ಇತ್ತೀಚಿನ ಐಸಿಸಿ ಟಿ20 ಬೌಲರ್‌ಗಳ ಶ್ರೇಯಾಂಕದಲ್ಲಿ ಭಾರತೀಯ ಆಟಗಾರರಾದ ಅರ್ಶ್‌ದೀಪ್ ಸಿಂಗ್ ಮತ್ತು ಅಕ್ಷರ್ ಪಟೇಲ್ ಮುನ್ನಡೆ ಸಾಧಿಸಿದ್ದಾರೆ.
ಎಡಗೈ ಆಫ್-ಸ್ಪಿನ್ನರ್ ಅಕ್ಷರ್ ಪಟೇಲ್ 1 ಸ್ಥಾನ ಏರಿಕೆ ಕಂಡು 3ನೇ ಸ್ಥಾನ ತಲುಪಿದ್ದರೆ, 722 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿರುವ ಇಂಗ್ಲೆಂಡ್‌ನ ಆದಿಲ್ ರಶೀದ್‌ಗಿಂತ 62 ಪಾಯಿಂಟ್‌ಗಳಿಂದ ಹಿಂದಿದ್ದಾರೆ.

ಶ್ರೀಲಂಕಾ ಸ್ಪಿನ್ನರ್ ವನಿಂದು ಹಸರಂಗ 687 ಅಂಕಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ನ ಎಡಗೈ ಸ್ಪಿನ್ನರ್ ಅಕೇಲ್ ಹೊಸೈನ್ 5 ಸ್ಥಾನಗಳನ್ನು ಕಳೆದುಕೊಂಡು 8ನೇ ಸ್ಥಾನಕ್ಕೆ ಜಾರಿದ ನಂತರ, ರ‍್ಯಾಂಕಿಂಗ್‌ನಲ್ಲಿ ಅಕ್ಷರ್ ಪಟೇಲ್ ಏರಿದರು.
ವೆಸ್ಟ್ ಇಂಡೀಸ್ ಮತ್ತು ಯುಎಸ್ಎನಲ್ಲಿ ಮುಂಬರುವ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡದ ಅಭಿಯಾನದ ಮೊದಲು ರ‍್ಯಾಂಕಿಂಗ್‌ನಲ್ಲಿನ ಏರಿಕೆಯು ಆಟಗಾರರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ.
ದಕ್ಷಿಣ ಆಫ್ರಿಕಾ ಬೌಲರ್ ಅನ್ರಿಚ್ ನಾರ್ಟ್ಜೆ 6 ಸ್ಥಾನ ಇಳಿಕೆ ಕಂಡ ನಂತರ, ಎಡಗೈ ವೇಗಿ ಅರ್ಶ್‌ದೀಪ್ ಸಿಂಗ್ ಶ್ರೇಯಾಂಕದಲ್ಲಿ 3 ಸ್ಥಾನ ಮೇಲೇರಿ 16ನೇ ಸ್ಥಾನ ತಲುಪಿದರು.

ಪಾಕಿಸ್ತಾನದ ವೇಗಿ ಶಾಹೀನ್ ಶಾ ಆಫ್ರಿದಿ ಗಮನಾರ್ಹ ಲಾಭ ಗಳಿಸಿ 11ನೇ ಸ್ಥಾನಕ್ಕೆ ಏರಿದರು. ಇತ್ತೀಚೆಗಷ್ಟೇ ನಿವೃತ್ತಿಯಿಂದ ಹೊರಬಂದಿರುವ ಇಮಾದ್ ವಾಸಿಂ 14 ಸ್ಥಾನಗಳ ಏರಿಕೆ ಕಂಡು 38ನೇ ಸ್ಥಾನಕ್ಕೆ ತಲುಪಿದರು.
ವೆಸ್ಟ್ ಇಂಡೀಸ್ ಸ್ಪಿನ್ನರ್ ಗುಡಾಕೇಶ್ ಮೋಟಿ ರ‍್ಯಾಂಕಿಂಗ್‌ನಲ್ಲಿ ಭಾರಿ ಜಿಗಿತವನ್ನು ಸಾಧಿಸಿ 84 ಸ್ಥಾನಗಳ ಜಿಗಿತದೊಂದಿಗೆ ಶ್ರೇಯಾಂಕದಲ್ಲಿ 27ನೇ ಸ್ಥಾನ ತಲುಪಿದ್ದಾರೆ.
ಭಾರತದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ 861 ರೇಟಿಂಗ್ ಪಾಯಿಂಟ್‌ಗಳೊಂದಿಗೆ ಟಿ20 ಕ್ರಿಕೆಟ್‌ನಲ್ಲಿ ನಂ.1 ರ‍್ಯಾಂಕಿಂಗ್ ಬ್ಯಾಟರ್ ಆಗಿ ಮುಂದುವರೆದರು. ಎರಡನೇ ಸ್ಥಾನದಲ್ಲಿರುವ ಫಿಲ್ ಸಾಲ್ಟ್‌ಗಿಂತ 73 ರೇಟಿಂಗ್ ಪಾಯಿಂಟ್ ಹೆಚ್ಚಿಗೆ ಪಡೆದಿದ್ದಾರೆ.

ಸೂರ್ಯಕುಮಾರ್ ಯಾದವ್ ಹೊರತುಪಡಿಸಿ, ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಅವರು ಟಿ20 ಪಂದ್ಯಗಳಲ್ಲಿ ಬ್ಯಾಟರ್‌ಗಳ ರ‍್ಯಾಂಕಿಂಗ್‌ನಲ್ಲಿ ಅಗ್ರ 10ರ ಒಳಗಿರುವ ಏಕೈಕ ಭಾರತೀಯರಾಗಿದ್ದಾರೆ.
ಅನುಭವಿ ಬ್ಯಾಟರ್‌ಗಳಾದ ವಿರಾಟ್ ಕೊಹ್ಲಿ ಮತ್ತು ಭಾರತದ ನಾಯಕ ರೋಹಿತ್ ಶರ್ಮಾ ಕ್ರಮವಾಗಿ 47 ಮತ್ತು 52ನೇ ಶ್ರೇಯಾಂಕದಲ್ಲಿದ್ದಾರೆ.
ಹಾರ್ದಿಕ್ ಪಾಂಡ್ಯ ಭಾರತದ ನಂ.1 ಟಿ20 ಆಲ್‌ರೌಂಡರ್ ಆಗಿ ಉಳಿದುಕೊಂಡಿದ್ದಾರೆ ಮತ್ತು ಟಿ20 ಕ್ರಿಕೆಟ್‌ನಲ್ಲಿ 8ನೇ ಶ್ರೇಯಾಂಕ ಹೊಂದಿದ್ದಾರೆ. ಉತ್ತಮ ಫಾರ್ಮ್‌ನಲ್ಲಿಲ್ಲದ ಕಾರಣ, ಟಿ20 ವಿಶ್ವಕಪ್‌ಗೆ ರಾಷ್ಟ್ರೀಯ ತಂಡದ ಉಪನಾಯಕರಾಗಿರುವ ಕಾರಣ ಹಾರ್ದಿಕ್ ಪಾಂಡ್ಯ ಕೈಯಲ್ಲಿ ದೊಡ್ಡ ಜವಾಬ್ದಾರಿ ಇದೆ.
ಭಾರತ ತಂಡವು ತನ್ನ ಟಿ20 ವಿಶ್ವಕಪ್ ಅಭಿಯಾನವನ್ನು ಜೂನ್ 5ರಂದು ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಪಾಲ್ ಸ್ಟಿರ್ಲಿಂಗ್ಸ್ ನಾಯಕತ್ವದ ಐರ್ಲೆಂಡ್ ವಿರುದ್ಧ ತನ್ನ ಮೊದಲ ಪಂದ್ಯದೊಂದಿಗೆ ಪ್ರಾರಂಭಿಸಲು ಸಜ್ಜಾಗಿದೆ. ನಂತರ ಅದೇ ಸ್ಥಳದಲ್ಲಿ ಜೂನ್ 9ರಂದು ಪಾಕಿಸ್ತಾನ ವಿರುದ್ಧ ಹೈ-ವೋಲ್ಟೇಜ್ ಪಂದ್ಯದಲ್ಲಿ ಸೆಣಸಾಡಲಿದೆ.