Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ವಿರಾಟ್ ಕೊಹ್ಲಿ ಹೇರ್ ಕಟ್ ಮಾಡಿದ ಅನುಷ್ಕಾ ಶರ್ಮಾ: ವೈರಲ್ ವೀಡಿಯೋ

Anushka Sharma Gives Virat Kohli Haircut With Kitchen Scissors

ನವದೆಹಲಿ, ಮಾರ್ಚ್ 28: ಕೊರೊನಾವೈರಸ್‌ನಿಂದಾಗಿ ಭಾರತದಾದ್ಯಂತ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಶರ್ಮಾ ಅನಿವಾರ್ಯವಾಗಿ ಮನೆಯಲ್ಲೇ ಬಂಧಿಯಾಗಿಬಿಟ್ಟಿದ್ದಾರೆ. ಯಾವಾಗಲೂ ಬ್ಯುಸಿಯಾಗಿರುತ್ತಿದ್ದ ಕೊಹ್ಲಿ ಕೂಡ ಅನಿರೀಕ್ಷಿತ ಬಿಡುವು ಕಳೆಯಬೇಕಾಗಿ ಬಂದಿದೆ.

ದೇಶದಲ್ಲಿ ನಿಷೇಧ ಜಾರಿಯಲ್ಲಿರುವುದರಿಂದ ದೈನಂದಿನ ಅಗತ್ಯಗಳಿಗೂ ಹೊರಗಡೆ ಸುತ್ತಾಡಲು ನಿರ್ಬಂಧವಿದೆ. ಹೀಗಿದ್ದಾಗ ಹೇರ್ ಕಟ್ ಮಾಡಬೇಕಾಗಿ ಬಂದರೆ ಕೊಹ್ಲಿ ಏನು ಮಾಡುತ್ತಾರೆ? ಇನ್ನೇನು ಮಾಡುತ್ತಾರೆ; ಅಪಾರ ಕೌಶಲಗಳನ್ನು ಹೊಂದಿರುವ ಪತ್ನಿ ಅನುಷ್ಕಾ ಜೊತೆಯಲ್ಲಿದ್ದಾರಲ್ಲ?

ಲಾಕ್‌ಡೌನ್‌ನಿಂದಾಗಿ ಮನೆಯಲ್ಲಿರುವ ಕಿಂಗ್ ಕೊಹ್ಲಿಗೆ ಅನುಷ್ಕಾ ಮನೆಯಲ್ಲೇ ಹೇರ್ ಕಟ್‌ ಮಾಡಿದ್ದಾರೆ. ಹಾಗಂತ ಸನುಷ್ಕಾ ಸುಮ್ಮನೆ ಕೊಹ್ಲಿ ತಲೆಯ ಮೇಲೆ ಕತ್ತರಿಯನ್ನಾಡಿಸಿಲ್ಲ, ಕೊಹ್ಲಿ ಸ್ಟೈಲ್‌ಗೆ ಒಪ್ಪುವಂತೆ ಚೆನ್ನಾಗೇ ಹೇರ್ ಕಟ್ ಮಾಡಿದ್ದಾರೆ.

ಪತಿ ಕೊಹ್ಲಿಯ ಹೇರ್ ಕಟ್ ಮಾಡಿರುವ ವೀಡಿಯೋವನ್ನು ಅನುಷ್ಕಾ ಇನ್‌ಸ್ಟಾಗ್ರಾಮ್‌ಮತ್ತು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. 'ಪ್ರತ್ಯೇಕವಾಗಿ ಇರಬೇಕಾಗಿ ಬಂದಾಗ ಇಂಥದ್ದೆಲ್ಲ ನಡೆಯುತ್ತದೆ. ಅದೂ ಅಡುಗೆ ಕೋಣೆಯ ಕತ್ತರಿಯಿಂದ ಕೂದಲು ಕತ್ತರಿಸಲು ನಾವು ಅನುಮತಿ ನೀಡಬೇಕಾಗಿ ಬರುತ್ತದೆ' ಎಂದು ಇದೇ ವೀಡಿಯೋ ಶೇರ್ ಮಾಡಿಕೊಂಡಿರುವ ಕೊಹ್ಲಿ ಬರೆದುಕೊಂಡಿದ್ದಾರೆ.

Story first published: Saturday, March 28, 2020, 15:18 [IST]
Other articles published on Mar 28, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+