Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

ಎಲ್‌ಎಸ್‌ಜಿಯಲ್ಲಿ ಸಿಗದ ಅವಕಾಶ- ಬೇರೆ ಲೀಗ್‌ನತ್ತ ಮುಖ ಮಾಡಿದ ಅರ್ಜುನ್ ತೆಂಡೂಲ್ಕರ್

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕುತೂಹಲ ಘಟ್ಟದತ್ತ ಮುಖಮಾಡಿದೆ. ಈ ವೇಳೆ ಹಲವು ಆಟಗಾರರು ತಮಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡು ಮಿಂಚಿದ್ದಾರೆ. ಆದರೆ ಈ ತಂಡದ ಆಟಗಾರ ಐಪಿಎಲ್‌ ಅರ್ಧ ಪಂದ್ಯಗಳು ಮುಗಿದರೂ ಸಹ ಮೈದಾನಕ್ಕೆ ಇಳಿದಿಲ್ಲ. ಈ ನಿರಾಸೆ ಆ ಪ್ಲೇಯರ್ ಮುಖದಲ್ಲಿ ಕಾಣಿಸುತ್ತಿದೆ. ಇವರು ಈಗ ಬೇರೆ ಲೀಗ್‌ನಲ್ಲಿ ಈ ಪ್ಲೇಯರ್ ಆಡಲು ತಯಾರಿ ನಡೆಸಿದ್ದಾರೆ. ಆ ಪ್ಲೇಯರ್ ಬೇರೆ ಯಾರು ಅಲ್ಲ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್ ಪುತ್ರ ಅರ್ಜುನ್‌.

ಅರ್ಜುನ್ ತೆಂಡೂಲ್ಕರ್ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದಲ್ಲಿರುವ ಆಟಗಾರ. ಆದರೆ ಈ ಲೀಗ್‌ನಲ್ಲಿ ಈ ವರೆಗೆ ಎಲ್‌ಎಸ್‌ಜಿ ಮ್ಯಾನೇಜ್ಮೆಂಟ್‌ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶವನ್ನು ನೀಡಿಲ್ಲ. ಹೀಗಾಗಿ ಇವರು ಈಗ ಬೇರೆ ಲೀಗ್‌ನತ್ತ ಮುಖ ಮಾಡಿದ್ದಾರೆ ಎಂದು ತಿಳಿದು ಬಂದಿದೆ.

Arjun Tendulkar


ಟೀಮ್ ಇಂಡಿಯಾದ ಮಾಜಿ ಆಟಗಾರ ಸಚಿನ್ ತೆಂಡೂಲ್ಕರ್ ಬ್ಯಾಟಿಂಗ್‌ನಿಂದ ಹೆಸರುವಾಸಿಯಾಗಿದ್ದರು. ಆದರೆ ಇವರ ಮಗ ಅರ್ಜುನ್‌ ಬೌಲಿಂಗ್‌ನಲ್ಲಿ ಹೆಸರು ಮಾಡುವ ಕನಸಿನೊಂದಿಗೆ ಕಣಕ್ಕೆ ಇಳಿದರು. ಕಳೆದ ಕೆಲವು ವರ್ಷಗಳಿಂದ ಅವರು ಐಪಿಎಲ್ ತಂಡಗಳಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಇವರಿಗೆ ಆಡುವ ಅವಕಾಶ ಮಾತ್ರ ಸಿಕ್ಕಿದ್ದು ವಿರಳ. ಆರಂಭದಲ್ಲಿ ಅರ್ಜುನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡದ ಪರ ಕಣಕ್ಕೆ ಇಳಿದಿದ್ದರು. ಆದರೆ ಸ್ಥಿರ ಅವಕಾಶಗಳು ಸಿಗದ ಕಾರಣ ಬೇಸರವಾಗಿದ್ದರು. ಅಲ್ಲದೆ ಇವರನ್ನು ಐಪಿಎಲ್‌ ಹರಾಜಿಗೂ ಮುನ್ನ ಟ್ರೇಡ್ ಮಾಡಿಕೊಳ್ಳಲಾಯಿತು. ಈ ವೇಳೆ ಮುಂಬೈನಿಂದ ಅರ್ಜುನ್‌ ಎಲ್‌ಎಸ್‌ಜಿ ತಂಡವನ್ನು ಸೇರಿದರು. ಈ ಬಾರಿ ಅವರು ತಂಡದೊಂದಿಗೆ ಪ್ರಯಾಣ ಮಾಡಿದ್ದೇ ದೊಡ್ಡ ಸಾಧನೆ ಆಯಿತು.

ಅರ್ಜುನ್ ಈಗ ಮುಂಬೈ ಟಿ 20 ಲೀಗ್‌ನಲ್ಲಿ ಆಡಲು ತಯಾರಿ ನಡೆಸುತ್ತಿದ್ದಾರೆ. ಈ ಲೀಗ್‌ಗಾಗಿ ಆಟಗಾರರ ಹರಾಜು ಮೇ 2 (ಶನಿವಾರ) ನಡೆಯಲಿದೆ. ಈ ಲೀಗ್‌ಗೆ ಅರ್ಜುನ್ ತೆಂಡೂಲ್ಕರ್ ಹೆಸರನ್ನು ನಮೂದಿಸಿಕೊಂಡಿದ್ದಾರೆ. ಈ ಲೀಗ್‌ನಲ್ಲಿ ಅರ್ಜುನ್‌ ಅದೃಷ್ಟ ಪರೀಕ್ಷೆ ನಡೆಸಲಿದ್ದಾರೆ. ಈ ಲೀಗ್ ಅನ್ನು ಮುಂಬೈ ಕ್ರಿಕೆಟ್ ಅಸೋಸಿಯೇಷನ್ ​​ಆಯೋಜಿಸಲಿದೆ.

Arjun Tendulkar

ಎಲ್‌ಎಸ್‌ಜಿ ಸಾಧನೆ

19ನೇ ಆವೃತ್ತಿ ಐಪಿಎಲ್‌ನಲ್ಲಿ ಎಲ್‌ಎಸ್‌ಜಿ ತಂಡ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಲಕ್ನೋ ತಂಡ ಆಡಿದ 8 ಪಂದ್ಯಗಳಲ್ಲಿ 2 ಜಯ, 6 ಸೋಲು ಕಂಡಿದ್ದು, 4 ಅಂಕಗಳನ್ನು ಕಲೆ ಹಾಕಿದ್ದು ಅಂಕಪಟ್ಟಿಯಲ್ಲಿ 10ನೇ ಸ್ಥಾನದಲ್ಲಿದೆ.

ಅರ್ಜುನ್ ತೆಂಡೂಲ್ಕರ್ ಸಾಧನೆ

26 ವರ್ಷದ ಅರ್ಜುನ್ ತೆಂಡೂಲ್ಕರ್ ದೇಶೀಯ ಟೂರ್ನಿಗಳಲ್ಲಿ ಕಮಾಲ್ ಪ್ರದರ್ಶನ ನೀಡಿದ್ದಾರೆ. ಇವರು ಆಡಿದ 24 ಪ್ರಥಮ ದರ್ಜೆ ಪಂದ್ಯಗಳಲ್ಲಿ 52 ವಿಕೆಟ್‌ ಪಡೆದಿದ್ದಾರೆ. ಇನ್ನು 24 ಲಿಸ್ಟ್‌ ಎ ಪಂದ್ಯದಲ್ಲಿ 26 ವಿಕೆಟ್‌ ಪಡೆದಿದ್ದಾರೆ. ಇವರು ಐಪಿಎಲ್‌ನಲ್ಲಿ 5 ಪಂದ್ಯಗಳನ್ನು ಆಡಿದ್ದು, 3 ವಿಕೆಟ್‌ ಉರುಳಿಸಿದ್ದಾರೆ.

Story first published: Friday, May 1, 2026, 14:59 [IST]
Other articles published on May 1, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+