ಕೂಲ್ ಕ್ಯಾಪ್ಟನ್ ಧೋನಿ ಪತ್ನಿ-ಹಾಲಿ ಕ್ಯಾಪ್ಟನ್ ಕೊಹ್ಲಿ ಮಡದಿ ಸ್ಕೂಲ್‌ಮೇಟ್ಸ್!

ಮುಂಬೈ, ಫೆಬ್ರವರಿ 1: ಈಗ ಟೀಮ್ ಇಂಡಿಯಾದಲ್ಲಿರುವ ಕೂಲ್ ಕ್ಯಾಪ್ಟನ್ ಎಂಎಸ್ ಧೋನಿಯ ಪತ್ನಿ ಸಾಕ್ಷಿ ಧೋನಿ ಮತ್ತು ಹಾಲಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಇಬ್ಬರೂ ಕ್ಲಾಸ್‌ಮೇಟ್‌ಗಳಾ? ಹೌದೆನ್ನುತ್ತಿದೆ ಚಿತ್ರಗಳು. ಈಗ ಸಾಮಾಜಿಕ ಜಾಲತಾಣಗಳಲ್ಲಿ ಈ ಸುದ್ದಿ ಭರ್ಜರಿಯಾಗಿ ಹರಿದಾಡುತ್ತಿದೆ.
ಭಾರತ ಕ್ರಿಕೆಟ್ ತಂಡದ ಬಲವಾಗಿ ಗುರುತಿಸಿಕೊಂಡಿರುವ ಧೋನಿ-ಕೊಹ್ಲಿ ಇಬ್ಬರ ಪತ್ನಿಯರೂ ಬಾಲ್ಯದಲ್ಲಿ ಒಂದೇ ಶಾಲೆಯಲ್ಲಿ ಕಲಿತವರಂತೆ. ಸಾಕ್ಷಿ ಮತ್ತು ಅನುಷ್ಕಾ ಒಂದೇ ಚಿತ್ರದಲ್ಲಿ ಇದ್ದಾರೆ ಎನ್ನಲಾಗಿರುವ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿವೆ.
ಅನುಷ್ಕಾ ಶರ್ಮಾ ಎಫ್‌ಸಿ ಎನ್ನುವ ಟ್ವಿಟರ್ ಅಕೌಂಟ್‌ನಲ್ಲಿ ಪ್ರಕಟಗೊಂಡಿರುವ ಚಿತ್ರಗಳಲ್ಲಿ ಕೆಲವದರಲ್ಲಿ ಅನುಷ್ಕಾ ಮತ್ತು ಸಾಕ್ಷಿಯನ್ನು ಗುರುತಿಸಬಹುದು. ಆದರೆ ತೀರಾ ಪುಟಾಣಿಗಳಿರುವ ಚಿತ್ರಗಳಲ್ಲಿ ಯಾರು ಅನುಷ್ಕಾ, ಯಾರು ಸಾಕ್ಷಿ ಎನ್ನುವ ಅಂದಾಜೇ ಸಿಗೋದಿಲ್ಲ.
ಎಳವೆಯಿಂದಲೂ ಸಾಕ್ಷಿ ಸಿಂಗ್ ರಾವತ್ ಮತ್ತು ಅನುಷ್ಕಾ ಶರ್ಮಾ ಆತ್ಮೀಯ ಸ್ನೇಹಿತೆಯಾಗಿದ್ದರಂತೆ. ಇಬ್ಬರೂ ಅಸ್ಸಾಂನ ಸೇಂಟ್ ಮೇರಿ ಮಾರ್ಗರಿಟಾ ಶಾಲೆಯಲ್ಲಿ ಕಲಿತಿದ್ದಾರೆ. ಹೀಗೆಂದು ಅನುಷ್ಕಾ 2013ರಲ್ಲಿ ನೀಡಿದ ಸಂದರ್ಶನವೊಂದರಲ್ಲಿ ಹೇಳಿದ್ದರು. ಅಂದು ಸ್ವತಃ ಅನುಷ್ಕಾ ಅವರೇ ಹೇಳಿದ್ದರಿಂದ ಇಂದು ಹರಿದಾಡುತ್ತಿರುವ ಚಿತ್ರಗಳು ನಿಜವೆನ್ನಬಹುದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications