Anuj Rawat: ಜೀರೋದಿಂದ ಹೀರೋ ಆದ ಆರ್‌ಸಿಬಿ ವಿಕೆಟ್ ಕೀಪರ್
ಭಾರತದಲ್ಲಿ ಕ್ರಿಕೆಟ್ ಪ್ರತಿಭೆಗಳ ದೊಡ್ಡ ಗಣಿ ಇದೆ. ಇಂದು ಯಾವುದೇ ಪರಿಚಯದ ಅಗತ್ಯವಿಲ್ಲದೆ, ಅನೇಕ ಆಟಗಾರರು ಸ್ಟಾರ್ ಕ್ರಿಕೆಟಿಗನಾಗುವ ಗೆರೆಯನ್ನು ದಾಟಿದ್ದಾರೆ. ಈ ಪಟ್ಟಿಗೆ ಮತ್ತೊಂದು ಹೆಸರು ಸೇರ್ಪಡೆಯಾಗಿದೆ.
ಸ್ಟಾರ್ ವಿಕೆಟ್‌ಕೀಪರ್-ಬ್ಯಾಟರ್ ಅನುಜ್ ರಾವತ್ ಅವರ ಪ್ರತಿಭೆಯನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಗುರುತಿಸಿದ ನಂತರ ಜೀರೋದಿಂದ ಹೀರೋ ಆಗಿದ್ದಾರೆ. ಐಪಿಎಲ್ 2025ರ ಮೆಗಾ ಹರಾಜಿಗೂ ಅವರು ಮುಂಚೆಯೇ ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಅಬ್ಬರಿಸುತ್ತಿದ್ದಾರೆ. ಅಷ್ಟಕ್ಕೂ ಈ ಯುವ ಆಟಗಾರನ ಕ್ರಿಕೆಟ್ ಪಯಣ ನೀವು ಅಂದುಕೊಂಡತೆ ಸುಲಭವಾಗಿರಲಿಲ್ಲ. ಈ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.

ಕ್ರಿಸ್ ಗೇಲ್ ರೀತಿ ಸಂಭ್ರಮಾಚರಣೆ
ಇತ್ತೀಚೆಗೆ, ಅನುಜ್ ರಾವತ್ ಡೆಲ್ಲಿ ಪ್ರೀಮಿಯರ್ ಲೀಗ್‌ನಲ್ಲಿ ಭರ್ಜರಿ ಇನ್ನಿಂಗ್ಸ್‌ವೊಂದನ್ನು ಆಡಿದ್ದರು. ಕೇವಲ 66 ಎಸೆತಗಳಲ್ಲಿ ಶತಕ ಬಾರಿಸಿ ಮಿಂಚಿದ್ದರು. ಈ ವೇಳೆ ಶತಕ ಬಾರಿಸಿದ ಬಳಿಕ ಅವರು ಆರ್‌ಸಿಬಿ ಮಾಜಿ ಬ್ಯಾಟರ್ ಕ್ರಿಸ್ ಗೇಲ್ ಅವರಂತೆ ಸಂಭ್ರಮಿಸಿದ್ದರು. ಪಂದ್ಯದ ನಂತರ ಮಾತನಾಡಿದ ಅವರು, ಈ ಆಚರಣೆ ನನಗೆ ತುಂಬಾ ಇಷ್ಟವಾಯಿತು. ಶತಕ ಬಾರಿಸಿದಾಗಲೆಲ್ಲ ಹೀಗೆ ಸಂಭ್ರಮಿಸುತ್ತೇನೆ ಎಂದುಕೊಂಡಿದ್ದೆ ಎಂದು ಹೇಳಿದ್ದರು.
ಯಾವಾಗ ಕ್ರಿಕೆಟ್ ಶುರು?
ಉತ್ತರಾಖಂಡದ ರೈತ ಕುಟುಂಬದಲ್ಲಿ ಅನುಜ್ ರಾವತ್ ಅವರು 17 ಅಕ್ಟೋಬರ್ 1999 ರಂದು ಜನಿಸಿದರು. ಅವರು ತಮ್ಮ 10ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದ. ಅವರ ಕ್ರಿಕೆಟ್ ಪ್ರಯಾಣದಲ್ಲಿ ಬಾಲ್ಯದಿಂದಲ್ಲೂ ಕುಟುಂಬಸ್ಥರು ಮತ್ತು ಸ್ನೇಹಿತರು ಬೆಂಬಲ ನೀಡುತ್ತಿದ್ದರು.
ವೃತ್ತಿಜೀವನದ ತಿರುವು
ಅನುಜ್ ರಾವತ್ ಅವರ ವೃತ್ತಿಜೀವನಕ್ಕೆ ತಿರುವು ಕೊಟ್ಟಿದ್ದು ಐಪಿಎಲ್. ಸಂದರ್ಶನವೊಂದರಲ್ಲಿ ಅವರು ಹೇಳಿರುವ ಪ್ರಕಾರ, 'ಐಪಿಎಲ್ ಫ್ರಾಂಚೈಸಿ ತಂಡಗಳಿಗೆ ಮೊದಲು ಟ್ರಯಲ್ಸ್ ಕೊಡುತ್ತಿದ್ದೆ, ಆಯ್ಕೆಯಾಗದಿದ್ದರೆ ಬೇಸರವಾಗುತ್ತಿತ್ತು. ಆದರೆ ನಾನು 19 ವರ್ಷದೊಳಗಿನವರ ದೆಹಲಿ ತಂಡದ ಪರ ಆಡಲು ಪ್ರಾರಂಭಿಸಿದಾಗ ಒಂದು ಅವಕಾಶ ಬಂತು. ನಂತರ ನಾನು ರಾಜಸ್ಥಾನ ರಾಯಲ್ಸ್‌ಗೆ ಆಯ್ಕೆಯಾದಾಗ ಭಾರತ ಅಂಡರ್ -19 ತಂಡದಿಂದಲ್ಲೂ ಕರೆ ಬಂದಿತ್ತು. ಇದಾದ ಬಳಿಕ ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಆರ್‌ಸಿಬಿ ನನ್ನನ್ನು ಖರೀದಿಸಿತು. ಇದು ನನ್ನ ವೃತ್ತಿಜೀವನಕ್ಕೆ ಅತ್ಯಂತ ದೊಡ್ಡ ತಿರುವು ಎಂದು ಹೇಳಿ ಕೊಂಡಿದ್ದಾರೆ.
ಕೊಹ್ಲಿ ಬಗ್ಗೆ ಹೇಳಿದ್ದೇನು?
ಇದೇ ವೇಳೆ ಆರ್‌ಸಿಬಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಬಗ್ಗೆ ಕೂಡ ಅನುಜ್ ರಾವತ್ ಮಾತನಾಡಿದ್ದಾರೆ. 'ಮೈದಾನದ ಹೊರಗೆ ಅಥವಾ ಒಳಗೆ ಇರಲಿ ವಿರಾಟ್ ಭಯ್ಯಾ ಜೊತೆ ಖುಷಿಯಾಗುತ್ತದೆ. ಅವರೊಂದಿಗೆ ಎಲ್ಲವನ್ನೂ ಆನಂದಿಸುತ್ತೇನೆ. ಅವರ ಜೊತೆ ಬ್ಯಾಟಿಂಗ್ ಮಾಡುವುದು ತುಂಬಾ ಖುಷಿಯಾಗುತ್ತದೆ. ಜೊತೆಗೆ ಬ್ಯಾಟಿಂಗ್ ಮಾಡುವುದು ಸುಲಭವಾಗುತ್ತದೆ.
ಬ್ಯಾಟಿಂಗ್ ಮಾಡುವಾಗ ಏನಾದರೂ ಸಮಸ್ಯೆಗಳಾದರೆ, ಬೌಲರ್ ಯಾವ ಬಾಲ್ ಅನ್ನು ಬೌಲ್ ಮಾಡಲಿದ್ದಾನೆ ಎಂಬುದನ್ನು ಅವರು ನಮ್ಮ ಬಳಿ ಬಂದು ತಕ್ಷಣವೇ ಹೇಳುತ್ತಾರೆ' ಎಂದು ಕೊಹ್ಲಿ ಜೊತೆಗಿನ ಬಾಂಧವ್ಯವನ್ನು ಹಂಚಿಕೊಂಡಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications