ICC ODI Team: ಐಸಿಸಿ ವರ್ಷದ ಏಕದಿನ ತಂಡದಲ್ಲಿ ಭಾರತೀಯರಿಗಿಲ್ಲ ಸ್ಥಾನ: RCB ಒಬ್ಬ ಪ್ಲೇಯರ್‌ಗೆ ಅವಕಾಶ
ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ವರ್ಷ ಪೂರ್ತಿ ಉತ್ತಮ ಪ್ರದರ್ಶನ ನೀಡಿದ ಆಟಗಾರರನ್ನು ಗುರುತಿಸಿ ಒಂದು ತಂಡವನ್ನು ಕಟ್ಟುತ್ತದೆ. ಇದು ಎಲ್ಲ ಫಾರ್ಮೆಟ್‌ಗಳಲ್ಲೂ ಮಾಡುತ್ತಲೇ ಬರುತ್ತಿದೆ. ಈಗ ಐಸಿಸಿ ವರ್ಷದ ಏಕದಿನ ತಂಡವನ್ನು ಪ್ರಕಟ ಮಾಡಿದೆ. ಪ್ರಕಟಿ ತಂಡದಲ್ಲಿ ಒಬ್ಬನೇ ಒಬ್ಬ ಭಾರತೀಯ ಆಟಗಾರ ಇಲ್ಲ ಎಂಬುದೇ ಅಭಿಮಾನಿಗಳಿಗೆ ಬೇಸರದ ಸಂಗತಿಯಾಗಿದೆ.
ಐಸಿಸಿ ಪ್ರಕಟಿಸಿದ ಏಕದಿನ ತಂಡವನ್ನು ಶ್ರೀಲಂಕಾದ ಚರಿತ್ ಅಸಲಂಕಾ ಮುನ್ನಡೆಸುತ್ತಿದ್ದಾರೆ. ಈ ಬಾರಿ ಐಸಿಸಿ ತಂಡದಲ್ಲಿ ನಾಲ್ವರು ಲಂಕಾ ಆಟಗಾರರು ಸ್ಥಾನ ಪಡೆದಿರುವುದು ವಿಶೇಷ. ಪ್ರಕಟಿತ ತಂಡದಲ್ಲಿ ಇಂಗ್ಲೆಂಡ್, ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ತಂಡದ ಯಾವೊಬ್ಬ ಆಟಗಾರ ಇಲ್ಲ. ಚರಿತ್ ಅಸಲಂಕಾ ಆಡಿದ 16 ಪಂದ್ಯಗಳಲ್ಲಿ 50.2ರ ಸರಾಸರಿಯಲ್ಲಿ 605 ರನ್ ಕಲೆ ಹಾಕಿದ್ದು, ಇವರಿಗೆ ಪಟ್ಟ ಕಟ್ಟಲಾಗಿದೆ.

ಲಂಕಾ ತಂಡದ ಪರ ಕುಸಾಲ್ ಮೆಂಡೀಸ್ ಆಡಿದ ಆಡಿದ 17 ಪಂದ್ಯಗಳಲ್ಲಿ 742 ರನ್ ಸಿಡಿಸಿದ್ದಾರೆ. ಈ ವೇಳೆ ಇವರ ಸರಾಸರಿ 53 ಆಗಿದೆ. ಈ ತಂಡದಲ್ಲಿ ಸ್ಥಾನ ಪಡೆದ ಇನ್ನೊಬ್ಬ ಲಂಕಾ ಆಟಗಾರ ಪತುನ್ ನಿಸ್ಸಂಕಾ. ಇವರು ಆಡಿದ 12 ಪಂದ್ಯಗಳಲ್ಲಿ 694 ರನ್ ಸಿಡಿಸಿದ್ದಾರೆ. ಉಳಿದಂತೆ ಸ್ಪಿನ್ ಬೌಲರ್ ವನಿಂದು ಹಸರಂಗಾ ಅವರಿಗೆ ತಂಡದಲ್ಲಿ ಸ್ಥಾನ ಲಭಿಸಿದೆ.
ಅಫ್ಘಾನಿಸ್ತಾನ ಪರ ರಹಮಾನುಲ್ಲಾ ಗುರ್ಬಾಜ್, ಅಜ್ಮತುಲ್ಲಾ ಒಮರ್ಜಾಯ್, ಅಲ್ಲಾ ಗಜನ್ಫರ್ ಮೂವರು ಸ್ಥಾನ ಪಡೆದಿದ್ದಾರೆ. ರಹಮಾನುಲ್ಲಾ ಗುರ್ಬಾಜ್ ಪಾಕ್ ತಂಡದ ಸಯಿಮ್ ಅಯುಬ್ ಅವರೊಂದಿಗೆ ಇನಿಂಗ್ಸ್ ಆರಂಭಿಸಲಿದ್ದಾರೆ. ವೆಸ್ಟ್ ಇಂಡೀಸ್ ತಂಡದ ಸ್ಟಾರ್ ಆಲ್‌ರೌಂಡರ್ ಶೆರ್ಫೇನ್ ರುದರ್ಫೋರ್ಡ್ ಅವರನ್ನು ಸಹ ಐಸಿಸಿ ವರ್ಷದ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರು ಈ ಬಾರಿ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಲಿದ್ದಾರೆ.

ಪಾಕ್ ತಂಡದ ಇಬ್ಬರು ವೇಗಿಗಗಳು
ವರ್ಷದಲ್ಲಿ ಅಮೋಘ ಪ್ರದರ್ಶನ ನೀಡಿರುವ ಪಾಕ್ ತಂಡದ ಇಬ್ಬರು ಸ್ಟಾರ್ ವೇಗಿಗಳಿಗೆ ಅವಕಾಶ ನೀಡಲಾಗಿದೆ. ಪಾಕ್ ತಂಡದ ವೇಗದ ಬೌಲರ್ ಶಾಹೀನ್ ಶಾ ಆಫ್ರಿದಿ ಆಡಿದ 5 ಪಂದ್ಯಗಳಲ್ಲಿ 15 ವಿಕೆಟ್ ಪಡೆದಿದ್ದು ಇವರು ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಇನ್ನು ಕಳೆದ ವರ್ಷ ಆಡಿದ 8 ಪಂದ್ಯಗಳಲ್ಲಿ 13 ವಿಕೆಟ್ ಪಡೆದಿರುವ ಹ್ಯಾರಿಸ್ ರೌಫ್ ಅವರಿಗೂ ತಂಡದಲ್ಲಿ ಸ್ಥಾನ ನೀಡಲಾಗಿದೆ.
ಭಾರತೀಯ ಆಟಗಾರರಿಗೆ ಏಕೆ ಇಲ್ಲ ಸ್ಥಾನ?
ಭಾರತ ತಂಡ ಕಳೆದ ವರ್ಷ ಕೇವಲ ಮೂರು ಏಕದಿನ ಪಂದ್ಯಗಳು ಆಡಿತ್ತು. ಈ ಸರಣಿ ಲಂಕಾ ವಿರುದ್ಧ ನಡೆದಿತ್ತು. ಈ ಸರಣಿಯಲ್ಲಿ ಟೀಮ್ ಇಂಡಿಯಾ ಹೀನಾಯ ಸೋಲು ಕಂಡಿತ್ತು. ಹೀಗಾಗಿ ಭಾರತದ ಯಾವೊಬ್ಬ ಐಸಿಸಿ ತಂಡದಲ್ಲಿ ಸ್ಥಾನ ಪಡೆದಿಲ್ಲ.
ಐಸಿಸಿ ಏಕದಿನ ತಂಡ: ಸೈಮ್ ಅಯೂಬ್, ರಹಮಾನುಲ್ಲಾ ಗುರ್ಬಾಜ್, ಪಾತುಮ್ ನಿಸ್ಸಾಂಕ , ಕುಸಲ್ ಮೆಂಡಿಸ್ (ವಿಕೆಟ್ ಕೀಪರ್) , ಚರಿತ್ ಅಸಲಂಕಾ (ನಾಯಕ) , ಶೆರ್ಫಾನೆ ರುದರ್‌ಫೋರ್ಡ್, ಅಜ್ಮತುಲ್ಲಾ ಒಮರ್ಜಾಯ್, ವನಿಂದು ಹಸರಂಗಾ , ಶಾಹೀನ್ ಶಾ ಅಫ್ರಿದಿ , ಹಾರಿಸ್ ರೌಫ್, ಎಎಮ್ ಗಜನ್ಫರ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications