Team India coach: ಟೀಮ್ ಇಂಡಿಯಾ ಕೋಚ್ ಆಗಲು 'ನಾನು ರೆಡಿ' ಎನ್ನುತ್ತಿರುವ ಅಭಿಮಾನಿಗಳು; ನೀವು ಅರ್ಜಿ ಹಾಕಿದ್ರಾ?
ಮೇ 15 ಬುಧವಾರ, ಮುಂಬವರುವ ಜೂನ್ ತಿಂಗಳಲ್ಲಿ ನಡೆಯಲಿರುವ ಬಹುನಿರೀಕ್ಷಿತ ಐಸಿಸಿ ಪುರುಷರ ಟಿ20 ವಿಶ್ವಕಪ್ ಟೂರ್ನಿ ಮುಗಿಯುತ್ತಿದ್ದಂತೆ ರಾಹುಲ್ ದ್ರಾವಿಡ್ ಅವರ ಭಾರತ ತಂಡದ ಮುಖ್ಯ ಕೋಚ್ ಅವಧಿ ಅಂತ್ಯವಾಗಲಿದೆ.
ಈ ಹಿನ್ನೆಲೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಟೀಮ್ ಇಂಡಿಯಾದ ಮುಖ್ಯ ಕೋಚ್ ಹುದ್ದೆಗೆ ಅರ್ಜಿಗಳನ್ನು ಅಹ್ವಾನಿಸಿದೆ. ಸದ್ಯ ಟೀಮ್ ಇಂಡಿಯಾ ಮುಖ್ಯ ಕೋಚ್ ಸ್ಥಾನಕ್ಕೆ ಮೂವರು ದಿಗ್ಗಜ ಹೆಸರು ಕೇಳಿಬರುತ್ತಿದೆ.

ಹೊಸದಾಗಿ ನೇಮಕಗೊಂಡ ಮುಖ್ಯ ಕೋಚ್ ಜುಲೈ 1, 2024ರಿಂದ ಭಾರತ ತಂಡದ ತರಬೇತುದಾರರಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಡಿಸೆಂಬರ್ 31, 2027ಕ್ಕೆ ಕೊನೆಗೊಳ್ಳುವ ಮೂರುವರೆ ವರ್ಷಗಳ ಅವಧಿಗೆ ಪ್ರಮುಖ ಹುದ್ದೆಯನ್ನು ಮುಂದುವರಿಸುತ್ತಾರೆ. ಅಂದರೆ ಮುಂಬರುವ ಏಕದಿನ ವಿಶ್ವಕಪ್ ಟೂರ್ನಿವರೆಗೂ ಕೋಚ್ ಆಗಲಿದ್ದಾರೆ.
ಇದರ ಮಧ್ಯೆ ಅಭಿಮಾನಿಗಳು ಟೀಮ್ ಇಂಡಿಯಾ ಕೋಚ್ ಆಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಕೆಲವು ಅಭಿಮಾನಿಗಳು ಒಂದು ಹೆಜ್ಜೆ ಮುಂದೆ ಹೋಗಿ ಬಿಸಿಸಿಐ ಅಹ್ವಾನಿಸಿರುವ ವೆಬ್‌ಸೈಟ್‌ನಲ್ಲಿ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸುತ್ತಿದ್ದಾರೆ. ಬಳಿಕ ಸಲ್ಲಿರುವ ಅರ್ಜಿಯ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದು, ವೈರಲ್ ಆಗಿವೆ.
ಅಭಿಮಾನಿಯೊಬ್ಬ ನಾನು ಈಗಾಗಲೇ ಟೀಮ್ ಇಂಡಿಯಾ ಕೋಚ್ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದೇನೆ. ಖಂಡಿತವಾಗಿಯೂ ಮುಂಬರುವ 2027ರ ಐಸಿಸಿ ಪುರುಷರ ಏಕದಿನ ವಿಶ್ವಕಪ್ ಅನ್ನು ಭಾರತ ತಂಡ ನನ್ನ ಪರಿಣಿತ ತರಬೇತಿ ಮತ್ತು ಮಾರ್ಗದರ್ಶನದಲ್ಲಿ ಗೆಲ್ಲಲಿದೆ ಎಂದು ಬರೆದುಕೊಂಡಿದ್ದಾರೆ.
ಮತ್ತೊಬ್ಬ ಈಗಾಗಲೇ ನನ್ನ ಅರ್ಜಿಯನ್ನು ಸಲ್ಲಿಸಿದ್ದೇನೆ. ಟೀಮ್ ಇಂಡಿಯಾಗೆ ಕೋಚ್ ಆಗುವುದಕ್ಕೆ ಕಾಯಲು ಸಾಧ್ಯವಿಲ್ಲ ಎಂದು ತಮ್ಮ ಬಯಕೆ ಹೇಳಿಕೊಂಡಿದ್ದಾರೆ.
ಕಳೆದ ವಾರ ಈ ಬಗ್ಗೆ ಮಾಧ್ಯಮಗಳೊಂದಿಗೆ ಸಂವಾದ ನಡೆಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಕೆಲವೊಂದು ವಿಚಾರಗಳನ್ನು ಬಹಿರಂಗಪಡಿಸಿದ್ದರು. ದ್ರಾವಿಡ್ ಅವರ ಸ್ಥಾನಕ್ಕೆ ಸಾಗರೋತ್ತರ ಅಭ್ಯರ್ಥಿಗಳನ್ನು ಬಿಸಿಸಿಐ ನೋಡುತ್ತಿದೆ.
ಆದರೆ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಶಿಫಾರಸುಗಳನ್ನು ಅವಲಂಬಿಸಿ ಮಾತ್ರ ಇದನ್ನು ಪರಿಗಣಿಸಲಾಗುವುದು. ಸಿಎಸಿ ವಿದೇಶಿ ಕೋಚ್ ಅನ್ನು ಆಯ್ಕೆ ಮಾಡಿದರೆ, ನಾನು ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ಆಯ್ಕೆಗಾರರ ಹುದ್ದೆಗೆ ಕೆಲವು ಸಂದರ್ಶನಗಳು ಈಗಾಗಲೇ ನಡೆದಿವೆ. ನಾವು ಅದನ್ನು ಶೀಘ್ರದಲ್ಲೇ ಪ್ರಕಟಿಸುತ್ತೇವೆ ಎಂದು ಹೇಳಿದ್ದರು.
ಟೀಮ್ ಇಂಡಿಯಾ ಮುಖ್ಯ ಕೋಚ್ ಆಯ್ಕೆಗೆ ಅರ್ಹತೆಯ ಮಾನದಂಡಗಳೇನು?
1) ಅರ್ಜಿ ಸಲ್ಲಿಸಲು ಬಯಸುವವರು ಕನಿಷ್ಠ 30 ಟೆಸ್ಟ್ ಪಂದ್ಯಗಳು ಅಥವಾ 50 ಏಕದಿನ ಪಂದ್ಯಗಳಲ್ಲಿ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸಿರಬೇಕು.
2) ಎರಡು ವರ್ಷಗಳಿಗಿಂತ ಕಡಿಮೆಯಿಲ್ಲದ ಅವಧಿಯವರೆಗೆ ಟೆಸ್ಟ್ ಆಡುವ ರಾಷ್ಟ್ರದ (ಐಸಿಸಿ ಪೂರ್ಣ-ಸದಸ್ಯ) ಹಿಂದಿನ ಮುಖ್ಯ ಕೋಚ್ ಆಗಿರಬೇಕು.
3) ಐಸಿಸಿಯ ಅಸೋಸಿಯೇಟ್ ನೇಷನ್ಸ್, ಐಪಿಎಲ್ ತಂಡ, ಸಮಾನವಾದ ಅಂತಾರಾಷ್ಟ್ರೀಯ ಲೀಗ್, ಪ್ರಥಮ ದರ್ಜೆ ತಂಡ, ರಾಷ್ಟ್ರೀಯ ಎ ತಂಡ, ಮೂರು ವರ್ಷಗಳಿಗಿಂತ ಕಡಿಮೆಯಿಲ್ಲದ ಅವಧಿಗೆ ಮುಖ್ಯ ಕೋಚ್ ಆಗಿರಬೇಕು.
4) ವಯಸ್ಸು 60 ವರ್ಷ ಮೀರಿರಬಾರದು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications