For Quick Alerts
ALLOW NOTIFICATIONS  
For Daily Alerts
 

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ ಟೀಂ ಇಂಡಿಯಾ

ವಿಶ್ವ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ ಮೂರು ಟಿ20I ಪಂದ್ಯಗಳನ್ನು ಆಡುವ ಮೂಲಕ ಟೀಮ್ ಇಂಡಿಯಾ 2022 ರ T20 ವಿಶ್ವಕಪ್‌ಗೆ ತಯಾರಿ ನಡೆಸಲಿದೆ. ಭಾರತ ಇನ್ನೂ ಪ್ರಮುಖ ಪ್ರಶ್ನೆಗಳಿಗೆ ದೃಢವಾದ ಉತ್ತರಗಳನ್ನು ಹುಡುಕುತ್ತಿದೆ. ಅನುಭವಿ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಾಲ್ ಅವರೊಂದಿಗೆ ಆಡುವ 11ರ ಬಳಗದಲ್ಲಿ ನಿಯಮಿತ ಸ್ಥಾನವನ್ನು ಕಂಡುಕೊಳ್ಳುತ್ತಾರೆಯೇ ಎಂಬುದು ದೊಡ್ಡ ಪ್ರಶ್ನೆಗಳಲ್ಲಿ ಒಂದಾಗಿದೆ.

ಏಷ್ಯಾ ಕಪ್‌ನಿಂದ ಬೇಗನೆ ನಿರ್ಗಮಿಸಿದ ನಂತರ, ಆಸ್ಟ್ರೇಲಿಯಾ ಸರಣಿಯಲ್ಲಿ ರೋಹಿತ್ ಶರ್ಮಾ ನೇತೃತ್ವದ ತಂಡಕ್ಕೆ ಉಳಿದಿರುವ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಮತ್ತೊಂದು ಅವಕಾಶವ ದೊರಕಿದೆ. ಟೀಮ್ ಇಂಡಿಯಾ ಈ ಐದು ಪ್ರಮುಖ ಪ್ರಶ್ನೆಗಳಿಗೆ ದೃಢವಾದ ಉತ್ತರಗಳನ್ನು ಹುಡುಕುವಲ್ಲಿ ಯಶಸ್ವಿಯಾದರೆ, ಅವರು ಟಿ20 ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸ ಹೊಂದಬಹುದು.

ಭಾರತದ ಬ್ಯಾಟಿಗ್ ಕ್ರಮಾಂಕದಲ್ಲಿ ಯಾವುದೇ ಬದಲಾವಣೆ ಮಾಡುವ ಸಾಧ್ಯತೆ ಇಲ್ಲ. ಭಾರತದ ಅಗ್ರ ಬ್ಯಾಟಿಂಗ್ ಕ್ರಮಾಂಕ ಈಗಾಗಲೇ ನಿರ್ಧಾರವಾಗಿದೆ. ರೋಹಿತ್ ಶರ್ಮಾ ಮತ್ತು ಕೆ.ಎಲ್‌.ರಾಹುಲ್ ಆರಂಭಿಕರಾಗಿ ಕಣಕ್ಕಿಳಿಯಲಿದ್ದು, ಕೊಹ್ಲಿ ಮತ್ತು ಯಾದವ್ ಕ್ರಮವಾಗಿ ಮೂರು ಮತ್ತು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲಿದ್ದಾರೆ.

ಕಳೆದ ವರ್ಷದ ಟಿ 20 ವಿಶ್ವಕಪ್‌ನಿಂದ ಭಾರತ ತಂಡವು ಅದೇ ಮಾದರಿಯನ್ನು ಅಳವಡಿಸಿಕೊಂಡಿದೆ. ಕಳೆದ ವರ್ಷದ ವಿಧಾನಕ್ಕಿಂತ ಏಕೈಕ ಬದಲಾವಣೆಯೆಂದರೆ ಭಾರತವು ಟಿ 20 ಸ್ವರೂಪದಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡುತ್ತಿದೆ. ಈ ನಾಲ್ವರು ಅಗ್ರ ಕ್ರಮಾಂಕದ ಆಟಗಾರರ ಪ್ರದರ್ಶನ ಟಂ ಇಂಡಿಯಾಗೆ ಮುಖ್ಯವಾಗಿದೆ.

ರಿಷಬ್ ಪಂತ್ ಅಥವಾ ದಿನೇಶ್ ಕಾರ್ತಿಕ್

ರಿಷಬ್ ಪಂತ್ ಅಥವಾ ದಿನೇಶ್ ಕಾರ್ತಿಕ್

ದಕ್ಷಿಣ ಆಫ್ರಿಕಾ ಟಿ20 ಸರಣಿಯಿಂದ ಪಂತ್ ಅಥವಾ ಕಾರ್ತಿಕ್ ನಡುವೆ ಯಾರನ್ನು ಆಯ್ಕೆ ಮಾಡಬೇಕು ಎಂಬ ಚರ್ಚೆ ನಡೆಯುತ್ತಿದೆ. ಟಿ20 ಪಂದ್ಯಗಳಲ್ಲಿ ಪಂತ್‌ಗೆ ಸಾಕಷ್ಟು ಅವಕಾಶ ನೀಡಲಾಗಿದೆ, ಆದರೆ ಪಂತ್ ತಮಗೆ ಸಿಕ್ಕ ಅವಕಾಶಗಳನ್ನು ಉತ್ತಮವಾಗಿ ಬಳಸಿಕೊಂಡಿಲ್ಲ.

58 ಅಂತಾರಾಷ್ಟ್ರೀಯ ಟಿ20 ಪಂದ್ಯಗಳನ್ನಾಡಿರುವ ಪಂತ್ ಸರಾಸರಿ 24 ಹೊಂದಿದ್ದು, ಸ್ಟ್ರೈಕ್ ರೇಟ್ ಕೂಡ ಉತ್ತಮವಾಗಿಲ್ಲ. ಅವರನ್ನು ಆಡುವ ಬಳಗದಿಂದ ಹೊರಗಿಟ್ಟರೆ ಭಾರತದ ಅಗ್ರ ಬ್ಯಾಟರ್ ಗಳಲ್ಲಿ ಯಾವುದೇ ಎಡಗೈ ಬ್ಯಾಟರ್ ಇರುವುದಿಲ್ಲ. ಮತ್ತೊಂದೆಡೆ, ದಿನೇಶ್ ಕಾರ್ತಿಕ್ ಫಿನಿಶರ್ ಪಾತ್ರವನ್ನು ನಿಭಾಯಿಸುತ್ತಿದ್ದಾರೆ. ಇಬ್ಬರ ಪಾತ್ರವನ್ನು ಆಸ್ಟ್ರೇಲಿಯಾ ಸರಣಿ ನಿರ್ಧರಿಸಲಿದೆ.

ಇದು ಬಲಿಷ್ಠವಾಗಿದೆ: ಟಿ20 ವಿಶ್ವಕಪ್‌ಗೆ ಭಾರತ ತಂಡವನ್ನು ಬೆಂಬಲಿಸಿದ ಮಾಜಿ ಕ್ರಿಕೆಟಿಗ

ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾಗೆ ಪರೀಕ್ಷೆ

ಹರ್ಷಲ್ ಪಟೇಲ್, ಜಸ್ಪ್ರೀತ್ ಬುಮ್ರಾಗೆ ಪರೀಕ್ಷೆ

ಗಾಯದ ಸಮಸ್ಯೆಯಿಂದಾಗಿ ಹರ್ಷಲ್ ಮತ್ತು ಬುಮ್ರಾ ಏಷ್ಯಾಕಪ್‌ನಿಂದ ಹೊರಗುಳಿದಿದ್ದರು. ಡೆತ್ ಓವರ್‌ಗಳಲ್ಲಿ ಭಾರತ ಹೆಚ್ಚು ರನ್ ಬಿಟ್ಟುಕೊಟ್ಟ ಕಾರಣ ಇದು ಏಷ್ಯಾಕಪ್‌ನಲ್ಲಿ ತಂಡದ ಮೇಲೆ ಪರಿಣಾಮ ಬೀರಿತು. ಇವರಿಬ್ಬರು ಈಗ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದು, ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ.

ಹರ್ಷಲ್ ಪಟೇಲ್ ತಮ್ಮ ವಿಭಿನ್ನ ಬೌಲಿಂಗ್‌ನಿಂದಲೇ ಹೆಸರು ಮಾಡಿದ್ದಾರೆ. ಅದರಲ್ಲೂ ಅಂತಿಮ ಓವರ್‌ಗಳಲ್ಲಿ ಅವರು ಮುಖ್ಯ ಪಾತ್ರ ವಹಿಸುತ್ತಾರೆ. ಬುಮ್ರಾ ಪವರ್ ಪ್ಲೇ ಮತ್ತು ಡೆತ್ ಓವರ್‌ಗಳಲ್ಲಿ ನಿಜವಾದ ವಿಕೆಟ್ ಟೇಕರ್ ಆಗಿದ್ದಾರೆ. ವಿಶ್ವಕಪ್‌ಗೂ ಮುನ್ನ ಇವರಿಬ್ಬರೂ ಆಸ್ಟ್ರೇಲಿಯಾ ವಿರುದ್ಧದ ಟಿ20 ಸರಣಿಯಲ್ಲಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿದೆ.

ಪಟೇಲ್ ಅಥವಾ ಹೂಡಾ ಯಾರಿಗೆ ಸಿಗುತ್ತೆ ಅವಕಾಶ

ಪಟೇಲ್ ಅಥವಾ ಹೂಡಾ ಯಾರಿಗೆ ಸಿಗುತ್ತೆ ಅವಕಾಶ

2022 ರ ಟಿ20 ವಿಶ್ವಕಪ್‌ನಿಂದ ರವೀಂದ್ರ ಜಡೇಜಾ ಹೊರಗುಳಿಯುವುದರೊಂದಿಗೆ, ಭಾರತವು ಅಕ್ಷರ್ ಪಟೇಲ್‌ರನ್ನು ಆರಿಸಿಕೊಂಡಿದೆ. ಆದರೆ ಆಡುವ 11ರ ಬಳಗದಲ್ಲಿ ಅಕ್ಷರ್ ಪಟೇಲ್ ಇರುತ್ತಾರ ಇಲ್ಲ ದೀಪಕ್ ಹೂಡಾ ಆಯ್ಕೆಯಾಗುತ್ತಾರ ಎಂದು ನೋಡಬೇಕಿದೆ.

ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಈ ಇಬ್ಬರಿಗೂ ಅವಕಾಶ ಕೊಟ್ಟು ನೋಡುವ ಸಾಧ್ಯತೆ ಇದ್ದು, ಅತ್ಯುತ್ತಮ ಪ್ರದರ್ಶ ನೀಡುವ ಆಟಗಾರನನ್ನು ವಿಶ್ವಕಪ್‌ನಲ್ಲಿ ಮೊದಲ ಆಯ್ಕೆಗೆ ಪರಿಗಣಿಸುವ ಸಾಧ್ಯತೆ ಇದೆ. ಇಬ್ಬರಲ್ಲಿ ಯಾರಿಗೆ ಪ್ರದರ್ಶನ ನೀಡಬೇಕು ಎನ್ನುವ ಪ್ರಶ್ನೆಗೆ ಸರಣಿಯಲ್ಲಿ ಉತ್ತರ ಕಂಡುಕೊಳ್ಳುವ ಸಾಧ್ಯತೆ ಇದೆ.

ರವಿಚಂದ್ರನ್ ಅಶ್ವಿನ್‌ ಸಾಮರ್ಥ್ಯ ಪರೀಕ್ಷೆ

ರವಿಚಂದ್ರನ್ ಅಶ್ವಿನ್‌ ಸಾಮರ್ಥ್ಯ ಪರೀಕ್ಷೆ

ಟಿ20 ವಿಶ್ವಕಪ್‌ಗೆ ಭಾರತದ ಪ್ರಮುಖ ಸ್ಪಿನ್ನರ್ ಲೆಗ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್. 2022 ರ ಐಪಿಎಲ್‌ ಮತ್ತು ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದು ಅರ್ಹವಾಗಿಯೇ ತಮ್ಮ ಸ್ಥಾನವನ್ನು ಖಚಿತಪಡಿಸಿಕೊಂಡಿದ್ದಾರೆ.

ಚಹಾಲ್ ಏಷ್ಯಾ ಕಪ್ ಸಮಯದಲ್ಲಿ ವಿಫಲರಾಗಿದ್ದರೂ ಸಹ. ಅವರು ಮಧ್ಯಮ ಓವರ್‌ಗಳಲ್ಲಿ ವಿಕೆಟ್‌ಗಳನ್ನು ತೆಗೆಯಲು ಸಾಧ್ಯವಾಗಲಿಲ್ಲ ಮತ್ತು ಹೆಚ್ಚಿನ ರನ್‌ ಬಿಟ್ಟುಕೊಟ್ಟರು. ಚಹಲ್ ಹೊರತುಪಡಿಸಿ, ಭಾರತವು ವಿಶ್ವಕಪ್‌ಗಾಗಿ ರವಿಚಂದ್ರನ್‌ ಅಶ್ವಿನ್ ಅವರಿಗೆ ಮಣೆ ಹಾಕಿದೆ. ಅನುಭವಿ ಆಫ್-ಸ್ಪಿನ್ನರ್ ಅಶ್ವಿನ್ 2021 ರಲ್ಲಿ ತಂಡಕ್ಕೆ ಮರಳಿದ ನಂತರ ಟಿ20 ಪಂದ್ಯಗಳಲ್ಲಿ ಅದ್ಭುತವಾಗಿ ಬೌಲಿಂಗ್ ಮಾಡುತ್ತಿದ್ದಾರೆ. ಅವರು ಡೆತ್ ಓವರ್‌ಗಳಲ್ಲಿ ಬ್ಯಾಟಿಂಗ್ ಕೂಡ ಮಾಡುತ್ತಿದ್ದು, ಇಬ್ಬರಿಗೂ ಆಸ್ಟ್ರೇಲಿಯಾ ಸರಣಿ ಪೂರ್ವಭಾವಿ ಪರೀಕ್ಷೆಯಂತಾಗಿದೆ.

Story first published: Tuesday, September 13, 2022, 20:41 [IST]
Other articles published on Sep 13, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+