Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

Arshdeep Singh: ಪಂಜಾಬ್‌ ಪರ ಇತಿಹಾಸ ನಿರ್ಮಿಸಿದ ವೇಗದ ಬೌಲರ್‌

ರಾಯಲ್ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಪಂಜಾಬ್‌ ಕಿಂಗ್ಸ್ ನಡುವಣ 18ನೇ ಆವೃತ್ತಿಯ ಪಂದ್ಯಕ್ಕೆ ಬೆಂಗಳೂರಿನ ಎಂ ಚಿನ್ನಸ್ವಾಮಿ ಅಂಗಳ ವೇದಿಕೆ ಆಗಿತ್ತು. ಪಂದ್ಯದ ಆರಂಭಕ್ಕೆ ಮಳೆ ಕಾಟ ನೀಡಿದರೂ ಪಂದ್ಯದ ಮೇಲೆ ಪರಿಣಾಮ ಏನು ಬೀರಲೇ ಇಲ್ಲ. ಆದರೆ ಓವರ್‌ಗಳಿಗೆ ಕತ್ತರಿ ಬಿದ್ದಿತು. ಈ ಪಂದ್ಯದಲ್ಲಿ ಗೆಲುವು ದಾಖಲಿಸಿ ತವರಿನಲ್ಲಿ ಗೆಲುವಿನ ಅಭಿಯಾನವನ್ನು ಆರಂಭಿಸುವ ಆರ್‌ಸಿಬಿ ಕನಸು ಶುಕ್ರವಾರವೂ ನುಚ್ಚು ನೂರಾಯಿತು. ಈ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಬೌಲರ್ ಇತಿಹಾಸ ನಿರ್ಮಿಸಿದ್ದಾರೆ.

ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ಟಾಸ್‌ ಗೆದ್ದು ಮೊದಲು ಫೀಲ್ಡಿಂಗ್ ಮಾಡಲು ಮುಂದಾಯಿತು. ಈ ವೇಳೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ಬೌಲರ್‌ ಅರ್ಷದೀಪ್‌ ಸಿಂಗ್‌ ಹೊಸ ಇತಿಹಾವನ್ನು ನಿರ್ಮಿಸಿದರು. ತಾವು ಎಸೆದ ಮೊದಲ ಓವರ್‌ ಹಾಗೂ ತನ್ನ ಕೋಟಾದ ಎರಡನೇ ಓವರ್‌ನಲ್ಲಿ ಎರಡು ವಿಕೆಟ್‌ಗಳನ್ನು ಪಡೆಯುವ ಮೂಲಕ ಅರ್ಷದೀಪ್‌ ದಾಖಲೆ ಬರೆದರು.ಈ ಮೂಲಕ ಅರ್ಷದೀಪ್‌ ಪಂಜಾಬ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಸಾಧನೆ ಮಾಡಿದ್ದಾರೆ.

Arshdeep Singh Becomes Punjab Kings Highest Wicket-Taker in Win Over RCB

ಮಳೆಯಿಂದಾಗಿ ತಡವಾಗಿ ಆರಂಭವಾದ ಪಂದ್ಯ 9.45ಕ್ಕೆ ಆರಂಭವಾಗಿ 14 ಓವರ್‌ಗಳಿಗೆ ಇಳಿಯಿತು. ಟಾಸ್‌ ಸೋತರೂ ಬ್ಯಾಟಿಂಗ್ ಮಾಡಿದ ಆರ್‌ಸಿಬಿ ತಂಡ ಅಬ್ಬರಿಸುವ ಸೂಚನೆ ನೀಡಿತು. ಆದರೆ ಅದು ಫ್ಲಾಪ್ ಆಯಿತು. ಮೊದಲ ಎಸೆತದಲ್ಲಿ ಬೌಂಡರಿ ಬಾರಿಸಿದ ಫಿಲ್ ಸಾಲ್ಟ್‌, ಇದೇ ಓವರ್‌ನಲ್ಲಿ ಅರ್ಷದೀಪ್‌ ಸಿಂಗ್‌ ತೋಡಿದ ಖೆಡ್ಡಾಗೆ ಬಲಿಯಾದರು. ಇದಾದ ಬಳಿಕ ತಮ್ಮ ಕೋಟಾದ 2ನೇ ಓವರ್‌ನ ನಾಲ್ಕನೇ ಎಸೆತದಲ್ಲಿ ವಿರಾಟ್‌ಗೆ ಪೆವಿಲಿಯನ್ ಹಾದಿ ತೋರಿಸಿದರು.

ಪಿಯುಷ್ ದಾಖಲೆ ಉಡೀಸ್

ಈ ಮೂಲಕ ಅರ್ಷದೀಪ್‌ ಪಂಹಾಬ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ ಬೌಲರ್ ಎಂಬ ಹೆಗ್ಗಳಿಕೆಯನ್ನು ತಮ್ಮದಾಗಿಸಿಕೊಂಡರು. ಇವರಿಗೆ ಈ ಸಾಧನೆ ಮಾಡಲು ಈ ಪಂದ್ಯದಲ್ಲಿ ಒಂದು ವಿಕೆಟ್‌ ಅವಶ್ಯಕತೆ ಇತ್ತು. ಇವರು ಸ್ಪಿನ್ ಬೌಲರ್‌ ಪಿಯೂಷ್‌ ಚಾವ್ಲಾ ಅವರ ದಾಖಲೆಯನ್ನು ಅಳಿಸಿದರು. ಪಿಯುಷ್ ಚಾವ್ಲಾ ಪಂಜಾಬ್ ಕಿಂಗ್ಸ್ ಪರ 87 ಪಂದ್ಯಗಳನ್ನು ಆಡಿದರು ಮತ್ತು 84 ವಿಕೆಟ್‌ಗಳನ್ನು ಪಡೆದಿದ್ದರು. ಈಗ ಅರ್ಷದೀಪ್‌ ಈ ಸಾಲಿನಲ್ಲಿ ಮುಂಚೂಣಿಯಲ್ಲಿ ಕಾಣಿಸಿಕೊಳ್ಳುತ್ತಾರೆ. ಅರ್ಷದೀಪ್ ಆಡಿದ 72 ಪಂದ್ಯಗಳಲ್ಲಿ 86 ವಿಕೆಟ್ ಪಡೆದ ಸಾಧನೆ ಮಾಡಿದರು.

Arshdeep Singh Becomes Punjab Kings Highest Wicket-Taker in Win Over RCB

ಪಂಜಾಬ್‌ ಪರ ಅತಿ ಹೆಚ್ಚು ವಿಕೆಟ್‌ ಪಡೆದ 5 ಬೌಲರ್ಸ್‌

ಅರ್ಷದೀಪ್‌ ಸಿಂಗ್, 72 ಪಂದ್ಯ, 86 ವಿಕೆಟ್‌
ಪಿಯುಷ್ ಚಾವ್ಲಾ, 87 ಪಂದ್ಯ, 84 ವಿಕೆಟ್‌
ಸಂದೀಪ್ ಶರ್ಮಾ, 61 ಪಂದ್ಯ, 73 ವಿಕೆಟ್‌
ಅಕ್ಷರ್ ಪಟೇಲ್‌, 73 ಪಂದ್ಯ, 69 ವಿಕೆಟ್‌
ಮೊಹಮ್ಮದ್‌ ಶಮಿ, 42 ಪಂದ್ಯ, 58 ವಿಕೆಟ್‌

ಪಂದ್ಯದ ಫಲಿತಾಂಶ

ಪ್ರಸಕ್ತ ಐಪಿಎಲ್‌ ಋತುವಿನ 34ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್‌ಸಿಬಿ ನಿಗದಿತ 14 ಓವರ್‌ಗಳಲ್ಲಿ 9 ವಿಕೆಟ್‌ ನಷ್ಟಕ್ಕೆ 95 ರನ್‌ ಸೇರಿಸಿತು. ಈ ವೇಳೆ ಟೀಮ್ ಡೇವಿಡ್ ಅರ್ಧಶತಕ ಬಾರಿಸಿ ತಂಡಕ್ಕೆ ಆಧಾರವಾದರು. ಗುರಿಯನ್ನು ಪಂಜಾಬ್ 12.1 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 98 ರನ್‌ ಬಾರಿಸಿ ಗೆಲುವು ದಾಖಲಿಸಿತು.

Story first published: Saturday, April 19, 2025, 11:23 [IST]
Other articles published on Apr 19, 2025
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+