Arshdeep Singh: ಸ್ಟಾರ್ ಬೌಲರ್‌ಗಳನ್ನು ಹಿಂದಿಕ್ಕಿ ದೊಡ್ಡ ಸಾಧನೆ ಮಾಡಿದ ಅರ್ಷದೀಪ್ ಸಿಂಗ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಐದು ಪಂದ್ಯಗಳ ಟಿ20 ಸರಣಿಯ ಎರಡನೇ ಪಂದ್ಯಕ್ಕೆ ಚೆನ್ನೈ ಸಾಕ್ಷಿಯಾಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ಭಾರತ ಮೊದಲು ಬೌಲಿಂಗ್ ಮಾಡುವ ನಿರ್ಧಾರವನ್ನು ಮಾಡಿತು. ಈ ನಿರ್ಧಾರವನ್ನು ಸಮರ್ಥಿಸಿಕೊಳ್ಳುವಲ್ಲಿ ಟೀಮ್ ಇಂಡಿಯಾದ ಬೌಲರ್‌ಗಳು ಸಫಲರಾದರು. ಇವರು, ಮೊದಲ ಓವರ್‌ನಲ್ಲೇ ಟೀಮ್ ಇಂಡಿಯಾದ ಅರ್ಷದೀಪ್ ಸಿಂಗ್ ಅಬ್ಬರಿಸಿದರು. ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ಬ್ಯಾಟರ್‌ಗಳನ್ನು ಕಾಡಿದ್ದ ಎಡಗೈ ವೇಗಿ, ಎರಡನೇ ಟಿ20 ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದರು.
ಅರ್ಷದೀಪ್ ಸಿಂಗ್ ಎರಡನೇ ಟಿ20 ಕ್ರಿಕೆಟ್‌ನ ಮೊದಲ ಓವರ್‌ನಲ್ಲಿಯೇ ಆರ್‌ಸಿಬಿ ತಂಡದ ಫಿಲ್ ಸಾಲ್ಟ್ ಅವರಿಗೆ ಖೆಡ್ಡಾ ತೋಡಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅರ್ಷದೀಪ್ ಸಿಂಗ್ ದಾಖಲೆ ಬರೆದರು. ಇವರು ಎಲೈಟ್ ಕ್ಲಬ್‌ನಲ್ಲಿ ಸ್ಥಾನ ಪಡೆದಿದ್ದು, ಸ್ಟಾರ್ ಬೌಲರ್‌ಗಳನ್ನು ಹಿಂದಿಕ್ಕಿದ್ದಾರೆ.

ದೊಡ್ಡ ಸಾಧನೆ
ಪಾಕಿಸ್ತಾನ ತಂಡದ ಸ್ಟಾರ್ ವೇಗದ ಬೌಲರ್ ಶಾಹೀನ್ ಆಫ್ರಿದಿ ಸೇರಿದಂತೆ ಹಲವು ಸ್ಟಾರ್ ಬೌಲರ್‌ಗಳ ಸಾಧನೆಯನ್ನು ಹಿಂದಿಕ್ಕಿದರು. ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ಫಿಲ್ ಸಾಲ್ಟ್ ವಿಕೆಟ್ ಪಡೆದರು. 2024 ರಿಂದ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಮೊದಲ 6 ಓವರ್‌ಗಳಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.
ಅರ್ಷದೀಪ್ ಪವರ್ ಪ್ಲೇನಲ್ಲಿ ಅಬ್ಬರದ ಬೌಲಿಂಗ್ ನಡೆಸುವ ಬೌಲರ್ ಎಂಬುದು ಸಾಬೀತಾದರು. ಇದರುವರೆಗೆ ಅರ್ಷದೀಪ್ 24 ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಕೆನಡಾದ ಜುನೈದ್ ಸಿದ್ದಿಕಿ ಹಾಗೂ ಪಾಕ್‌ನ ಶಾಹೀನ್ ಅಫ್ರೀದಿಯ ದಾಖಲೆಯನ್ನು ಹಿಂದಿಕ್ಕಿದರು. ಟೀಮ್ ಇಂಡಿಯಾ ಪರ ಎಡಗೈ ವೇಗದ ಬೌಲರ್ ಅರ್ಷದೀಪ್ ಸಿಂಗ್ ಅತಿ ಹೆಚ್ಚು ಟಿ20 ವಿಕೆಟ್‌ಗಳನ್ನು ಪಡೆದ ಬೌಲರ್ ಎಂಬ ಹಿರಿಮೆಯನ್ನು ಸಹ ತಮ್ಮದಾಗಿಸಿಕೊಂಡಿದ್ದಾರೆ. ಕೋಲ್ಕತ್ತಾದಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಅರ್ಷದೀಪ್, ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಅವರ ಸಾಧನೆಯನ್ನು ಮೀರಿ ನಿಂತಿದ್ದಾರೆ.
ಅರ್ಷದೀಪ್ ಸಿಂಗ್ ಶನಿವಾರ ಐಸಿಸಿ ಪ್ರಕಟಿಸಿದ ಪ್ರಶಸ್ತಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅರ್ಷದೀಪ್ 2024ರ ಐಸಿಸಿ ಟಿ20 ವರ್ಷದ ಬೌಲರ್ ಎಂಬ ಗೌರವ ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಈ ಪ್ರಶಸ್ತಿ ಪಡೆದ ಮೊದಲ ಬೌಲರ್ ಎಂಬ ಹಿರಿಮೆ ಸಹ ತಮ್ಮದಾಗಿಸಿಕೊಂಡಿದ್ದಾರೆ. ಈ ಮೊದಲು ಈ ಪ್ರಶಸ್ತಿಯನ್ನು ಭಾರತದ ಪರ ಈ ಮೊದಲು ಸೂರ್ಯಕುಮಾರ್ ಯಾದವ್ ಪಡೆದಿದ್ದಾರೆ.
2024ರ ಬಳಿಕ ಮೊದಲ 6 ಓವರ್‌ಗಳಲ್ಲಿ ಹೆಚ್ಚು ವಿಕೆಟ್ ಪಡೆದ ಬೌಲರ್ಸ್,
ಅರ್ಶ್‌ದೀಪ್ ಸಿಂಗ್ , ಭಾರತ- 19 ವಿಕೆಟ್
ಜುನೈದ್ ಸಿದ್ದಿಕಿ, ಕೆನಡಾ- 18 ವಿಕೆಟ್
ಬ್ಲೆಸ್ಸಿಂಗ್ ಮುಜರಬಾನಿ, ಜಿಂಬಾಬ್ವೆ- 18 ವಿಕೆಟ್
ನವೀನ್ ಉಲ್ ಹಕ್, ಅಫ್ಘಾನಿಸ್ತಾನ- 18 ವಿಕೆಟ್
ಶಾಹೀನ್ ಅಫ್ರಿದಿ, ಪಾಕಿಸ್ತಾನ- 17 ವಿಕೆಟ್
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications