Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

'ಕೊಹ್ಲಿ ಜೊತೆ ಮದ್ವೆ': ಬಿಸಿಸಿಐಗೆ ಅನುಷ್ಕಾ 'ಗೂಗ್ಲಿ'

ಮುಂಬೈ, ಆ.24-: ಟೀಂ ಇಂಡಿಯಾದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಜತೆ ನಟಿ ಅನುಷ್ಕಾ ಶರ್ಮ ಸದ್ಯದಲ್ಲೇ ವಿವಾಹವಾಗುತ್ತಾರೆ ಎಂಬ ಹೇಳಿಕೆ ನೀಡಿದ್ದ ಬಿಸಿಸಿಐಗೆ ಅನುಷ್ಕಾ ಸರಿಯಾದ ಗೂಗ್ಲಿ ಎಸೆದಿದ್ದಾರೆ. ನೀಡಿದ್ದಾರೆ. ಮದುವೆ ಸುದ್ದಿಯನ್ನು ಬಾಲಿವುಡ್ ನಟಿ ಅನುಷ್ಕಾ ಶರ್ಮ ತಳ್ಳಿಹಾಕಿದ್ದಾರೆ. ನಾನು ವಿರಾಟ್ ಕೊಹ್ಲಿಯನ್ನು ಮದುವೆಯಾಗುತ್ತೇನೆಂಬುದು ಗಾಳಿ ಸುದ್ದಿ. ಈ ಬಗ್ಗೆ ನಮ್ಮ ಕುಟುಂಬದಲ್ಲಿ ಯಾವುದೇ ರೀತಿಯ ಮಾತುಕತೆ ನಡೆದಿಲ್ಲ. ಇದು ಆಧಾರರಹಿತ ವರದಿಯಾಗಿದೆ ಎಂದು ಕಿಡಿಕಾರಿದ್ದಾರೆ.

26 ವರ್ಷದ ಅನುಷ್ಕಾ ಶರ್ಮಾ ಮತ್ತು ಕೊಹ್ಲಿ ಸದ್ಯದಲ್ಲೇ ಸಪ್ತಪದಿ ತುಳಿಯಲಿದ್ದಾರೆಂಬ ವದಂತಿ ಎಲ್ಲೆಡೆ ಕೇಳಿಬಂದಿತ್ತು. ಇಂಗ್ಲೆಂಡ್ ಪ್ರವಾಸದಲ್ಲಿರುವ ಕೊಹ್ಲಿ ಮತ್ತು ಶರ್ಮಾ ಒಂದೇ ಹೊಟೇಲಿನ ತಂಗಿದ್ದರೆ ಎಂದು ಹೇಳಲಾಗಿತ್ತು.[ವಿರಾಟ್- ಅನುಷ್ಕಾ ಮದುವೆಗೆ ಬಿಸಿಸಿಐ ಪೌರೋಹಿತ್ಯ]

ಇದಕ್ಕೆ ಕೆಲವು ಕಡೆ ಟೀಕೆಗಳು ಕೇಳಿಬಂದಿದ್ದರೂ ಬಿಸಿಸಿಐ ಸಮರ್ಥಿಸಿಕೊಂಡಿತ್ತು. ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಮದುವೆಗೆ ಬಿಸಿಸಿಐ ಪೌರೋಹಿತ್ಯ ವಹಿಸಿದಂತೆ ಮಾತನಾಡಿತ್ತು. ಅವರಿಬ್ಬರು ಮದುವೆಯಾಗುವುದಾಗಿ ಹೇಳಿದರು ಹೀಗಾಗಿ ಅವರನ್ನು ಒಟ್ಟಿಗೆ ಇರಲು ಬಿಟ್ಟೆವು ಎಂದು ಬಿಸಿಸಿಐ ವಕ್ತಾರರು ಸ್ಪಷ್ಟನೆ ನೀಡಿದ್ದರು.

Anushka Sharma denies wedding plan rumours with Virat Kohli

ಆದರೆ, ಈ ಬಗ್ಗೆ ಪ್ರತಿಕ್ರಿಯಿಸಿರುವ ಅನುಷ್ಕಾ 'ನಾನು ಮದುವೆಯಾಗುವುದರ ಬಗ್ಗೆ ಪ್ರತಿದಿನ ನೂರಾರು ವದಂತಿಗಳು ಕೇಳಿಬರುತ್ತಿವೆ. ಹಲವು ದಿನಗಳಿಂದ ಇಂಥ ಸುದ್ದಿಗಳನ್ನು ಯಾರು ಹಬ್ಬಿಸುತ್ತಾರೋ ನನಗೆ ಗೊತ್ತಾಗುತ್ತಿಲ್ಲ. ನಿಜ ಹೇಳಬೇಕೆಂದರೆ, ನನ್ನ ವಿವಾಹದ ಬಗ್ಗೆ ಕುಟುಂಬದ ಸದಸ್ಯರೇ ತಲೆ ಕೆಡಿಸಿಕೊಂಡಿಲ್ಲ. ಆದರೂ ಮಾಧ್ಯಮಗಳಲ್ಲಿ ಭಾರೀ ಚರ್ಚೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅನುಷ್ಕಾ ಶರ್ಮ ಮತ್ತು ವಿರಾಟ್ ಕೊಹ್ಲಿ ನಡುವಿನ ಪ್ರೀತಿ-ಪ್ರಣಯ ನ್ಯೂಜಿಲೆಂಡ್ ನಲ್ಲಿ ಬಹಿರಂಗಗೊಂಡಿತ್ತು. ಇಬ್ಬರೂ ಪರಸ್ಪರ ಒಟ್ಟಾಗಿ ತಿರುಗಾಡುತ್ತಿದ್ದ ದೃಶ್ಯವನ್ನು ಮಾಧ್ಯಮಗಳು ಸೆರೆಹಿಡಿದಿದ್ದವು. ನಂತರ ಕೆಲವು ಜಾಹೀರಾತುಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು. ನಟ ಶಾರುಖ್ ಖಾನ್ ಅವರು ಕಾರ್ಯಕ್ರಮವೊಂದರಲ್ಲಿ ಕೊಹ್ಲಿ ಕೊರಳಿಗೆ ಅನುಷ್ಕಾ ಚಿತ್ರ ಹಾಕಿ ಇಬ್ಬರ ನಡುವೆ ಗೆಳೆತನಕ್ಕಿಂತ ಹೆಚ್ಚಿನ ಸಂಬಂಧವಿರುವುದನ್ನು ಸಾರಿದ್ದರು.

ಈ ನಡುವೆ ಇಂಗ್ಲೆಂಡ್ ಪ್ರವಾಸ ನಿರತ ಟೀಂ ಇಂಡಿಯಾ ಆಟಗಾರರ ಕಳಪೆ ಪ್ರದರ್ಶನಕ್ಕೆ ಆಟಗಾರರ ಪತ್ನಿ ಹಾಗೂ ಗೆಳತಿಯ ಸಾಂಗತ್ಯವೇ ಕಾರಣ ಎಂದು ಬಿಸಿಸಿಐ ಒಪ್ಪಿಕೊಂಡು ನಂತರ ಬೇರೆ ರಾಗ ಹಾಡಿತ್ತು.[ಹೆಣ್ಣಿನ ಮೋಹ, ಕ್ರಿಕೆಟರ್ಸಲ್ಲಿ ಕಾಣದ ರನ್ ದಾಹ]

Story first published: Wednesday, January 3, 2018, 10:12 [IST]
Other articles published on Jan 3, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+