"ಮೂರೇ ದಿನದಲ್ಲಿ ನಮ್ಮ ತಂಡ ಭಾರತವನ್ನು ಟೆಸ್ಟ್‌ನಲ್ಲಿ ಸೋಲಿಸುತ್ತದೆ"
ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ಟೆಸ್ಟ್ ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲವಾಗಿದೆ. ಕಳೆದ ವರ್ಷ ಟೀಮ್ ಇಂಡಿಯಾದ ಸಾಧನೆ ಅಷ್ಟು ಉತ್ತಮವಾಗಿಲ್ಲ. 2024ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ಭಾರತ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದ್ದು, ಬಿಟ್ಟರೆ ಉಳಿದಂತೆ ಸಾಲು ಸಾಲು ಸೋಲುಗಳನ್ನು ಕಂಡಿದೆ. ಭಾರತ ನ್ಯೂಜಿಲೆಂಡ್ ವಿರುದ್ಧ ತವರಿನಲ್ಲಿ ನೀಡಿದ ಹೀನಾಯ ಪ್ರದರ್ಶನ ಇತಿಹಾಸದ ಪುಟ ಸೇರಿದೆ. ರೋಹಿತ್ ಪಡೆ ಟೆಸ್ಟ್ ಸರಣಿಯಲ್ಲಿ ಕ್ಲೀನ್ ಸ್ವೀಪ್ ಸೋಲು ಕಂಡಿದೆ.
ಈ ಸರಣಿಯ ಬಳಿಕ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸವನ್ನು ಆರಂಭಿಸಿದೆ. ಈ ವೇಳೆ ತಂಡದ ಸ್ಥಾನ ಕಳಪೆಯಾಗಿದೆ. ಆರಂಭದಲ್ಲಿ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದ ಭಾರತ, ಬಳಿಕ ಸಾಲು ಸಾಲು ಸೋಲುಗಳನ್ನು ಕಂಡಿದೆ. ಈ ಪ್ರದರ್ಶನದ ಬಳಿಕ ಟೀಮ್ ಇಂಡಿಯಾ ಆಟಗಾರರು ಸಾಕಷ್ಟು ಟೀಕೆಗೆ ಗುರಿಯಾದರು. ಈಗ ಶ್ರೀಲಂಕಾ ತಂಡದ ಮಾಜಿ ಆಟಗಾರ ಅರ್ಜುನ್ ರಣತುಂಗ ಟೀಮ್ ಇಂಡಿಯಾ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ಸದ್ಯ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದೆ.

ರಣತುಂಗಾ ಹೇಳಿದ್ದೇನು?
ಶ್ರೀಲಂಕಾದಲ್ಲಿ ಆಗ ಚಮಿಂಡಾ ವಾಸ್ ಹಾಗೂ ಮುರಳೀಧರನ್ ಅವರಂತಹ ನುರಿತ ಬೌಲರ್‌ಗಳು ಇದ್ದರು. ಆಗ ನಮ್ಮ ತಂಡ ಭಾರತವನ್ನು ತವರಿನಲ್ಲಿ ಮೂರು ದಿನಗಳಲ್ಲಿ ಸೋಲಿಸಿತ್ತು. ಈಗ ನಮ್ಮ ತಂಡದಲ್ಲಿ ಪ್ರತಿಭಾನ್ವಿತ ಬೌಲರ್‌ಗಳ ದಂಡೇ ಇದೆ. 1996 ತಂಡದೊಂದಿಗೆ ಈಗಿನ ತಂಡವನ್ನು ಹೋಲಿಸಿದರೆ, ಈಗಿನ ತಂಡ ಬಲಿಷ್ಠವಾಗಿದೆ. ಆಗ ಅರವಿಂದ್ ಡಿ ಸಿಲ್ವಾ ಮಾತ್ರ ಈಗಿನ ಆಟಗಾರರಿಗಿಂತ ಉತ್ತಮ ದಾಖಲೆಯನ್ನು ಹೊಂದಿದ್ದರು ಎಂದು ಶ್ರೀಲಂಕಾದ ಮಾಜಿ ನಾಯಕ ಅರ್ಜುನ ರಣತುಂಗ ಟೆಲಿಗ್ರಾಫ್‌ಗೆ ತಿಳಿಸಿದ್ದಾರೆ.
ವಿಶ್ವಕಪ್ ವಿಜೇತ ತಂಡದ ನಾಯಕ ರಣತುಂಗಾ, ಟೀಮ್ ಇಂಡಿಯಾ ಚೇಸಿಂಗ್ ಸ್ಟಾರ್ ಖ್ಯಾತಿಯ ವಿರಾಟ್ ಕೊಹ್ಲಿ ಅವರಿಗೂ ಟಿಪ್ಸ್ ನೀಡಿದ್ದಾರೆ. ವಿರಾಟ್ ಭಾರತದಲ್ಲೇ ಇರುವ ಶ್ರೇಷ್ಠ ಆಟಗಾರರೊಂದಿಗೆ ಮಾತನಾಡಬೇಕು. ಸುನಿಲ್ ಗವಾಸ್ಕರ್, ದಿಲೀಪ್ ವೆಂಗಸ್ಕರ್, ರಾಹುಲ್ ದ್ರಾವಿಡ್ ಅವ ಅನುಭವದ ಲಾಭ ಪಡೆಯಬೇಕು. ಈ ಸ್ಟಾರ್ ಆಟಗಾರರು ಖಂಡಿತವಾಗಿಯೂ ವಿರಾಟ್ ಕೊಹ್ಲಿಗೆ ಸಹಾಯ ಮಾಡುತ್ತಾರೆ ಎಂದು ತಿಳಿಸಿದ್ದಾರೆ.

ಭಾರತ ಹಾಗೂ ಶ್ರೀಲಂಕಾ ನಡುವೆ ಮೊದಲಿನಿಂದಲೂ ಉತ್ತಮ ಸಂಬಂಧ ಇದೆ. ಇನ್ನು ಶ್ರೀಲಂಕಾ 1982ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ಟೆಸ್ಟ್ ಸರಣಿಯನ್ನು ಆಡಲು ಬಂದಿತ್ತು. ಅಂದಿನಿಂದ ಇಂದಿನ ವರೆಗೆ ಲಂಕಾ, ಬಾರತದಲ್ಲಿ ಒಂದೇ ಒಂದು ಟೆಸ್ಟ್ ಪಂದ್ಯ ಗೆದಿಲ್ಲ. ಇಷ್ಟೆಲ್ಲಾ ಇದ್ದರೂ, ಅರ್ಜುನ ರಣತುಂಗ ಟೀಮ್ ಇಂಡಿಯಾ ಬಗ್ಗೆ ಇಂತಹ ವಿಚಿತ್ರ ಹೇಳಿಕೆ ನೀಡಿದ್ದಾರೆ.
ಶ್ರೀಲಂಕಾದ ಯಶಸ್ವಿ ನಾಯಕರಲ್ಲಿ ರಣತುಂಗಾ ಅವರಿಗೆ ಮೊದಲ ಸ್ಥಾನ. ಇವರ ನಾಯಕತ್ವದಲ್ಲಿ ಲಂಕಾ ತಂಡ 1996ರಲ್ಲಿ ಏಕದಿನ ವಿಶ್ವಕಪ್ ಚಾಂಪಿಯನ್ ಪಟ್ಟವನ್ನು ಅಲಂಕರಿಸಿತ್ತು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications