Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಅಂಡರ್ 19 ಚಾಲೆಂಜರ್ಸ್ ಟ್ರೋಫಿಗೆ ತೆಂಡೂಲ್ಕರ್ ಜ್ಯೂ. ಇಲ್ಲ

Arjun Tendulkar left out of U19 squads for Challengers Trophy

ಬೆಂಗಳೂರು, ನವೆಂಬರ್ 04: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ, ಎಡಗೈ ವೇಗಿ ಅರ್ಜುನ್ ತೆಂಡೂಲ್ಕರ್ ಅವರನ್ನು ಚಾಲೆಂಜರ್ಸ್ ಟ್ರೋಫಿ ಅಂಡರ್ 19 ತಂಡಕ್ಕೆ ಆಯ್ಕೆ ಮಾಡಿಲ್ಲ.

ಪ್ರಥಮ ದರ್ಜೆ ಕ್ರಿಕೆಟ್ ಗೆ ಶ್ರೀಲಂಕಾ ವಿರುದ್ಧ ಆಡುವ ಮೂಲಕ ಪದಾರ್ಪಣೆ ಮಾಡಿದರೂ ನಿಗದಿತ ಓವರ್ ಗಳ ಪಂದ್ಯಗಳನ್ನಾಡಿರಲಿಲ್ಲ. ವಿನೂ ಮಂಕಡ್ ಟ್ರೋಫಿಯಲ್ಲಿ ಮುಂಬೈ ಪರ ಆಡಿದ್ದ 19 ವರ್ಷ ವಯಸ್ಸಿನ ಅರ್ಜುನ್ ಅವರು ಗುಜರಾತ್ ವಿರುದ್ಧದ ಪಂದ್ಯದಲ್ಲಿ ಐದು ವಿಕೆಟ್ ಗಳಿಸಿದ್ದರು. ಕೆಸಿ ಮಹೀಂದ್ರ ಶೀಲ್ಡ್ ಅಂಡರ್ 19 ಟೂರ್ನಮೆಂಟ್ ನಲ್ಲಿ ವಿಜಯ್ ಮರ್ಚಂಟ್ ಎಲೆವನ್ ನಲ್ಲಿ ಆಡಿದ್ದರು ಆದರೆ, 2020 ಅಂಡರ್ 19 ವಿಶ್ವಕಪ್ ಗೆ ಆಯ್ಕೆ ಮಾಡುವ ಅವಕಾಶ ಕಡಿಮೆಯಾಗುತ್ತಿದೆ.

ಚಾಲೆಂಜರ್ಸ್ ಟ್ರೋಫಿಗಾಗಿ ಇಂಡಿಯಾ ಬ್ಲೂ, ಇಂಡಿಯಾ ಬ್ಲೂ, ಇಂಡಿಯಾ ಗ್ರೀನ್, ಇಂಡಿಯಾ ಯೆಲ್ಲೂ ತಂಡವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಪ್ರಕಟಿಸಿದೆ. ಲಕ್ನೋದಲ್ಲಿ ನವೆಂಬರ್ 10 ರಿಂದ 16ರ ತನಕ ನಡೆಯಲಿದೆ.

2018-19 ಆವೃತ್ತಿಯ ರಣಜಿ ಟ್ರೋಫಿಯಲ್ಲಿ ರೈಲ್ವೇಸ್ ವಿರುದ್ಧ ಆಡಲಿರುವ ಮುಂಬೈ ತಂಡದಲ್ಲೂ ಅರ್ಜುನ್ ಗೆ ಸ್ಥಾನ ಸಿಕ್ಕಿಲ್ಲ.

Story first published: Sunday, November 4, 2018, 18:11 [IST]
Other articles published on Nov 4, 2018
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+