For Quick Alerts
ALLOW NOTIFICATIONS  
For Daily Alerts
 

Arshdeep Singh: ಭುವಿ ದಾಖಲೆಯ ಸಮಕ್ಕೆ ನಿಂತ ಅರ್ಷದೀಪ್ ಸಿಂಗ್

ಟೀಮ್ ಇಂಡಿಯಾ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಮೊದಲ ಟಿ20 ಪಂದ್ಯ ನಡೆಯಿತು. ಈ ಪಂದ್ಯದಲ್ಲಿ ಭಾರತ ಅಮೋಘ ಪ್ರದರ್ಶನ ನೀಡಿ 101 ರನ್‌ಗಳಿಂದ ಪ್ರವಾಸಿ ತಂಡವನ್ನು ಮಣಿಸಿ ಅಬ್ಬರಿಸಿದೆ. ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಸ್ಥಿರ ಪ್ರದರ್ಶನ ನೀಡಿದ್ದು, ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಪರ ಅರ್ಷದೀಪ್‌ ಸಿಂಗ್‌ ಅಮೋಘ ಬೌಲಿಂಗ್ ಪ್ರದರ್ಶನ ನೀಡಿ ಅಬ್ಬರಿಸಿದರು.

ಈಗಾಗಲೇ ಟಿ20 ಕ್ರಿಕೆಟ್‌ನಲ್ಲಿ ತಮ್ಮ ಛಾಪು ಮೂಡಿಸಿರುವ ಅರ್ಷದೀಪ್‌ ಸಿಂಗ್, ಈ ಫಾರ್ಮೆಟ್‌ನಲ್ಲಿ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌. ಇವರು ವೇಗದ ದಾಳಿ ಹಾಗೂ ಸ್ವಿಂಗ್‌ ಬೌಲಿಂಗ್‌ನಿಂದ ಎದುರಾಳಿ ಬೌಲರ್‌ಗಳನ್ನು ಕಾಡಬಲ್ಲರು. ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲೂ ಅರ್ಷದೀಪ್ ಸಿಂಗ್ ಅಮೋಘ ಬೌಲಿಂಗ್ ನಡೆಸಿದರು. ಅಲ್ಲದೆ ತಾವು ಎಸೆದ ಮೊದಲ ಓವರ್‌ನ ಎರಡನೇ ಎಸೆತದಲ್ಲಿ ಕ್ವಿಂಟನ್‌ ಡಿ ಕಾಕ್‌ ಅವರನ್ನು ಔಟ್ ಮಾಡಿದರು.

Arshdeep Singh equals Bhuvneshwar Kumar s T20I record in powerplay against South Africa

ಕಟಕ್‌ನಲ್ಲಿ ಅರ್ಷದೀಪ್‌ ಸಿಂಗ್ ಕ್ವಿಂಟನ್ ಡಿ ಕಾಕ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ಅವರನ್ನು ಔಟ್ ಮಾಡಿದರು. ಈ ಮೂಲಕ ಅರ್ಷದೀಪ್ ಸಿಂಗ್‌ ಚೆಂಡಿನೊಂದಿಗೆ ಗಮನಾರ್ಹ ಸಾಧನೆ ಮಾಡಿದರು. ಈ ಮೂಲಕ ಅರ್ಷದೀಪ್‌ ಸಿಂಗ್ ಮೊದಲ ಪವರ್ ಪ್ಲೇ ( 1 ರಿಂದ 6 ಓವರ್) ನಲ್ಲಿ ಅತಿ ಹೆಚ್ಚು ವಿಕೆಟ್‌ ಪಡೆದ ಭಾರತೀಯ ಬೌಲರ್‌ಗಳ ಪಟ್ಟಿಯಲ್ಲಿ ಜಂಟಿ ಅಗ್ರ ಸ್ಥಾನ ಪಡೆದರು. ಈ ಮೂಲಕ ಅರ್ಷದೀಪ್ ಸಿಂಗ್‌ ಭುವನೇಶ್ವರ್ ಕುಮಾರ್ ಸಾಧನೆಯ ಸಮಕ್ಕೆ ನಿಂತರು. ಉಭಯ ಬೌಲರ್‌ಗಳ ಮೊದಲ 6 ಓವರ್‌ಗಳಲ್ಲಿ 47 ವಿಕೆಟ್‌ಗಳನ್ನು ಪಡೆದಿದ್ದಾರೆ. ಮುಂದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಭುವಿ ದಾಖಲೆಯನ್ನು ಮೀರಿ ನಿಲ್ಲುವ ಅವಕಾಶವನ್ನು ಹೊಂದಿದ್ದಾರೆ.

ಅರ್ಷದೀಪ್‌ ಸಾಧನೆ

ಅರ್ಷದೀಪ್ ಸಿಂಗ್‌ ಟಿ20 ಕ್ರಿಕೆಟ್‌ನಲ್ಲಿ ಭಾರತದ ಪರ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. ಇವರು ಭಾರತದ ಪರ ಚುಟುಕು ಫಾರ್ಮೆಟ್‌ನಲ್ಲಿ 100 ವಿಕೆಟ್‌ಗಳನ್ನು ಪಡೆದ ಮೊದಲ ಬೌಲರ್ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ. ಈ ಮೊದಲು ಭಾರತೀಯ ಬೌಲರ್‌ ಯಾರು ಈ ಸಾಧನೆ ಮಾಡಿರಲಿಲ್ಲ. 2022ರಲ್ಲಿ ಭಾರತದ ಪರ ಪದಾರ್ಪಣೆ ಮಾಡಿದ ಅರ್ಷದೀಪ್‌ ಈಗ ಭಾರತ ತಂಡದ ಅವಿಭಾಜ್ಯ ಅಂಗವಾದರು. ಈಗ ಹೊಸ ಚೆಂಡಿನಲ್ಲಿ ಇವರು ಬುಮ್ರಾ ಅವರಿಗೆ ಉತ್ತಮ ಸಾಥ್ ನೀಡಲಿದ್ದಾರೆ.

ಭಾರತ ಹಾಗೂ ದಕ್ಷಿಣ ಆಫ್ರಿಕಾ ನಡುವಣ ಎರಡನೇ ಟಿ20 ಪಂದ್ಯ ನ್ಯೂ ಚಂಡೀಗಢ್‌ನಲ್ಲಿ ಡಿಸೆಂಬರ್ 11 ರಂದು ನಡೆಯಲಿದೆ. ಈ ಪಂದ್ಯದಲ್ಲಿ ಸೂರ್ಯ ಪಡೆ ಗೆಲುವು ದಾಖಲಿಸಿ, ಸರಣಿಯಲ್ಲಿ 2-0 ಮುನ್ನಡೆ ಸಾಧಿಸುವ ಆಸೆಯನ್ನು ಹೊಂದಿದ್ದು, ಪ್ರವಾಸಿ ತಂಡ ಗೆದ್ದು ಸರಣಿಯಲ್ಲಿ ಸಮಬಲ ಸಾಧಿಸುವ ಇರಾದೆಯನ್ನು ಹೊಂದಿದೆ.

Story first published: Wednesday, December 10, 2025, 11:16 [IST]
Other articles published on Dec 10, 2025
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+