T20 Wolrd Cup 2024: ಅತಿಹೆಚ್ಚು ವಿಕೆಟ್ ಪಡೆದು 2ನೇ ಸ್ಥಾನಕ್ಕೇರಿದ ಅರ್ಷದೀಪ್ ಸಿಂಗ್; ಬುಮ್ರಾ ಬಗ್ಗೆ ಹೇಳಿದ್ದೇನು?
ಜೂನ್ 25 ಮಂಗಳವಾರ, 2024ರ ಟಿ20 ವಿಶ್ವಕಪ್‌ನ ಸೂಪರ್-8 ಪಂದ್ಯದಲ್ಲಿ ಭಾರತವು ಆಸ್ಟ್ರೇಲಿಯಾವನ್ನು 24 ರನ್‌ಗಳಿಂದ ಸೋಲಿಸಿತ್ತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ನೀಡಿದ್ದರು.
ಮೊದಲ ಓವರ್‌ನಲ್ಲೇ ಅಪಾಯಕಾರಿ ಬ್ಯಾಟರ್ ಡೇವಿಡ್ ವಾರ್ನರ್ ಅವರನ್ನು ಔಟ್ ಮಾಡುವ ಮೂಲಕ ಅರ್ಷದೀಪ್ ಭಾರತದ ಬೌಲಿಂಗ್ ದಾಳಿಗೆ ದಿಕ್ಕು ತೋರಿಸಿದ್ದರು. ಡೆತ್ ಓವರ್‌ಗಳಲ್ಲಿ ಟಿಮ್ ಡೇವಿಡ್ ಮತ್ತು ಮ್ಯಾಥ್ಯೂ ವೇಡ್ ಅವರ ಪ್ರಮುಖ ವಿಕೆಟ್‌ಗಳನ್ನು ಪಡೆದುಕೊಂಡ ಅರ್ಷದೀಪ್ ಸಿಂಗ್ ಟೀಮ್ ಇಂಡಿಯಾ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಆಸ್ಟ್ರೇಲಿಯಾ ವಿರುದ್ಧ ನಾಲ್ಕು ಓವರ್‌ಗಳಲ್ಲಿ 37 ರನ್ ನೀಡಿ 3 ವಿಕೆಟ್ ಪಡೆದ ಅರ್ಷದೀಪ್ ಅದ್ಭುತ ಬೌಲಿಂಗ್ ಮಾಡಿದರು. ಈ ಮೂಲಕ 2024ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತಿಹೆಚ್ಚು ವಿಕೆಟ್ ಪಡೆದವರ ಪಟ್ಟಯಲ್ಲಿ ಅರ್ಷದೀಪ್ ಸಿಂಗ್ 2ನೇ ಸ್ಥಾನಕ್ಕೇರಿದ್ದಾರೆ.
ಈವರೆಗೆ 6 ಪಂದ್ಯಗಳನ್ನು ಆಡಿರುವ ಅರ್ಷದೀಪ್ ಸಿಂಗ್ ಒಟ್ಟು 15 ವಿಕೆಟ್‌ಗಳನ್ನುಉರುಳಿಸಿದ್ದಾರೆ. ಅಫ್ಘಾನಿಸ್ತಾನದ ಫಜಲ್ಹಾಕ್ ಫಾರೂಕಿ 6 ಪಂದ್ಯಗಳಲ್ಲಿ 16 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಇದರ ಬೆನ್ನಲ್ಲೇ ಅರ್ಷದೀಪ್ ಸಿಂಗ್ ತಮ್ಮ ಯಶಸ್ಸನ್ನು ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಅವರಿಗೆ ಸಲ್ಲಿಸಿದ್ದಾರೆ.
ಎಲ್ಲಾ ಕ್ರೆಡಿಟ್ ಜಸ್ಸಿ ಭಾಯ್‌ಗೆ ಸಲ್ಲುತ್ತದೆ
ಟಿ20 ವಿಶ್ವಕಪ್‌ನಲ್ಲಿ ಅತಿಹೆಚ್ಚು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿರುವ ಅರ್ಷದೀಪ್ ಸಿಂಗ್, ಜಸ್ಪ್ರೀತ್ ಬುಮ್ರಾ ಅವರಿಗೆ ಕ್ರೆಡಿಟ್ ಸಲ್ಲಿಸಿದ್ದಾರೆ. ಈ ಬಗ್ಗೆ ಮಾತನಾಡಿರುವ ಅರ್ಷದೀಪ್, 'ಇದಕ್ಕಾಗಿ ಹೆಚ್ಚಿನ ಕ್ರೆಡಿಟ್ ಜಸ್ಸಿ ಭಾಯ್ (ಜಸ್ಪ್ರೀತ್ ಬುಮ್ರಾ) ಅವರಿಗೆ ಸಲ್ಲುತ್ತದೆ. ಏಕೆಂದರೆ ಅವರು ಬ್ಯಾಟ್ಸ್‌ಮನ್‌ಗಳ ಮೇಲೆ ಹೆಚ್ಚಿನ ಒತ್ತಡವನ್ನು ಬೀರುತ್ತಾರೆ.
ಬುಮ್ರಾ ಭಾಯ್ ಒಂದು ಓವರ್‌ಗೆ ಮೂರು ಅಥವಾ ನಾಲ್ಕು ರನ್‌ಗಳನ್ನು ನೀಡುತ್ತಾರೆ. ಆದ್ದರಿಂದ ಬ್ಯಾಟರ್‌ಗಳು ನನ್ನ ಬೌಲಿಂಗ್‌ನಲ್ಲಿ ಆಕ್ರಮಣಕಾರಿ ಆಗಿ ಆಡುತ್ತಾರೆ. ಹೀಗಾಗಿ ನಾನು
ನನ್ನ ಅತ್ಯುತ್ತಮ ಬೌಲಿಂಗ್ ಮಾಡಲು ಪ್ರಯತ್ನಿಸಬೇಕು. ಜೊತೆಗೆ ವಿಕೆಟ್‌ಗಳನ್ನು ಪಡೆಯಲು ಸಾಕಷ್ಟು ಅವಕಾಶಗಳಿರುತ್ತವೆ.
ಒತ್ತಡದಲ್ಲಿರುವ ಬ್ಯಾಟರ್‌ಗಳು ಬಮ್ರಾ ಭಾಯ್ ಬೌಲಿಂಗ್ ರನ್ ಗಳಿಸಲು ಸಾಧ್ಯವಾಗದೆ ಇದ್ದಾಗ ನನ್ನ ವಿರುದ್ಧ ಹೆಚ್ಚು ಅಪಾಯಗಳನ್ನು ತೆಗೆದುಕೊಳ್ಳುತ್ತಾರೆ. ಇದು ವಿಕೆಟ್ ಪಡೆಯಲು ಕಾರಣವಾಗುತ್ತದೆ. ಆದರಿಂದ ನನ್ನ ವಿಕೆಟ್‌ಗಳ ಶ್ರೇಯಸ್ಸು ಜಸ್ಸಿ ಭಾಯ್‌ಗೆ ಸಲ್ಲುತ್ತದೆ ಎಂದು ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications