Arshdeep Singh: ಪಾಕ್ ವೇಗಿಯ ದಾಖಲೆ ಮುರಿಯಲಿದ್ದಾರೆ ಅರ್ಷದೀಪ್ ಸಿಂಗ್
ಭಾರತ ಹಾಗೂ ಇಂಗ್ಲೆಂಡ್ ನಡುವಣ ಮೂರನೇ ಟಿ20 ಪಂದ್ಯ ಮಂಗಳವಾರ ರಾಜ್‌ಕೋಟ್‌ನಲ್ಲಿ ನಡೆಯಲಿದೆ. ಈ ಪಂದ್ಯ ಗೆದ್ದು ಸರಣಿ ವಶಕ್ಕೆ ಪಡೆದುಕೊಳ್ಳು ಪ್ಲ್ಯಾನ್ ಟೀಮ್ ಇಂಡಿಯಾದ್ದಾಗಿದೆ. ಟೀಮ್ ಇಂಡಿಯಾ ಪರ ಈ ಪಂದ್ಯದಲ್ಲಿ ಸ್ಟಾರ್ ಆಟಗಾರರು ಕಣಕ್ಕೆ ಇಳಿಯಲಿದ್ದಾರೆ. ಈ ವೇಳೆ ಎಲ್ಲರ ಕಣ್ಣು ಸೂಪರ್ ಸ್ಟಾರ್ ಬೌಲರ್ ಅರ್ಷದೀಪ್ ಸಿಂಗ್ ಅವರ ಮೇಲೆ ನೆಟ್ಟಿರಲಿದೆ.
ಅರ್ಷದೀಪ್ ಸಿಂಗ್ ಟೀಮ್ ಇಂಡಿಯಾದ ಭರವಸೆಯ ಎಡಗೈ ವೇಗಿ. ಇವರು ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡು, ತಂಡದಲ್ಲಿ ತಮ್ಮ ಸ್ಥಾನವನ್ನು ಖಚಿತ ಪಡಿಸಿಕೊಂಡಿರುವ ಆಟಗಾರರ. 2022ರಲ್ಲಿ ಭಾರತದ ಪರ ಟಿ20 ಕ್ರಿಕೆಟ್ ಆಡುವ ಅವಕಾಶ ಪಡೆದ ಅರ್ಷದೀಪ್ ಮೂರೇ ವರ್ಷದಲ್ಲಿ, ತಂಡದ ಅವಿಭಾಜ್ಯ ಅಂಗವಾದರು. ತಮ್ಮ ಬಿಗುವಿನ ದಾಳಿಯಿಂದ ಎದುರಾಳಿಗಳನ್ನು ಕಾಡುವ ಅರ್ಷದೀಪ್, ಟೀಮ್ ಇಂಡಿಯಾದ ಪರ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್.

ಪಾಕ್ ಬೌಲರ್ ದಾಖಲೆಗೆ ಅಪಾಯ
ಕೋಲ್ಕತ್ತಾದಲ್ಲಿ ನಡೆದಿದ್ದ ಟಿ20 ಪಂದ್ಯದಲ್ಲಿ ಅರ್ಷದೀಪ್ ಸಿಂಗ್, ತಮ್ಮ ಅಮೋಘ ದಾಳಿಯ ಮೂಲಕ ಎರಡು ವಿಕೆಟ್ ಪಡೆದಿದ್ದರು. ಈ ಮೂಲಕ ಸ್ಪಿನ್ ಬೌಲರ್ ಯುಜುವೇಂದ್ರ ಚಹಾಲ್ ಅವರ ದಾಖಲೆಯನ್ನು ಅಳಿಸಿ, ಭಾರತದ ಪರ ಗರಿಷ್ಠ ವಿಕೆಟ್ ಪಡೆದ ಬೌಲರ್ ಎಂಬ ಖ್ಯಾತಿಯನ್ನು ಪಡೆದಿದ್ದರು. ಈಗ ಮೂರನೇ ಟಿ20 ಪಂದ್ಯದಲ್ಲಿ ಮತ್ತೊಂದು ದಾಖಲೆಯ ಮೇಲೆ ಅರ್ಷದೀಪ್ ಕಣ್ಣು ನೆಟ್ಟಿದ್ದಾರೆ.
ಅರ್ಷದೀಪ್ ಸಿಂಗ್ ರಾಜ್‌ಕೋಟ್‌ನಲ್ಲಿ ಪಾಕ್ ವೇಗಿ ಹ್ಯಾರಿಸ್ ರೌಫ್ ಅವರ ದಾಖಲೆಯನ್ನು ಅಳಿಸಿ ಹಾಕಬಹುದು. ಹ್ಯಾರೀಸ್ ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ 100 ವಿಕೆಟ್ ಪೂರೈಸಿದ ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಈಗ ಇವರ ದಾಖಲೆಯನ್ನು ಅಳಿಸಲು ಅರ್ಷದೀಪ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ. 25 ವರ್ಷದ ಯುವ ಆಟಗಾರ 62 ಟಿ20 ಪಂದ್ಯಗಳಲ್ಲಿ 18.13 ಎಕಾನಮಿಯಲ್ಲಿ 98 ವಿಕೆಟ್ ಪಡೆದಿದ್ದಾರೆ. ಇನ್ನು ಎರಡು ವಿಕೆಟ್ ಪಡೆದರೆ ಭಾರತದ ಪರ ಚುಟುಕು ಕ್ರಿಕೆಟ್‌ನಲ್ಲಿ ನೂರು ವಿಕೆಟ್ ಪಡೆದ ಸಾಧನೆ ಬರೆಯಲಿದ್ದಾರೆ.

ವೇಗವಾಗಿ ನೂರು ವಿಕೆಟ್ ಪಡೆದವರು ಯಾರು?
ಟಿ20 ಕ್ರಿಕೆಟ್‌ನಲ್ಲಿ ವೇಗವಾಗಿ ನೂರು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಪಾಕ್ ತಂಡ ಶಾಹಿನ್ ಶಾ ಆಫ್ರಿದಿ ಮೊದಲ ಸ್ಥಾನದಲ್ಲಿದ್ದಾರೆ. ಇವರು 53 ಪಂದ್ಯಗಳಲ್ಲಿ ಈ ಸಾಧನೆ ಮಾಡಿದ್ದಾರೆ. ಎರಡನೇ ಸ್ಥಾನದಲ್ಲಿ ನೇಪಾಳ ಬೌಲರ್ ಸಂದೀಪ್ ಲಮಿಚಾನೆ ಇದ್ದು, ಇವರು 54 ಪಂದ್ಯಗಳಲ್ಲಿ 100 ವಿಕೆಟ್ ಪಡೆದಿದ್ದಾರೆ. 63 ಪಂದ್ಯಗಳಲ್ಲಿ ಶ್ರೀಲಂಕಾದ ವನಿಂದು ಹಸರಂಗಾ ಈ ಸಾಧನೆ ಮಾಡಿದ್ದಾರೆ. ಬಳಿಕ ಬರುವ ಹ್ಯಾರಿಸ್ ರೌಫ್ ಈ ದಾಖಲೆಯನ್ನು ಮಾಡಲು 71 ಪಂದ್ಯವನ್ನು ತೆಗೆದುಕೊಂಡಿದ್ದಾರೆ. ಅರ್ಷದೀಪ್ ಈ ಸಾಧನೆಯನ್ನು ಬ್ರೇಕ್ ಮಾಡುವತ್ತ ಚಿತ್ತ ನೆಟ್ಟಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications