Anil Kumble Son Mayas Special Achivement In Wild Life Photography

ಅನಿಲ್ ಕುಂಬ್ಳೆ ವಿಶ್ವ ಕ್ರಿಕೆಟ್‌ನ ಶ್ರೇಷ್ಠ ಸ್ಪಿನ್ನರ್‌ಗಳಲ್ಲಿ ಒಬ್ಬರು. ಟೆಸ್ಟ್ ಕ್ರಿಕೆಟ್‌ನಲ್ಲಿ 600ಕ್ಕೂ ಹೆಚ್ಚು ವಿಕೆಟ್ ಕಿತ್ತ ಏಕೈಕ ಭಾರತೀಯ ಬೌಲರ್ ಅನಿಲ್ ಕುಂಬ್ಳೆ. 1999ರಲ್ಲಿ ಪಾಕಿಸ್ತಾನದ ವಿರುದ್ಧ ಇನ್ನಿಂಗ್ಸ್ ಒಂದರ ಎಲ್ಲಾ 10 ವಿಕೆಟ್‌ಗಳನ್ನು ಕಿತ್ತು ಈ ಸಾಧನೆ ಮಾಡಿದ ವಿಶ್ವದ ಕೇವಲ ಎರಡನೇ ಆಟಗಾರ ಎಂಬ ದಾಖಲೆಯನ್ನು ಮಾಡಿದರು.

ಇಂತಾ ಶ್ರೇಷ್ಟ ಕ್ರಿಕೆಟಿಗನ ಪುತ್ರ ಮಾಯಾಸ್ ಕುಂಬ್ಳೆ ತಂದೆಯ ವೃತ್ತಿ ಜೀವನಕ್ಕಿಂತ ತಂದೆಯ ಹವ್ಯಾಸವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ. ಅದರಲ್ಲಿ ಹದಿಹರೆಯದಲ್ಲೇ ಶ್ರೇಷ್ಠ ಸಾಧನೆಯನ್ನು ಮಾಡಿದ್ದಾರೆ. ಈ ಬಗ್ಗೆ ಅನಿಲ್ ಕುಂಬ್ಳೆ ಟ್ವೀಟ್ ಮೂಲಕ ಹೆಮ್ಮೆಯಿಂದ ಸಂತಸವನ್ನು ಹಂಚಿಕೊಂಡಿದ್ದಾರೆ.

ಈ ವರ್ಷದ ಅಂತ್ಯಕ್ಕೆ 10ನೇ ಆವೃತ್ತಿಯ ಬಿಗ್‌ ಬ್ಯಾಷ್ ಲೀಗ್ ಆರಂಭ

ಫೋಟೋಗ್ರಾಫಿಯಲ್ಲಿ ಮಾಯಾಸ್ ಸಾಧನೆ

ಮಾಯಾಸ್ ಫೋಟೋಗ್ರಫಿ ಬಗ್ಗೆ ಹೆಚ್ಚಿನ ಆಸಕ್ತಿ ಹೊಂದಿದ್ದು ಅದರಲ್ಲೇ ಸಾಧಿಸುವ ಛಲಹೊಂದಿದ್ದಾರೆ. ಅದಕ್ಕೆ ಪೂರಕವಾಗಿ ಅಂತಾರಾಷ್ಟ್ರೀಯ ಫೋಟೋಗ್ರಫಿ ನಿಯತಕಾಲಿಕೆಯಲ್ಲಿ ಸಚಿತ್ರ ಲೇಖನ ಪ್ರಕಟಗೊಂಡಿದೆ. "ನೇಚರ್ ಇನ್ ಫೋಕಸ್" ನಿಯತಕಾಲಿಕೆಯಲ್ಲಿ 16 ವರ್ಷದ ಮಾಯಾಸ್ ಕುಂಬ್ಳೆ ಛಾಯಾಚಿತ್ರಗಳು ಹಾಗೂ ಲೇಖನ ಪ್ರಕಟವಾಗಿದೆ. 2014ರಿಂದ ದಕ್ಷಿಣ ಏಷ್ಯಾದ ಹವ್ಯಾಸಿ ಛಾಯಾಗ್ರಾಹಕರಿಗೆ 'ನೇಚರ್ ಇನ್ ಫೋಕಸ್' ವಿಶೇಷ ವೇದಿಕೆಯನ್ನು ಒದಗಸುತ್ತಿದೆ.

"ನೇಚರ್ ಇನ್ ಫೋಕಸ್"

ಮಹಾರಾಷ್ಟ್ರದ ನಾಗ್ಪುರದಿಂದ 150 ಕಿಲೋ ಮೀಟರ್ ದೂರದಲ್ಲಿರುವ 'ತಡೋಬಾ ಅಂಧೇರಿ ಟೈಗರ್ ರಿಸರ್ವ್'ನಲ್ಲಿ ಮಾಯಾಸ್ ಕುಂಬ್ಳೆ ಕ್ಲಿಕ್ಕಿಸಿದ ಫೋಟೋಗಳನ್ನು 'ನೇಚರ್ ಇನ್ ಫೋಕಸ್' ನಿಯತಕಾಲಿಕೆ ಪ್ರಕಟಿಸಿದೆ. ಕಳೆದ ವರ್ಷ ಪ್ರಯಾಣಿಸಿದ್ದ ವೇಳೆಯ ಫೋಟೋಗಳು ಹಾಗೂ ಆ ಬಗ್ಗೆ ವಿಶೇಷ ಲೇಖನವನ್ನು ಮಾಯಾಸ್ ಕುಂಭ್ಳೆ ವಿವರವಾಗಿ ಬರೆದುಕೊಂಡಿದ್ದಾರೆ.

ಫೋಟೊಗ್ರಾಫಿ ಅನಿಲ್ ಕುಂಬ್ಳೆಯ ಹವ್ಯಾಸ

ಫೋಟೊಗ್ರಾಫಿ ಅನಿಲ್ ಕುಂಬ್ಳೆಯ ಹವ್ಯಾಸ

ಟೀಮ್ ಇಂಡಿಯಾದ ಮಾಜಿ ನಾಯಕ ಅನಿಲ್ ಕುಂಬ್ಳೆಗೆ ಫೋಟೋಗ್ರಾಫಿ ಹವ್ಯಾಸ ಎನ್ನುವುದು ಕ್ರಿಕೆಟ್ ಅಭಿಮಾನಿಗಳಿಗೆ ಗೊತ್ತಿಲ್ಲದ ವಿಚಾರವಲ್ಲ. ಕ್ರಿಕೆಟ್ ಆಡುತ್ತಿದ್ದ ಸಂದರ್ಭಗಳಲ್ಲಿ ಅನಿಲ್ ಕುಂಬ್ಳೆ ವಿಶೇಷ ಕ್ಷಣಗಳನ್ನು ತಮ್ಮ ಕ್ಯಾಮರಾದಲ್ಲಿ ಫೆವಿಲಿಯನ್‌ನಿಂದಲೇ ಕ್ಲಿಕ್ಕಿಸಿಕೊಳ್ಳುತ್ತಿದ್ದರು. ಬಳಿಕ ವೈಲ್ಡ್‌ ಲೈಫ್ ಫೋಟೋಗ್ರಫಿಯನ್ನು ಕೂಡ ಹವ್ಯಾಸವನ್ನಾಗಿ ಅನಿಲ್ ಕುಂಬ್ಳೆ ಮುಂದುವರಿಸಿದ್ದರು. ಫೋಟೋಗ್ರಫಿಯ ಬಗ್ಗೆ ಕುಂಬ್ಳೆ 'ವೈಡ್ ಆ್ಯಂಗಲ್' ಎಂಬ ಪುಸ್ತಕವನ್ನೂ ಹೊರತಂದಿದ್ದರು. ಈಗ ಪುತ್ರನೂ ಈ ಹವ್ಯಾಸವನ್ನು ಗಂಭೀರವಾಗಿ ಪರಿಗಣಿಸಿದ್ದಾರೆ.

ಸುಂದರ ಛಾಯಾಚಿತ್ರಗಳು

ಸುಂದರ ಛಾಯಾಚಿತ್ರಗಳು

ಮಯಾಸ್ ಕುಂಬ್ಳೆ ತಮ್ಮ ಛಾಯಾಗ್ರಹಣ ಕಲೆಯನ್ನು ಸುಂದರವಾಗಿ ನಿಯತಕಾಲಿಕೆಯಲ್ಲಿ ವ್ಯಕ್ತಪಡಿಸಿದ್ದಾರೆ. ತಡೋಬಾ ರಾಷ್ಟ್ರೀಯ ಉದ್ಯಾನದಲ್ಲಿನ ಹುಲಿಗಳ ಚಿತ್ರ ಮಾಯಾಸ್ ಕ್ಯಾಮರಾ ಕಣ್ಣಲ್ಲಿ ಅದ್ಭುತವಾಗಿ ಮೂಡಿಬಂದಿದೆ. ಹುಲಿಗಳ ಜೊತೆಗೆ ಜಿಂಕೆ, ಕಾಡುಕೋಣ, ತೋಳ, ಕರಡಿ, ಚಿಗರೆ ಹದ್ದು ಸೇರಿದಂತೆ ಒಟ್ಟು 13 ಫೋಟೋಗಳು ಪ್ರಕಟವಾಗಿದೆ.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Wednesday, July 15, 2020, 15:38 [IST]
Other articles published on Jul 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Mykhel sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Mykhel website. However, you can change your cookie settings at any time. Learn more