For Quick Alerts
ALLOW NOTIFICATIONS  
For Daily Alerts
 

ಏಕದಿನ: ಮನೀಶ್ ನಾಯಕನಾಟ, ನ್ಯೂಜಿಲ್ಯಾಂಡ್‌ 'ಎ'ಗೆ ವೈಟ್‌ವಾಶ್ ಮುಖಭಂಗ

Anmolpreet 71, Kaul four-for completes 3-0 rout of New Zealand A

ಮೌಂಟ್ ಮೌಂಗನ್ಯುಯಿ, ಡಿಸೆಂಬರ್ 11: ನ್ಯೂಜಿಲ್ಯಾಂಡ್ ಪ್ರವಾಸದಲ್ಲಿರುವ ಭಾರತ 'ಎ' ತಂಡ ಆತಿಥೇಯ ನ್ಯೂಜಿಲ್ಯಾಂಡ್ 'ಎ' ವಿರುದ್ಧ ಅಂತಿಮ ಅನಧಿಕೃತ ಏಕದಿನ ಪಂದ್ಯದಲ್ಲಿ 75 ರನ್ ಗೆಲುವನ್ನಾಚರಿಸಿದೆ. ಭಾರತದ ನಾಯಕ ಮನೀಶ್ ಪಾಂಡೆ ಅವರ ಅಮೋಘ ಆಟದ ನೆರವಿನಿಂದ ಭಾರತ, 3-೦ ಅಂತರದಿಂದ ಏಕದಿನ ಸರಣಿಯನ್ನು ವಶವಾಗಿಸಿಕೊಂಡಿದೆ.

ಮೂರು ಪಂದ್ಯಗಳ ಈ ಏಕದಿನ ಸರಣಿಯಲ್ಲಿ ಭಾರತ ಎ, ಮೊದಲ ಪಂದ್ಯವನ್ನು 4 ವಿಕೆಟ್ ನಿಂದ ಜಯಿಸಿತ್ತು. ಈ ವೇಳೆ ಶ್ರೇಯಸ್ ಐಯ್ಯರ್ 54, ಮನೀಶ್ ಪಾಂಡೆ 42, ವಿಜಯ್ ಶಂಕರ್ ಅಜೇಯ 87, ಇಶಾನ್ ಕಿಶಾನ್ 47 ರನ್ ನೀಡಿ ತಂಡವನ್ನು ಬೆಂಬಲಿಸಿದ್ದರು. ಭಾರತ 49 ಓವರ್ ನಲ್ಲಿ 6 ವಿಕೆಟ್ ಕಳೆದು 311 ರನ್ ಮೂಲಕ ಜಯ ತನ್ನದಾಗಿಸಿಕೊಂಡಿತ್ತು.

ದ್ವಿತೀಯ ಪಂದ್ಯದಲ್ಲೂ ಭಾರತ ಎ ತಂಡ, ನ್ಯೂಜಿಲ್ಯಾಂಡ್ ಎ ನೀಡಿದ್ದ 300 ರನ್ ಗುರಿಯನ್ನು 49 ಓವರ್ ನಲ್ಲಿ 5 ವಿಕೆಟ್ ಕಳೆದು ತಲುಪಿತ್ತು. ಈ ವೇಳೆ ಮನೀಶ್ ಶತಕದ (111 ರನ್) ಮೂಲಕ ಮಿಂಚಿದ್ದರು. ಅಂತಿಮ ಪಂದ್ಯದಲ್ಲಿ ಭಾರತ, ಅನ್ಮೋಲ್‌ಪ್ರೀತ್‌ಸಿಂಗ್ 71, ಅಂಕಿತ್ ಬವಾನೆ 48, ವಿಜಯ್ ಶಂಕರ್ 42 ರನ್ ನೆರವಿನೊಂದಿಗೆ 50 ಓವರ್‌ನಲ್ಲಿ 8 ವಿಕೆಟ್ ಕಳೆದು 275 ರನ್ ಪೇರಿಸಿತ್ತು.

ಗುರಿ ಬೆನ್ನತ್ತಿದ ನ್ಯೂಜಿಲ್ಯಾಂಡ್ ಎ ತಂಡಕ್ಕೆ ಟಿಮ್ ಸೈಫರ್ಟ್ ಅರ್ಧಶತಕದ (55 ರನ್) ಬೆಂಬಲ ದೊರೆಯಿತಾದರೂ ಭಾರತದ ಮಾರಕ ಬೌಲಿಂಗ್ ಮುಂದೆ ಕಿವೀಸ್ ತತ್ತರಿಸಿತು. ಸಿದ್ಧಾರ್ಥ್ ಕೌಲ್ 37 ರನ್ನಿಗೆ 4 ವಿಕೆಟ್ ಕೆಡವಿದರೆ, ಕ್ರಿಷ್ಣಪ್ಪ ಗೌತಮ್ 2 ವಿಕೆಟ್ ಬಲಿ ಪಡೆದರು. ನ್ಯೂಜಿಲ್ಯಾಂಡ್ 44.2 ಓವರ್‌ನಲ್ಲಿ ಎಲ್ಲಾ ವಿಕೆಟ್ ಕಳೆದು ವೈಟ್‌ವಾಶ್‌ ಅನ್ನಿಸಿಕೊಂಡಿತು.

Story first published: Tuesday, December 11, 2018, 17:04 [IST]
Other articles published on Dec 11, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+