ಟೀಮ್ ಇಂಡಿಯಾಕ್ಕೆ ಸಿಕ್ಕ ಜೆರ್ಸಿ ಪ್ರಾಯೋಜಕರು: ನೀಡಿದ ಹಣ ಎಷ್ಟು?
ಇತ್ತೀಚಿಗೆ ಕೇಂದ್ರ ಸರ್ಕಾರ ಆನ್‌ಲೈನ್ ಗೇಮಿಗ್ ಆಪ್ ನಿಷೇಧಿಸಿತ್ತು. ಇದರ ನೇರ ಪರಿಣಾಮ ಟೀಮ್ ಇಂಡಿಯಾ ಜೆರ್ಸಿ ಪ್ರಾಯೋಜಕರ ಮೇಲೆ ಬಿದ್ದಿದೆ. ಟೀಮ್ ಇಂಡಿಯಾ ಜೆರ್ಸಿ ಪ್ರಾಯೋಜಕತ್ವ ಹೊಂದಿದ್ದ ಡ್ರೀಮ್ ಇಲೆವೆನ್ ಒಪ್ಪಂದವನ್ನು ಅರ್ಧದಲ್ಲಿ ಬಿಟ್ಟು ಹೊರ ನಡೆದಿದೆ. ಇದರ ಪರಿಣಾಮ ಏಷ್ಯಾ ಕಪ್ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಟೀಮ್ ಇಂಡಿಯಾ ಯಾವುದೇ ಪ್ರಾಯೋಜಕರು ಇಲ್ಲದೆ ಕಣಕ್ಕೆ ಇಳಿಯಬೇಕಾಯಿತು.
ಟೀಮ್ ಇಂಡಿಯಾ ಜೆರ್ಸಿ ಪ್ರಾಯೋಜಕತ್ವಕ್ಕೆ ಬಿಸಿಸಿಐ ಬಿಡ್ ಕರೆದಿತ್ತು. ಈ ಬಿಡ್ ವೇಳೆ ಹಲವು ಕಂಪನಿಗಳು ಆಸಕ್ತಿಯನ್ನು ಹೊಂದಿದ್ದವು. ಆದರೆ ಈಗ ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ ಟೀಮ್ ಇಂಡಿಯಾಕ್ಕೆ ಹೊಸ ಜೆರ್ಸಿ ಪ್ರಾಯೋಜಕರು ಸಿಕ್ಕಿದ್ದಾರೆ. 'ಅಪೊಲೊ ಟೈರ್ಸ್' ಟೀಮ್ ಇಂಡಿಯಾದ ಹೊಸ ಜೆರ್ಸಿ ಪ್ರಾಯೋಜಕರಾಗಬಹುದು ಎಂದು ತಿಳಿದು ಬಂದಿದೆ.

ವರದಿಯ ಪ್ರಕಾರ ಅಪೊಲೊ ಟೈರ್ಸ್ ಪ್ರತಿ ಪಂದ್ಯಕ್ಕೆ 4.5 ಕೋಟಿ ರೂ. ಹಣವನ್ನು ಬಿಸಿಸಿಐಗೆ ಪಾವತಿಸಬಹುದು ಎಂದು ಹೇಳಲಾಗುತ್ತಿದೆ. ಒಂದು ವೇಳೆ ಈಗ ಬರುತ್ತಿರುವ ಮಾಹಿತಿ ನಿಜವಾದಲ್ಲಿ, ಕಳೆದ ಬಾರಿಯ ಪ್ರಾಯೋಜಕರಿಗಿಂತಲೂ ಈಗಿನ ಪ್ರಾಯೋಜಕರು ಪ್ರತಿ ಪಂದ್ಯಕ್ಕೆ 50 ಲಕ್ಷ ರೂ. ಹೆಚ್ಚು ನೀಡುತ್ತಾರೆ ಎಂದು ತಿಳಿದು ಬಂದಿದೆ. ಈ ಹಿಂದಿನ ಜೆರ್ಸಿ ಸ್ಪಾನ್ಸರ್ ಪ್ರತಿ ಪಂದ್ಯಕ್ಕೆ 4 ಕೋಟಿ ರೂ. ನೀಡುತ್ತಿತ್ತು.
ಬಿಸಿಸಿಐ ಕರೆದಿದ್ದ ಬಿಡ್‌ಗೆ ಕ್ಯಾನ್ವಾ ಹಾಗೂ ಜೆಕೆ ಟೈರ್ಸ್ ಸಹ ಮುಂದಾಗಿದ್ದವು. ಇನ್ನು ಬಿರ್ಲಾ ಆಪ್ಟಸ್ ಪೇಂಟ್ಸ್ ಸಹ ಹೂಡಿಕೆ ಮಾಡಲು ಆಸಕ್ತಿ ತೋರಿತ್ತು. ಟೀಮ್ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವ ಪಡೆಯಲು ಸೆಪ್ಟಂಬರ್ 16 ರಂದು ಬಿಡ್ ಮಾಡಲಾಯಿತು. ಬಿಸಿಸಿಐ ಸೆಪ್ಟಂಬರ್ 2 ರಂದು ಜೆರ್ಸಿ ಪ್ರಾಯೋಜಕತ್ವಕ್ಕೆ ಬಿಡ್ ಕರೆಯಲಾಗಿತ್ತು. ಇದೇ ವೇಳೆ ತಂಬಾಕು ಕಂಪನಿ ಹಾಗೂ ಗೇಮಿಂಗ್ ಹಾಗೂ ಬೆಟ್ಟಿಂಗ್, ಕ್ರಿಪ್ಟೋ ಕಂಪನಿಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿತ್ತು.
ಯಾವಾಗ ಕಣಕ್ಕೆ?
ಒಂದು ವೇಳೆ ಟೀಮ್ ಇಂಡಿಯಾದ ಜೆರ್ಸಿ ಪ್ರಾಯೋಜಕತ್ವ ಈಗ ಅಪೊಲೊ ಟೈರ್ಸ್ ಜೊತೆಗೆ ಫೈನಲ್ ಆದಲ್ಲಿ, ಈ ಹೊಸ ಜೆರ್ಸಿಯನ್ನು ತವರಿನಲ್ಲಿ ನಡೆಯುವ ಟೆಸ್ಟ್ ಪಂದ್ಯದ ವೇಳೆ ಧರಿಸಬಹುದಾಗಿದೆ. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡು ಪಂದ್ಯಗಳ ಟೆಸ್ಟ್ ಸರಣಿ ಅಕ್ಟೋಬರ್ 2 ರಿಂದ ಪ್ರಾರಂಭವಾಗಲಿದೆ. ಹೊಸ ಜೆರ್ಸಿಯನ್ನು ತೊಟ್ಟ ಟೀಮ್ ಇಂಡಿಯಾ ಅಕ್ಟೋಬರ್ 2ಕ್ಕೆ ಅಹಮದಾಬಾದ್‌ನಲ್ಲಿ ಕಣಕ್ಕೆ ಇಳಿಯಬಹುದು ಎಂದು ತಿಳಿದು ಬಂದಿದೆ. ಈ ಕಂಪನಿ ಈಗಾಗಲೇ ದಿಗ್ಗಜ ಫುಟ್ಬಾಲ್ ಕ್ಲಬ್ ಮ್ಯಾಂಚೆಸ್ಟರ್ ಯುನೈಟೆಡ್, ಚೆನ್ನೈ ಎಫ್‌ಸಿ ಜೊತೆಗೆ ಸಂಬಧವನ್ನು ಹೊಂದಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications