ಸಯ್ಯದ್ ಮುಷ್ತಾಕ್ ಅಲಿ: ಮುಂಬೈಗೆ ಅರ್ಜುನ್ ತೆಂಡೂಲ್ಕರ್ ಸೇರ್ಪಡೆ

ಮುಂಬೈ: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20 ಟೂರ್ನಿಗಾಗಿ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಮುಂಬೈ ತಂಡದಲ್ಲಿ ಹೆಸರಿಸಲ್ಪಟ್ಟಿದ್ದಾರೆ. ಎಡಗೈ ವೇಗಿ ಆಗಿರುವ ಅರ್ಜುನ್ ಅವರನ್ನು ಮುಂಬೈ ಕ್ರಿಕೆಟ್ ಅಸೋಸಿಯೇಶನ್ ಶನಿವಾರ ತಂಡದಲ್ಲಿ ಹೆಸರಿಸಿದೆ.
ಕೊರೊನಾ ವೈರಸ್ ಭೀತಿ ಶುರುವಾದ ಬಳಿಕ ನಡೆಯುತ್ತಿರುವ ಚೊಚ್ಚಲ ದೇಸಿ ಟೂರ್ನಿಯಾಗಿ ಸಯ್ಯದ್ ಮುಷ್ತಾಕ್ ಅಲಿ ಟಿ20 ಗುರುತಿಸಿಕೊಳ್ಳಲಿದೆ. ಜನವರಿ 10ರಿಂದ ಆರಂಭಗೊಳ್ಳುವ ಮುಷ್ತಾಕ್ ಅಲಿ ಟ್ರೋಫಿ ಟಿ20, ಜನವರಿ 31ರಂದು ಕೊನೆಗೊಳ್ಳಲಿದೆ.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ20ಯಲ್ಲಿ ಮುಂಬೈ ತಂಡ ಗ್ರೂಪ್ 'ಇ'ಯಲ್ಲಿದೆ. ಈ ಗ್ರೂಪ್‌ನಲ್ಲಿ ದೆಹಲಿ, ಹರ್ಯಾಣ, ಕೇರಳ, ಆಂಧ್ರ ಮತ್ತು ಪುದುಚೇರಿ ತಂಡಗಳಿವೆ. ಜನವರಿ 11, 13, 15, 17 & 19ರಂದು ಮುಂಬೈ ತಂಡ ಪಂದ್ಯಗಳನ್ನಾಡಲಿದೆ.
'ಮೂರು ದಿನಗಳ ಹಿಂದೆ ಎಲ್ಲಾ ತಂಡಗಳು 22 ಆಟಗಾರರನ್ನು ಆರಿಸಲು ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ಅನುಮತಿ ನೀಡಿದೆ. ಹೀಗಾಗಿ ಅರ್ಜುನ್ ತೆಂಡೂಲ್ಕರ್ ಮತ್ತು ಕೃತಿಕ್ ಹಾನಗವಾಡಿ ಅವರನ್ನು ಮುಂಬೈ 21 ಮತ್ತು 22ನೇ ಆಟಗಾರರಾಗಿ ಆರಿಸಿದೆ,' ಎಂದು ಮುಂಬೈ ಕ್ರಿಕೆಟ್ ಅಸೋಸಿಯೇಶನ್‌ನ ಮೂಲವೊಂದು ತಿಳಿಸಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications