Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಕಠಿಣ ಸಂದರ್ಭದಲ್ಲಿ ಸ್ಪೂರ್ತಿಯಾದಳು: ಅನುಷ್ಕಾ ಬಗ್ಗೆ ವಿರಾಟ್ ಮಾತು

Anushka Sharmas Composure In Tough Situations Inspires Me: Virat Kohli

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಮ್ಮ ಪತ್ನಿ ಬಾಲಿವಿಡ್ ನಟಿ ಅನುಷ್ಕಾ ಶರ್ಮಾ ತನ್ನ ಬದುಕಿನಲ್ಲಿ ಯಾವೆಲ್ಲಾ ರೀತಿಯ ಬದಲಾವಣೆಗೆ ಕಾರಣವಾದರು ಎಂಬುದನ್ನು ಹೇಳಿಕೊಂಡಿದ್ದಾರೆ. ವಿದ್ಯಾರ್ಥಿಗಳೊಂದಿಗೆ ಆನ್‌ಲೈನ್‌ ಸಂವಾದ ಕಾರ್ಯಕ್ರಮದಲ್ಲಿ ಅವರು ಭಾಗವಹಿಸಿದ್ದರು.

ನಾನು ಆಕೆಯನ್ನು ಭೇಟಿಯಾದ ಬಳಿಕ ಬದುಕಿನಲ್ಲಿ ಅತಿ ಮುಖ್ಯವಾದ ವಿಚಾರವನ್ನು ಕಲಿತೆ. ತಾಳ್ಮೆಯ ಒಂದಂಶವೂ ಇರದ ನನ್ನಲ್ಲಿ ತಾಳ್ಮೆಯನ್ನು ಕಲಿಸಿದಾಕೆ ಅನುಷ್ಕಾ, ನನ್ನನ್ನು ನಾನೇ ಹತೋಟಿಯಲ್ಲಿಡಲು ಆಕೆ ನೆರವಾದಳು ಅನುಷ್ಕಾ ಶರ್ಮಾ ಎಂದು ವಿರಾಟ್ ಕೊಹ್ಲಿ ಹೇಳಿಕೊಂಡಿದ್ದಾರೆ.

ಅನುಷ್ಕಾ ಶರ್ಮಾ ಕಡೆಯಿಂದ ನಾನು ಕಲಿತ ಮತ್ತೊಂದು ವಿಚಾರವೇನೆಂದರೆ ಕಠಿಣ ಪರಿಸ್ಥಿತಿಯನ್ನು ಎದುರಿಸುವ ಬಗೆ. ಆಕೆ ಶಾಂತಚಿತ್ತದಿಂದಲೇ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಾಳೆ ಅದನ್ನೂ ನಾನು ಆಕೆಯಿಂದ ಕಲಿತಿದ್ದೇನೆ , ಪರಿಸ್ಥಿತಿ ತನ್ನ ಕೈ ಮೀರಿ ಹೋಗುತ್ತಿದೆ ಎಂಬಂತಾ ಸಂದರ್ಭಗಳಲ್ಲಿ ಈ ಸಂಗತಿಯನ್ನು ನಾನು ಅಳವಡಿಸಿಕೊಳ್ಳುತ್ತೇನೆ ಎಂದಿದ್ದಾರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ.

ವಿರಾಟ್ ಕೊಹ್ಲಿ ಈ ಸಂದರ್ಭದಲ್ಲಿ ಕೊರೊನಾ ವೈರಸ್ ಬಗ್ಗೆಯೂ ಮಾತನಾಡಿದ್ದಾರೆ. ಕೊರೊನಾ ವೈರಸ್‌ನ ಕಾರಣದಿಂದ ಜಗತ್ತಿನಲ್ಲಿ ಆತಂಕ ಉಂಟಾಗಿದ್ದರೂ ಒಬ್ಬರಿಗೊಬ್ಬರು ಸಹಾನುಭೂತಿಯನ್ನು ವ್ಯಕ್ತಪಡಿಸಲು ಇದು ಕಾರಣವಾಗಿದೆ. ಕೊರೊನಾ ವೈರಸ್ ಬಳಿಕವೂ ಇದು ಮುಂದುವರಿಯಬಹುದು ಎಂಬುದು ನನ್ನ ಅನಿಸಿಕೆ ಎಂದು ಕೊಹ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಕೊರೊನಾ ವೈರಸ್ ವಿರುದ್ಧ ನೇರವಾಗಿ ಹೋರಾಟವನ್ನು ನಡೆಸುತ್ತಿರುವ ವೈದ್ಯರು, ನರ್ಸ್‌ಗಳು ಮತ್ತು ಪೊಲೀಸರಿಗೆ ನಾವು ಈ ಸಂದರ್ಭದಲ್ಲಿ ಇನ್ನಷ್ಟು ಹೆಚ್ಚಿನ ಬೆಂಬಲವನ್ನು ನೀಡಬೇಕು ಎಂದು ಹೇಳಿದ್ದಾರೆ.

ವಿರಾಟ್ ಕೊಹ್ಲಿ ಮತ್ತು ಅನಿಷ್ಕಾ ಶರ್ಮಾ 2013ರಲ್ಲಿ ಜಾಹೀರಾತಿಗಾಗಿ ಭೇಟಿಯಾಗಿದ್ದರು. ಬಳಿಕ ಸ್ನೇಹಿತರಾದ ಈ ಇಬ್ಬರೂ ಸ್ಟಾರ್‌ಗಳು ಬಳಿಕ ಒಬ್ಬರನ್ನೊಬ್ಬರು ಪ್ರೇಮಿಸಲು ಆರಂಭಿಸಿದರು. 2017ರ ಡಿಸೆಂಬರ್‌ನಲ್ಲಿ ಈ ತಾರಾ ಜೋಡಿ ಮದುವೆಯ ಬಂಧಕ್ಕೆ ಒಳಗಾದರು.

Story first published: Wednesday, April 22, 2020, 16:50 [IST]
Other articles published on Apr 22, 2020
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+