ಒಂದೇ ಓವರ್‌ನಲ್ಲಿ ಸಿಕ್ಸ್ ಸಿಕ್ಸರ್ ಚಚ್ಚಿದ ಅರಿಥರನ್ ವಸೀಕರನ್

ಕ್ರೆಫೆಲ್ಡ್: ಜರ್ಮನಿಯ ಕ್ರೆಫೆಲ್ಡ್ ನಲ್ಲಿ ನಡೆದ ಯುರೋಪಿಯನ್ ಕ್ರಿಕೆಟ್ ಸೀರೀಸ್ ಇಸಿಎಸ್ ಟಿ10 ಕ್ರೆಫೆಲ್ಡ್ ಪಂದ್ಯವೊಂದರಲ್ಲಿ ಆಟಗಾರರೊಬ್ಬರು ಒಂದೇ ಓವರ್‌ನಲ್ಲಿ ಸಿಕ್ಸ್ ಸಿಕ್ಸ್ ಬಾರಿಸಿ ಗಮನ ಸೆಳೆದಿದ್ದಾರೆ. ಒಂದೇ ಓವರ್‌ನಲ್ಲಿ ಸಿಕ್ಸ್ ಸಿಕ್ಸರ್ ಚಚ್ಚೋದು ಸುಲಭದ ಮಾತಲ್ಲ. ಆದರೆ ಅರಿಥರನ್ ವಸೀಕರನ್ ಎಂಬವರು ಈ ಸಾಧನೆ ಮಾಡಿದ್ದಾರೆ.
ಮೇ 21ರ ಶುಕ್ರವಾರ ಕ್ರೆಫೆಲ್ಡ್ ನ ಬೇಯರ್ ಉರ್ಡಿಂಗನ್ ಕ್ರಿಕೆಟ್ ಮೈದಾನದಲ್ಲಿ ಇಸಿಎಸ್ ಟಿ10 ಕ್ರೆಫೆಲ್ಡ್ 17ನೇ ಪಂದ್ಯದಲ್ಲಿ ಬೇಯರ್ ಉರ್ಡಿಂಗನ್ ಬೂಸ್ಟರ್ಸ್ ಮತ್ತು ಕೋಲ್ನ್ ಚಾಲೆಂಜರ್ಸ್ ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಬೂಸ್ಟರ್ಸ್ ಆಟಗಾರ ಅರಿಥರನ್ ವಸೀಕರನ್ ಒಂದು ಓವರ್‌ನಲ್ಲಿ ಸಿಕ್ಸ್ ಸಿಕ್ಸರ್ ಚಚ್ಚಿದ್ದಾರೆ.
ವಸೀಕರನ್ ಸಿಕ್ಸ್ ಸಿಕ್ಸರ್ ವಿಡಿಯೋ ಲಿಂಕ್ ಇಲ್ಲಿದೆ
10 ಓವರ್‌ಗಳ ಈ ಪಂದ್ಯ ಐದನೇ ಓವರ್‌ನಲ್ಲಿ ಆಯುಷ್ ಶರ್ಮಾ ಅವರ ಎಸೆತಗಳನ್ನು ಅರಿಥರನ್ ವಸೀಕರನ್ ಮೈದಾನದ ಎಲ್ಲಾ ಮೂಲೆಗಳಿಗೂ ಅಟ್ಟಿದ್ದಾರೆ. 34ರ ಹರೆಯದ ವಸೀಕರನ್ ಆಟಕ್ಕೆ ಕ್ರಿಕೆಟ್ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವಸೀಕರನ್ ಆಟದ ನೆರವಿನಿಂದ ಬೇಯರ್ ಉರ್ಡಿಂಗನ್ ಬೂಸ್ಟರ್ಸ್ 52 ರನ್‌ನಿಂದ ಗೆದ್ದಿದೆ. ಪಂದ್ಯದಲ್ಲಿ ವಸೀಕರನ್ 25 ಎಸೆತಗಳಲ್ಲಿ 61 ರನ್ ಕೊಡುಗೆ ನೀಡಿದ್ದರು. ಮೊದಲು ಬ್ಯಾಟಿಂಗ್ ಮಾಡಿದ್ದ ಬೂಸ್ಟರ್ಸ್ 10 ಓವರ್‌ಗೆ 115 ರನ್ ಗಳಿಸಿದ್ದರೆ, ಕೋಲ್ನ್ ಚಾಲೆಂಜರ್ಸ್ 10 ಓವರ್‌ಗೆ 63 ರನ್ ಬಾರಿಸಿ ಶರಣಾಯಿತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications