For Quick Alerts
ALLOW NOTIFICATIONS  
For Daily Alerts
 

ಅನುಷ್ಕಾ, ಕೊಹ್ಲಿಗೆ ಅರ್ಹಾನ್ ಸಿಂಗ್ ಅವರಿಂದ ಲೀಗಲ್ ನೋಟಿಸ್

Anushka Sharma, Virat Kohli served legal notice by man scolded in littering video

ನವದೆಹಲಿ, ಜೂ. 23: ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದನೆಂದು ಸಾರ್ವಜನಿಕವಾಗಿ ನಿಂದಿಸಿ ಅವಮಾನಿಸಿದ್ದ ನಟಿ ಅನುಷ್ಕಾ ಶರ್ಮಾ ಮತ್ತು ಕ್ರಿಕೆಟಿಗ ವಿರಾಟ್ ಕೊಹ್ಲಿಗೆ ಪಾರ್ಟ್ ಟೈಮ್ ನಟ ಅರ್ಹಾನ್ ಸಿಂಗ್ ಅವರು ಲೀಗಲ್ ನೋಟಿಸ್ ಕಳುಹಿಸಿದ್ದಾರೆ.

ಕೊಹ್ಲಿ-ಅನುಷ್ಕಾ ಜೋಡಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದಾಗ ಮತ್ತೊಂದು ಕಾರಿನಲ್ಲಿದ್ದ ವ್ಯಕ್ತಿಯೊಬ್ಬರು ರಸ್ತೆಯ ಮೇಲೆ ಕಸ ಎಸೆಯುತ್ತಿರುವುದನ್ನು ಕಂಡಿದ್ದರು. ಕಂಡು ಸುಮ್ಮನಿರದ ಅನುಷ್ಕಾ ಕಸ ಎಸೆದ ವ್ಯಕ್ತಿ ಅರ್ಹಾನ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅರ್ಹಾನ್ ಕ್ಷಮೆಯಾಚಿಸಿದ್ದರೂ ಬಿಡದೆ ವಿರುಷ್ಕಾ ಸಿಡುಕಾಡಿದ್ದರು. ಆ ಸಂದರ್ಭ ಅನುಷ್ಕಾ ಅವರು ಅರ್ಹಾನ್ ಅವರಿಗೆ ಸ್ವಚ್ಛತೆಯ ಪಾಠ ಮಾಡಿದ್ದನ್ನು ಕೊಹ್ಲಿ ವಿಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡಿದ್ದರು. ಈ ವಿಡಿಯೋ ವೈರಲ್ ಕೂಡ ಆಗಿತ್ತು.

ಈ ಘಟನೆ ಸಂದರ್ಭ ಕಾರಿನಲ್ಲಿದ್ದು ಅವಮಾನಕ್ಕೀಡಾಗಿದ್ದ ಅರ್ಹಾನ್ ಮತ್ತವರ ತಾಯಿ ಗೀತಾಂಜಲಿ, ಅವಮಾನಿಸುವ ರೀತಿಯಲ್ಲಿ ಸಾರ್ವಜನಿಕವಾಗಿ ಸ್ವಚ್ಛತೆಯ ಪಾಠ ಮಾಡಿದ ವಿರಾಟ್-ಅನುಷ್ಕಾ ಜೋಡಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಅರ್ಹಾನ್ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲೂ ಅಸಮಾಧಾನ ವ್ಯಕ್ತಪಡಿಸಿದ್ದರು. ಜೊತೆಗೆ ಈಗ ಕಾನೂನು ರೀತಿಯಲ್ಲಿ ಕೊಹ್ಲಿ-ಅನುಷ್ಕಾ ಜೋಡಿಗೆ ಎಚ್ಚರಿಕೆ ನೀಡಲು ಅರ್ಹಾನ್ ಮುಂದಾಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಅರ್ಹಾನ್, 'ಸಾಮಾಜಿಕ ಜಾಲತಾಣದ ಮೂಲಕ ಅವಮಾನಿಸಿದ್ದಕ್ಕಾಗಿ ನನ್ನ ಕಾನೂನು ಸಲಹೆಗಾರರು ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಅವರಿಗೆ ಇಂದು (ಶನಿವಾರ) ಲೀಗಲ್ ನೋಟಿಸ್ ಕಳುಹಿಸಿದ್ದಾರೆ. ಈಗ ಚೆಂಡು ಅವರ ಕೋರ್ಟ್ ನಲ್ಲಿದೆ. ಅವರ ಪ್ರತಿಕ್ರಿಯೆಗಾಗಿ ಕಾಯುತ್ತಿದ್ದೇನೆ' ಎಂದಿದ್ದಾರೆ.

ಒಟ್ಟಿನಲ್ಲಿ ಪರಿಸರ ಕಾಳಜಿ ತೋರಿಸೋಕೆ ಹೋಗಿ ಸುಮ್ಮನಾದರೂ ಪೇಚಿಗೆ ಸಿಕ್ಕಂತಾಗಿದೆ ಅನುಷ್ಕಾ-ವಿರಾಟ್ ಜೋಡಿಯ ಕತೆ. ಮುಂದೇನಾಗುವುದೋ ಕಾದು ನೋಡಬೇಕಿದೆ.

Story first published: Saturday, June 23, 2018, 23:00 [IST]
Other articles published on Jun 23, 2018
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+