For Quick Alerts
ALLOW NOTIFICATIONS  
For Daily Alerts
 

T20ಯಲ್ಲಿ ಭುವಿಗಿಂತ ಅರ್ಷದೀಪ್ ಉತ್ತಮ ಬೌಲರ್: ಸಂಜಯ್ ಮಂಜ್ರೇಕರ್

Arshdeep Singh deserves a chance to play for India: Sanjay Manjrekar

ಇಂಡಿಯನ್ ಪ್ರೀಮಿಯರ್ ಲೀಗ್‌ನ 15 ನೇ ಆವೃತ್ತಿಯಲ್ಲಿ ಪಂಜಾಬ್ ತಂಡದ ಪರವಾಗಿ ಅದ್ಭುತ ಪ್ರದರ್ಶನದ ಮೂಲಕ ಅರ್ಷದೀಪ್ ಸಿಂಗ್ ಎಲ್ಲರ ಗಮನ ಸೆಳೆದಿದ್ದಾರೆ. ಎಡಗೈ ವೇಗದ ಬೌಲರ್ ಪವರ್‌ಪ್ಲೇ ಮತ್ತು ಸ್ಲಾಗ್ ಓವರ್‌ಗಳಲ್ಲಿ ಆಕರ್ಷಕವಾಗಿ ಬೌಲ್ ಮಾಡಿದ್ದಾರೆ.

ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ನಂತರ ಮಾತನಾಡಿದ ಭಾರತೀಯ ಕ್ರಿಕೆಟ್ ತಂಡದ ಮಾಜಿ ಬ್ಯಾಟರ್ ಸಂಜಯ್ ಮಂಜ್ರೇಕರ್, T20 ಕ್ರಿಕೆಟ್‌ನಲ್ಲಿ ಭುವನೇಶ್ವರ್ ಕುಮಾರ್‌ಗಿಂತ ಅರ್ಷದೀಪ್ ಸಿಂಗ್ ಉತ್ತಮ ಎಂದು ಅಭಿಪ್ರಾಯಪಟ್ಟಿದ್ದಾರೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನ 2022ರ ಆವೃತ್ತಿಗಾಗಿ ಪಂಜಾಬ್ ಕಿಂಗ್ಸ್ ಉಳಿಸಿಕೊಂಡ ಇಬ್ಬರು ಆಟಗಾರರಲ್ಲಿ ಅರ್ಷ್‌ದೀಪ್ ಒಬ್ಬರು. ಕಳೆದ ವರ್ಷದಲ್ಲಿ ಪರ್ಪಲ್ ಕ್ಯಾಪ್ ಪ್ರಶಸ್ತಿಯನ್ನು ಗೆಲ್ಲುವ ಸ್ಪರ್ಧಿಗಳಲ್ಲಿ ಪ್ರಮುಖರಾಗಿದ್ದರು. ಈ ವರ್ಷವೂ ಅವರು ಪಂಜಾಬ್ ತಂಡದ ಗೆಲುವಿನಲ್ಲಿ ಮಹತ್ತರವಾದ ಪಾತ್ರ ವಹಿಸಿದ್ದಾರೆ. ತಂಡದ ಆಡಳಿತ ಮಂಡಳಿಯು ಭುವನೇಶ್ವರ್ ಕುಮಾರ್‌ಗೆ ಹೇಗೆ ಅವಕಾಶಗಳನ್ನು ನೀಡುತ್ತಿದೆ ಎಂಬುದನ್ನು ಒತ್ತಿಹೇಳಿರುವ ಮಂಜ್ರೇಕರ್ ಪ್ರಸ್ತುತದಲ್ಲಿ ಭಾರತದಲ್ಲಿನ ಅಗ್ರ ಐದು ಟಿ20 ಬೌಲರ್‌ಗಳಲ್ಲಿ ಅರ್ಷದೀಪ್ ಕೂಡ ಇದ್ದಾರೆ ಎಂದು ಹೇಳಿದರು.

Arshdeep Singh deserves a chance to play for India: Sanjay Manjrekar

ಭುವನೇಶ್ವರ್ ಕುಮಾರ್‌ ಅವರು ಅದ್ಭುತ ಬೌಲರ್ ಆಗಿದ್ದಾರೆ. ಆದರೆ ಪ್ರಸ್ತುತ ಹೋಲಿಸಿದರೆ, ಅರ್ಷದೀಪ್ ಟಿ20 ತಂಡದಲ್ಲಿ ಭುವನೇಶ್ವರಕ್ಕಿಂತ ಉತ್ತಮ ಬೌಲರ್. ಅವರು ಖಂಡಿತವಾಗಿಯೂ ಭಾರತೀಯ ಬೌಲರ್‌ಗಳಲ್ಲಿ ಟಾಪ್ 5ನಲ್ಲಿದ್ದಾರೆ. ಮುಂಬರುವ ದಿನಗಳಲ್ಲಿ ಅರ್ಷದೀಪ್‌ ಅವರು ಭಾರತ ತಂಡಕ್ಕೆ ಪ್ರವೇಶಿಸಲು ಏನು ಮಾಡಬೇಕು ಎನ್ನುವುದನ್ನು ಯೋಚಿಸುತ್ತಿರಬೇಕು ಎಂದು ಹೇಳಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ 2022 ರ ಹಾದಿಯಲ್ಲಿ ಭಾರತೀಯ ಕ್ರಿಕೆಟ್ ತಂಡವು ಅನೇಕ ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಲು ನಿರ್ಧರಿಸಲಾಗಿದೆ. ಈ ವರ್ಷ ಅಂತಾರಾಷ್ಟ್ರೀಯ ಮಟ್ಟದಲ್ಲಿ ತನ್ನ ಪ್ರತಿಭೆಯನ್ನು ಪ್ರದರ್ಶಿಸಲು ಆಯ್ಕೆದಾರರು ಅರ್ಷದೀಪ್ ಸಿಂಗ್‌ಗೆ ಅವಕಾಶ ನೀಡುತ್ತದೆಯೇ ಎಂಬುದು ಕಾದುನೋಡಬೇಕಿದೆ ಎಂದು ಹೇಳಿದ್ದಾರೆ.

Story first published: Thursday, April 14, 2022, 19:52 [IST]
Other articles published on Apr 14, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+