Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block

18 ಕೋಟಿ ಬೌಲರ್‌ ಪಡೆದಿದ್ದು 14 ವಿಕೆಟ್‌; ಮೈದಾನದಲ್ಲಿ ಅಬ್ಬರಿಸಿದರೆ ಮಾತ್ರ ರೀಲ್ಸ್‌ಗೆ ಬೆಲೆ; ಕೊನೆಗೂ ಬುದ್ದಿ ಕಲಿತ ವೇಗಿ

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ರೋಚಕ ಅಂತಿಮ ಘಟ್ಟದತ್ತ ಮುಖಮಾಡಿದೆ. ಲೀಗ್‌ ಹಂತದಲ್ಲಿ ಅಬ್ಬರಿಸಿದ್ದ ಪಂಜಾಬ್‌ ಕಿಂಗ್ಸ್‌ 19ನೇ ಆವೃತ್ತಿಯ ಐಪಿಎಲ್‌ ಪ್ಲೇ ಆಫ್‌ಗೆ ಪ್ರವೇಶ ಪಡೆಯುವಲ್ಲಿ ವಿಫಲವಾಗಿದೆ. ಈ ಪಂದ್ಯ ಆರಂಭದಲ್ಲಿ ನೀಡಿದ್ದ ಪ್ರದರ್ಶನ ಪಂಜಾಬ್‌ ಚೊಚ್ಚಲ ಬಾರಿಗೆ ಪ್ರಶಸ್ತಿ ಗೆಲ್ಲಬಹುದು ಎಂಬ ಲೆಕ್ಕಾಚಾರವನ್ನು ಹಾಕಿಕೊಳ್ಳಲಾಗಿತ್ತು. ಆದರೆ ಈ ಆಸೆ ಎಲ್ಲವೂ ಹುಸಿಯಾಗಿದೆ.

ಪಂಜಾಬ್‌ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಯುವ ಹಾಗೂ ಅನುಭವಿ ಆಟಗಾರರು ತಂಡದ ಬಲವನ್ನು ಹೆಚ್ಚಿಸಿದ್ದರು. ಆದರೆ ಮಹತ್ವದ ಪಂದ್ಯದಲ್ಲಿ ಮನಮೋಹಕ ಪ್ರದರ್ಶನ ನೀಡುವಲ್ಲಿ ಎಡವಿದ್ದು, ಲೀಗ್‌ ಹಂತದಲ್ಲೇ ಟೂರ್ನಿಗೆ ಗುಡ್‌ ಬಾಯ್ ಹೇಳಿದೆ. ಈ ವೇಳೆ ಪಂಜಾಬ್‌ ತಂಡದ ಸೂಪರ್ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್‌ ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದು, ಟೀಕೆಗೆ ಗುರಿಯಾಗಿದ್ದಾರೆ.

Arshdeep Singh

ಇಂಡಿಯನ್ ಮತ್ತು ಪಂಜಾಬ್ ಕಿಂಗ್ಸ್ ವೇಗಿ ಅರ್ಶ್‌ದೀಪ್ ಸಿಂಗ್ ಪ್ರಸ್ತುತ ತಮ್ಮ ಪ್ರದರ್ಶನಕ್ಕಿಂತ ಹೆಚ್ಚಾಗಿ ಸಾಮಾಜಿಕ ಮಾಧ್ಯಮ ಚಟುವಟಿಕೆಗಳಿಂದಲೇ ಸುದ್ದಿಯಲ್ಲಿದ್ದಾರೆ. ಪಂಜಾಬ್ ಕಿಂಗ್ಸ್‌ನ ಐಪಿಎಲ್ 2026 ಅಭಿಯಾನ ಮುಗಿದ ನಂತರ, ಅರ್ಶ್‌ದೀಪ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ 200 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಡಿಲೀಟ್‌ ಮಾಡಿದ್ದಾರೆ. ಇವರ ಈ ನಡೆ ಚರ್ಚೆಗೆ ಗ್ರಾಸವಾಗಿದೆ. ಇದರಲ್ಲಿ ಲಕ್ಷಾಂತರ ವೀಕ್ಷಣೆಗೆ ಒಳಗಾಗಿದ್ದ ವಿರಾಟ್ ಕೊಹ್ಲಿ ಜೊತೆಗಿನ ತಮ್ಮ ವೈರಲ್ ರೀಲ್ ಅನ್ನು ಸಹ ಅವರು ಅಳಿಸಿದ್ದಾರೆ.

ರೋಹಿತ್‌ ಶರ್ಮಾ ಅವರ ದೊಡ್ಡ ದಾಖಲೆ ಮುರಿದ ವಿರಾಟ್‌ ಕೊಹ್ಲಿ

ರೋಹಿತ್‌ ಶರ್ಮಾ ಅವರ ದೊಡ್ಡ ದಾಖಲೆ ಮುರಿದ ವಿರಾಟ್‌ ಕೊಹ್ಲಿ

ಪೋಸ್ಟ್‌ ಡಿಲೀಟ್‌

ಅರ್ಶ್‌ದೀಪ್ ಸಿಂಗ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಿಂದ 200 ಕ್ಕೂ ಹೆಚ್ಚು ಪೋಸ್ಟ್‌ಗಳನ್ನು ಅಳಿಸಿದ್ದಾರೆ. ಅಳಿಸಲಾದ ಈ ಡೇಟಾದಲ್ಲಿ 2025 ರ ಚಾಂಪಿಯನ್ಸ್ ಟ್ರೋಫಿಯಲ್ಲಿ ಟೀಮ್ ಇಂಡಿಯಾದ ದಂತಕಥೆ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಅವರೊಂದಿಗೆ ಅವರ ಅತ್ಯಂತ ಜನಪ್ರಿಯ ಮತ್ತು ವೈರಲ್ ರೀಲ್ ವೀಡಿಯೊ ಸೇರಿದೆ. ಅವರ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಈ ಹಿಂದೆ ನೂರಾರು ಪೋಸ್ಟ್‌ಗಳು ಇದ್ದವು, ಆದರೆ ಈಗ ಕೆಲವೇ ಕೆಲವು ಪೋಸ್ಟ್‌ಗಳು ಮಾತ್ರ ಬಾಕಿ ಉಳಿದಿದೆ. ಬಿಸಿಸಿಐ ವ್ಲಾಗ್ ಮಾಡುವುದನ್ನು ನಿಲ್ಲಿಸುವಂತೆ ಕೇಳಿಕೊಂಡ ವರದಿಗಳ ಬೆನ್ನಲ್ಲೆ ಅರ್ಷದೀಪ್ ಸಿಂಗ್ ನಡೆ ಎಲ್ಲರನ್ನೂ ಚಕಿತಗೊಳಿಸಿದೆ.

IPL 19 Qualifier: ಆರ್‌ಸಿಬಿಯನ್ನು ಸತತ 2ನೇ ಬಾರಿ ಫೈನಲ್‌ ತಲುಪಿಸಿದ 5 ಹೀರೋಗಳು

IPL 19 Qualifier: ಆರ್‌ಸಿಬಿಯನ್ನು ಸತತ 2ನೇ ಬಾರಿ ಫೈನಲ್‌ ತಲುಪಿಸಿದ 5 ಹೀರೋಗಳು
Arshdeep Singh

ಅರ್ಷದೀಪ್ ಸಿಂಗ್ ಅವರಿಗೆ ಪಂಜಾಬ್‌ ಕಿಂಗ್ಸ್‌ 18 ಕೋಟಿ ರೂಪಾಯಿ ಭಾರೀ ಮೊತ್ತವನ್ನು ನೀಡಿ ಖರೀದಿಸಿತ್ತು. ಆದರೆ ಇವರು ಈ ಐಪಿಎಲ್‌ನಲ್ಲಿ 14 ವಿಕೆಟ್‌ ಪಡೆಯುವಲ್ಲಿ ಮಾತ್ರ ಸಫಲರಾಗಿದ್ದಾರೆ. ಸತತ ಎರಡು ಟಿ20 ವಿಶ್ವಕಪ್‌ ವಿಜೇತ ತಂಡದ ಸದಸ್ಯ ಅರ್ಷದೀಪ್‌ ಸಿಂಗ್ ಈ ಬಾರಿಯ ಐಪಿಎಲ್‌ನಲ್ಲಿ ಪವರ್‌ ಪ್ಲೇ ಹಾಗೂ ಡೆತ್‌ ಓವರ್‌ಗಳಲ್ಲಿ ಪ್ರಭಾವ ಬೀರುವಲ್ಲಿ ಎಡವಿದ್ದಾರೆ. ಹೀಗಾಗಿಯೇ ಇವರು ಮೂಲ ಮಂತ್ರ ಅಭ್ಯಾಸದತ್ತ ಮುಖ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿ ಬರುತ್ತಿದ್ದಾರೆ. ಎಡಗೈ ವೇಗಿ ಬೇಗ ಲಯ ಕಂಡುಕೊಳ್ಳಲಿ ಎಂಬುದೇ ಅಭಿಮಾನಿಗಳ ಆಶಯ.

1
4-2026

Story first published: Wednesday, May 27, 2026, 12:48 [IST]
Other articles published on May 27, 2026
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+