ನಾನು ಆಡಿದ ನಾಯಕರ ಪೈಕಿ ಅನಿಲ್ ಕುಂಬ್ಳೆ ಬೆಸ್ಟ್: ಆರ್‌ಪಿ ಸಿಂಗ್

ಟೀಮ್ ಇಂಡಿಯಾದ ಮಾಜಿ ಆಟಗಾರ ಆರ್‌ಪಿ ಸಿಂಗ್ ತಮ್ಮ ಅತ್ಯುತ್ತಮ ನಾಯಕ ಯಾರು ಎಂಬುದನ್ನು ಹೇಳಿದ್ದಾರೆ. ಮಾಜಿ ನಾಯಕ ಅನಿಲ್ ಕುಂಬ್ಳೆ ನಾನು ಆಡಿದ ನಾಯಕರ ಪೈಕಿ ಬೆಸ್ಟ್ ಕ್ಯಾಪ್ಟನ್ ಎಂದು ಕನ್ನಡಿಗ ದಿಗ್ಗಜ ಆಟಗಾರನ ಹೆಸರನ್ನು ಆರ್‌ಪಿ ಸಿಂಗ್ ತೆಗೆದುಕೊಂಡಿದ್ದಾರೆ.
ಅವರೂ ಕೂಡ ಬೌಲರ್ ಆಗಿದ್ದರು ಹೋಗಾಗ ಇನ್ನೋರ್ವ ಬೌಲರ್‌ನ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳುತ್ತಿದ್ದರು. ಇದು ನನಗೆ ತುಂಬಾ ಸಹಕಾರಿಯಾಗಿತ್ತು ಎಂದು ಆರ್‌ಪಿ ಸಿಂಗ್ ಹೇಳಿದ್ದಾರೆ. 2007ರ ಟಿ20 ವಿಶ್ವಕಪ್ ವಿಜೇತ ತಂಡದ ಸದಸ್ಯ ಆರ್‌ಪಿ ಸಿಂಗ್ ಮಾಜಿ ಆರಂಭಿಕ ಆಟಗಾರ ಕಾಮೆಂಟೇಟರ್ ಆಕಾಶ್ ಚೋಪ್ರಾ ಜೊತೆಗೆ ಮಾತುಕತೆಯನ್ನು ನಡೆಸುವ ವೇಳೆ ಈ ವಿಚಾರವನ್ನು ಹಂಚಿಕೊಂಡರು.
ಇದೇ ಸಂದರ್ಭದಲ್ಲಿ ಆರ್‌ಪಿಸಿಂಗ್ ತಾನು ಆಡಿದ ಇತರ ನಾಯಕರ ಬಗ್ಗೆಯೂ ಮಾತನಾಡಿದ್ದಾರೆ. ಮಾಜಿ ನಾಯಕರಾದ ಸೌರವ್ ಗಂಗೂಲಿ, ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ ಮತ್ತು ಎಂಎಸ್ ಧೋನಿ ಅವರ ಕಾರ್ಯಶೈಲಿಯ ಬಗ್ಗೆ ಆರ್‌ಪಿ ಸಿಂಗ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಅನಿಲ್ ಕುಂಬ್ಳೆಯ ಬಗ್ಗೆ ಮಾತನಾಡಿದ ಆರ್‌ಪಿ ಸಿಂಗ್ 'ಅನಿಲ್ ಕುಂಬ್ಳೆ ನಾಯಕತ್ವದಲ್ಲಿ ನಾನು ಹೆಚ್ಚು ಪಂದ್ಯಗಳನ್ನು ಆಡಿಲ್ಲ, ಆದರೆ ಅವರು ನನ್ನ ಪಾಲಿನ ಅತ್ಯುತ್ತಮ ನಾಯಕ. ಬೌಲರ್‌ನ ಮನಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಳ್ಳುತ್ತಿದ್ದರು, ಬೌಲಿಂಗ್ ಸಂದರ್ಭದಲ್ಲಿ ಅವರು ನೀಡುತ್ತಿದ್ದ ಸಲಹೆಗಳು ಉಪಯುಕ್ತವಾಗಿರುತ್ತಿತ್ತು ಎಂದು ಆರ್‌ಪಿ ಸಿಂಗ್ ಹೇಳಿದ್ದಾರೆ.
ಮಾಜಿ ನಾಯಕ ಎಂಎಸ್ ಧೋನಿ ಬಗ್ಗೆ ಮಾತನಾಡಿದ ಆರ್‌ಪಿ ಸಿಂಗ್ ಆಟವನ್ನು ಧೋನಿಯಷ್ಟು ಚೆನ್ನಾಗಿ ಅರ್ಥಮಾಡಿಕೊಂಡಿರುವಷ್ಟು ಇನ್ನೊಬ್ಬ ಕ್ರಿಕೆಟಿಗನನ್ನು ನೋಡಿಲ್ಲ ಎಂದು ಹೇಳಿದರು. ಪರಿಸ್ಥಿತಿಗೆ ಅನುಗುಣವಾಗಿ ತೆಗೆದಿಕೊಳ್ಳುವ ನಿರ್ಧಾರ ತಂಡಕ್ಕೆ ಪೂರಕವಾಗಿತ್ತು, ಆಟವನ್ನು ವಿಭಿನ್ನ ರೀತಿಯನ್ನು ಅರ್ಥಮಾಡುವ ಕ್ರಿಕೆಟಿಗ ಎಂದು ಮಹೇಂದ್ರ ಸಿಂಗ್ ಧೋನಿ ಬಗ್ಗೆ ಆರ್‌ಪಿ ಸಿಂಗ್ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications